ಬೆಂಗಳೂರಿನ ಖ್ಯಾತ ಬೈಕ್ ರೈಡರ್ ರಾಜಸ್ಥಾನದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪಿದ್ದಾರೆ. ರೈಡರ್ ಸಾವಿಗೆ ಕಾರಣವಾಗಿದ್ದು ಒಂಟೆ!

ಜೈಪುರ(ಜ.15): ಬೈಕ್ ಮೂಲಕ ಟ್ರಿಪ್ ಹೋಗುತ್ತಿದ್ದ ಬೆಂಗಳೂರಿನ ಖ್ಯಾತ ರೈಡರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಶ್ರೀನಿವಾಸನ್ ಹಾಗೂ ಮೂವರು ಸ್ನೇಹಿತರೊಂದಿಗೆ ರಾಜಸ್ಥಾನಕ್ಕೆ ಟ್ರಿಪ್ ಹೋಗಿದ್ದರು. ಜೈಸಾಲ್ಮೆರ್‌ನತ್ತ ಪ್ರಯಾಣ ಬೆಳೆಸಿದ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ.

View post on Instagram

ಭಾರತದ ಏಕೈಕ ಬುದ್ಧ್ ಇಂಟರ್‌ನ್ಯಾಶಲ್ ರೇಸ್ ಟ್ರ್ಯಾಕ್‌ಗೆ ಬೀಗ!.

ಪ್ರಯಾಣದ ವೇಳೆ ಶ್ರೀನಿವಾಸನ್ ತಮ್ಮ ಬೈಕ್‌ನಲ್ಲಿ ಮುಂಭಾಗದಲ್ಲಿ ಚಲಿಸುತ್ತಿದ್ದರೆ, ಶ್ರೀನಿವಾಸನ್ ಗೆಳೆಯರು ಹಿಂಭಾಗದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ದಿಢೀರ್ ಆಗಿ ಒಂಟೆಯೊಂದು ರಸ್ತೆಗೆ ಬಂದಿದೆ. ವೇಗದಲ್ಲಿದ್ದ ಶ್ರೀನಿವಾಸನ್ ಬ್ರೇಕ್ ಹಿಡಿದರೂ ಬೈಕ್ ನಿಲ್ಲಲಿಲ್ಲ. ನೇರವಾಗಿ ಒಂಟೆಗೆ ಹೋಗಿ ಗುದ್ದಿದೆ. ಪರಿಣಾಮ ಶ್ರೀನಿವಾಸನ್ ನೆಲಕ್ಕೆ ಅಪ್ಪಳಿಸಿದ್ದಾರೆ.

View post on Instagram

ತಲೆಗೆ ತೀವ್ರವಾದ ಗಾಯಗಳಾಗಿದೆ. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ತೀವ್ರ ರಕ್ತ ಸ್ರಾವ ಹಾಗೂ ಅಪಘಾತದ ತೀವ್ರತೆಗೆ ಶ್ರೀನಿವಾಸನ್ ಪ್ರಾಣ ಪಕ್ಷಿ ಹಾರಿಹೋಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶ್ರೀನಿವಾಸನ್ ಪಾರ್ಥೀವ ಶರೀರವನ್ನು ರಾಜಸ್ಥಾನ ಪೊಲೀಸರು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

ಜನವರಿ 23 ರಂದು ಶ್ರೀನಿವಾಸನ್ ಹಾಗೂ ಮತ್ತಿಬ್ಬರು ಗೆಳೆಯರ ರೋಡ್ ಟ್ರಿಪ್ ಬೆಂಗಳೂರಿನಲ್ಲಿ ಅಂತ್ಯವಾಗಬೇಕಿತ್ತು. ಆದರೆ ರಾಜಸ್ಥಾನದಲ್ಲಿನ ದುರಂತದಿಂದ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ.