ಕೋವಿಡ್ ನಿಯಮ ಉಲ್ಲಂಘನೆ; ಕಳೆದ 5 ದಿನದಲ್ಲಿ 3.18 ಕೋಟಿ ರೂ ದಂಡ ಹಾಕಿದ ಪೊಲೀಸ್!
ದೇಶದಲ್ಲಿ ಕೊರೋನಾ ಪ್ರಕರಣ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೀಗಾಗಿ ದೇಶದ ಬಹುತೇಕ ಕಡೆಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಲಾಗಿದೆ. ಕೋವಿಡ್ ಪ್ರೋಟೋಕಾಲ್ ಮುರಿದ ವಾಹನ ಸವಾರರಿಗೆ ಪೊಲೀಸರು ದಂಡ ಹಾಕುತ್ತಿದ್ದಾರೆ. ಕಳೆದ 5 ದಿನದಲ್ಲಿ ಬರೋಬ್ಬರಿ 3.18 ಕೋಟಿ ರೂಪಾಯಿ ದಂಡ ಹಾಕಲಾಗಿದೆ.
ನವದೆಹಲಿ(ಎ.02): ಕಳೆದ 5 ದಿನದಲ್ಲಿ ಮೋಟಾರು ವಾಹನ ಇಲಾಖೆ ಬರೋಬ್ಬರಿ 3.18 ಕೋಟಿ ರೂಪಾಯಿ ದಂಡ ಹಾಕಿದೆ. ದೆಹಲಿಯಲ್ಲಿ ಕೊರೋನಾ ವೈರಸ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಈ ದಂಡ ಹಾಕಲಾಗಿದೆ. ಕೊರೋನಾ ಹೆಚ್ಚಾದ ಕಾರಣ ಹೋಳಿ ಹಬ್ಬ ಸೇರಿದಂತೆ ಹಲವು ಹಬ್ಬ ಹಾಗೂ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ; ಯುವಕರಿಗೆ ಬಿತ್ತು ದುಬಾರಿ ಫೈನ್!
ದೆಹಲಿಯಲ್ಲಿ ಕಳೆದ 5 ದಿನದಲ್ಲಿ 18,500 ಚಲನ್ ನೀಡಲಾಗಿದೆ. ಅತೀ ಹೆಚ್ಚು ಚಲನ್ ನೀಡಿರುವುದು ಉತ್ತರ ದೆಹಲಿಯಲ್ಲಿ. ಇನ್ನು ಅತೀ ಕಡಿಮೆ ಪೂರ್ವ ದೆಹಲಿಯಲ್ಲಿ ಚಲನ್ ನೀಡಲಾಗಿದೆ. ದೆಹಲಿಯಲ್ಲಿ ಕಳೆದ 5 ದಿನ ಪೊಲೀಸರು ನೀಡಿದ ಚಲನ್ ಸಂಖ್ಯೆ ವಿವರ ಇಲ್ಲಿದೆ.
ಮಾರ್ಚ್ 25: 4,018
ಮಾರ್ಚ್ 26: 3,877
ಮಾರ್ಚ್ 27: 4,034
ಮಾರ್ಚ್ 28: 3,834
ಮಾರ್ಚ್ 29: 2,758
ಕಳೆದ 5 ದಿನದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಪೊಲೀಸರು ನೀಡಿದ ಚಲನ್ ಒಟ್ಟು ಮೌಲ್ಯ 3.18 ಕೋಟಿ ರೂಪಾಯಿ. ಸಿಸಿಟಿವಿ ದೃಶ್ಯ ಆಧರಿಸಿ ಕೂಡ ಇ ಚಲನ್ ನೀಡಲಾಗಿದೆ.
ಡ್ರೈವಿಂಗ್ ಲೆಸನ್ಸ್ ಸೇರಿ ವಾಹನ ದಾಖಲೆ ಮಾನ್ಯತೆ ಅವಧಿ ಮತ್ತೆ ವಿಸ್ತರಿಸಿದ ಕೇಂದ್ರ!.
ಕೊರೋನಾ ಹೆಚ್ಚಾಗುತ್ತಿರುವ ಕಾರಣ ಕಟ್ಟು ನಿಟ್ಟಾಗಿ ನಿಯಮ ಪಾಲನೆ ಮಾಡಬೇಕು. ಆದರೆ ದೆಹಲಿಯಲ್ಲಿ ಲಾಕ್‌ಡೌನ್ ಸಂಭವ ಇಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಹೀಗಾಗಿ ಟ್ರಾಫಿಕ್ ಪೊಲೀಸರು ವಾಹನ ಸವಾರರು ಕೋವಿಡ್ ನಿಯಮ ಉಲ್ಲಂಘಿಸಿದರೆ ದುಬಾರಿ ದಂಡ ಹಾಕುತ್ತಿದ್ದಾರೆ.