Asianet Suvarna News Asianet Suvarna News

Solar delineators ಬೆಂಗಳೂರಲ್ಲಿ ಅಪಘಾತ ತಡೆಯಲು ಸೋಲಾರ್ ಡಿಲೈನೇಟರ್‌ ಅಳವಡಿಕೆ!

  • ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಅಪಘಾತ ಸಂಖ್ಯೆ
  • ನಗರದಲ್ಲಿ ಸೋಲಾರ್ ಡಿಲೈನೇಟರ್‌ಗಳ ಅಳವಡಿಕೆ
  • ನಗರ ಸಂಚಾರಿ ಪೊಲೀಸರಿಂದ ಮಹತ್ವದ ಕಾರ್ಯ
Bangalore city police installing solar delineators and bollards to avoid accidents ckm
Author
Bengaluru, First Published Jun 6, 2022, 4:33 PM IST

ಬೆಂಗಳೂರು(ಜೂ.06): ಅತೀ ವೇಗದ ಚಾಲನೆ, ಸೂಚನಾ ಫಲಕಗಳ ನಿರ್ಲಕ್ಷ್ಯ, ಟ್ರಾಫಿಕ್ ನಿಯಮ ಉಲ್ಲಂಘನೆಗಳಿಂದ ಬೆಂಗಳೂರಿನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿನ ಅಪಘಾತ ತಡೆಗಟ್ಟಲು ಇದೀಗ ಸಂಚಾರಿ ಪೊಲೀಸರು ವಿಶೇಷ ಗಮನ ಹರಿಸಿದ್ದಾರೆ. ಇದಕ್ಕಾಗಿ  ವಿವಿಧ ಜಂಕ್ಷನ್‌ಗಳಲ್ಲಿ ರಸ್ತೆಗಳಲ್ಲಿ ಸೋಲಾರ್ ಡಿಲೈನೇಟರ್‌ಗಳ ಅಳವಡಿಕೆ ಮತ್ತು ರಸ್ತೆ ಪಕ್ಕದಲ್ಲಿ ಹಾಗೂ ಸಿಗ್ನಲ್ ಗಳ ಬಳಿ ಕೆಂಪು, ಹಳದಿ ಮತ್ತು ಬಿಳಿ ರೇಡಿಯಂ ಸ್ಟಿಕ್ಕರ್ ಗಳನ್ನ ಅಂಟಿಸಿರುವ ಬೊಲಾರ್ಡ್ ಅಳವಡಿಸಿದ್ದಾರೆ.

ಇದರಿಂದ ರಾತ್ರಿ ವೇಳೆ ಸಂಭವಿಸುತ್ತಿರುವ ಅಪಘಾತಗಳ ಪ್ರಮಾಣ ತಗ್ಗಿಸಲು ಮಹತ್ವದ ಕ್ರಮಕೈೊಳ್ಳಲಾಗಿದೆ. ಮಳೆಗಾಲದ ಸಂದರ್ಭದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಹೀಗಾಗಿ ನಗರದಲ್ಲಿ ಮಿಡೀಯನ್ ಗಳಿಗೆ ಮಿಟುಕಿಸುವ ಸೋಲಾರ್ ಡಿಲೈನೇಟರ್ ಅಳವಡಿಸಿ ಆರಂಭಿಸಲಾಗಿದೆ. ಹಲವು ಭಾಗಗಳಲ್ಲಿ ಈಗಾಗಲೇ ಈ ಕಾರ್ಯ ಪೂರ್ಣಗೊಂಡಿದೆ. 

ಬೆಂಗಳೂರು ವಾಹನ ಸವಾರರ ಟ್ರಾಫಿಕ್, ರಸ್ತೆ ಚಿಹ್ನೆ ಜ್ಞಾನ ಎಷ್ಟಿದೆ? ಅಚ್ಚರಿ ನೀಡಿದ NBF ಸಮೀಕ್ಷೆ!

ನಗರದ ಬಹುತೇಕ ಕಡೆಗಳಲ್ಲಿ ರಸ್ತೆ , ಚರಂಡಿ, ಸೇತುವೆ, ಅಂಡರ್ ಪಾಸ್ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿದೆ. ಇದರಿಂದ ಅಪಘಾತಗಳ ಪ್ರಮಾಣವೂ ಹೆಚ್ಚಾಗಿದೆ. ರಸ್ತೆ ಅಗಲೀಕರಣ, ಮೇಲ್ಸೇತುವೆಗಳ ನಿರ್ಮಾಣಹಂತದಲ್ಲಿರುವ ಹಿನ್ನೆಲೆ ರಸ್ತೆಗಳಲ್ಲಿ ಮೀಡಿಯನ್ ಅಳವಡಿಕೆ ಹೆಚ್ಚಳವಾಗಿದೆ.  ವಾಹನ ಸವಾರರ ನಿರ್ಲ್ಯಕ್ಷತನದಿಂದ ಮೀಡಿಯನ್‌ಗೆ ಡಿಕ್ಕಿ ಸಾಧ್ಯತೆ ಹೆಚ್ಚಳವಾಗಿದೆ. ಇದಲ್ಲದೆ ಮಾರಣಾಂತಿಕವಲ್ಲದ ಸಣ್ಣ ಪುಟ್ಟ ಅಪಘಾತಗಳು ಸಹ ಹೆಚ್ಚಾಗುತ್ತಿವೆ.

ಸೋಲಾರ್ ಡೆಲಿನೇಟರ್‌ಗಳು ಮತ್ತು ರೇಡಿಯಂ ಸ್ಟಿಕ್ಕರ್ ಗಳಿರುವ ಬೊಲ್ಲಾರ್ಡ್‌ಗಳನ್ನು ಅಳವಡಿಸುವುದರಿಂದ ಈ ಅಪಘಾತಗಳನ್ನು ಬಹಳಷ್ಟು ತಡೆಯಬಹುದು ಎಂದು ಸಂಚಾರಿ ವಿಭಾಗದ ಡಿಸಿಪಿ (ಪೂರ್ವ) ಕುಲ್ದೀಪ್ ಕುಮಾರ್ ಹೇಳಿದ್ದಾರೆ. ಅಳವಡಿಕೆ ಕಾರ್ಯ ಶುರುವಾಗಿದ್ದು ಬನಶಂಕರಿ, ಜಯನಗರ, ಪೀಣ್ಯದಲ್ಲಿ ಈ ಸೂಚಕಗಳನ್ನು ಅಳವಡಿಸಲಾಗುತ್ತಿದೆ ಎಂದಿದ್ದಾರೆ.

 

 

ಒಂದೇ ಬೈಕ್‌ನಲ್ಲಿ ಆರು ಜನರ ಪ್ರಯಾಣ: ವಿಡಿಯೋ ವೈರಲ್

ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ
ಮೂಡಲಪಾಳ್ಯ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಯುವಕ ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪಟ್ಟೇಗಾರಪಾಳ್ಯದ ಬಿ.ಸಿ.ಮಿಥುನ್‌ (18) ಮೃತ ದುರ್ದೈವಿ. ಘಟನೆಯಲ್ಲಿ ಗಾಯಗೊಂಡಿರುವ ಮೃತನ ಸ್ನೇಹಿತ ತೇಜಸ್‌ ಹಾಗೂ ಮತ್ತೊಂದು ಬೈಕ್‌ ಸವಾರ ಕೆಂಪೇಗೌಡ ನಗರದ ಕಿರಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತನ್ನ ಸ್ನೇಹಿತನ ಜತೆ ಕಾವೇರಿ ಲೇಔಟ್‌ 6ನೇ ಅಡ್ಡರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆದ್ದಾರಿಯಲ್ಲಿ ವಾಹನಗಳ ಸರಣಿ ಅಪಘಾತ
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸರಣಿ ಅಪಘಾತದಿಂದಾಗಿ ಪ್ರಯಾಣಿಕರಿಗೆ ಸಣ್ಣಪುಟ್ಟಗಾಯಗಳಾಗಿರುವ ಘಟನೆ ಕಾವೇರಿ ನದಿ ಉತ್ತರ ಸೇತುವೆ ಬಳಿ ನಡೆದಿದೆ. ಭಾನುವಾರ ರಜಾದಿನ ವಾಗಿರುವುದರಿಂದ ಪ್ರವಾಸಿ ತಾಣಗಳ ನೋಡಲು ಸಾವಿರಾರು ವಾಹನಗಳ ಮೂಲಕ ಪಟ್ಟಣಕ್ಕೆ ಪ್ರವಾಸಿಗರು ಆಗಮಿಸಿದರು. ಒಂದರ ಹಿಂದೆ ಒಂದು ವಾಹನಗಳು ಡಿಕ್ಕಿ ಹೊಡೆದುಕೊಂಡ 4 ಕಾರುಗಳು ಡಿಕ್ಕಿಯಾಗಿ ಪ್ರವಾಸಿಗರಿಗೆ ಸಣ್ಣ ಪುಟ್ಟಗಾಯಗಳಾಗಿವೆ. ನಂತರ ಕಾರಿನಲ್ಲಿದ್ದ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.

ಮೈಸೂರು- ಬೆಂಗಳೂರು ಹೆದ್ದಾರಿಯ ಉತ್ತರ ಕಾವೇರಿ ನದಿಯ ಸೇತುವೆ ಬಳಿ ಬೆಂಗಳೂರಿನಿಂದ ಮೈಸೂರಿಗೆ ಸಾಲು ಸಾಲಾಗಿ ಆಗಮಿಸಿದ ಕಾರುಗಳು ವೇಗವಾಗಿ ಬಂದು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತಕ್ಕೆ ಕಾರಣವಾಗಿದೆ. ನಾಲ್ಕು ಕಾರುಗಳ ಜಖಂಗೊಂಡು ನಿಂತಿದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಾಗಿ ಮೈಲಿಗಟ್ಟಲೆ ವಾಹನಗಳು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಕಾರುಗಳ ತೆರವು ಮಾಡಿ ರಸ್ತೆ ಸುಗಮಗೊಳಿಸಿದ್ದಾರೆ. ಶ್ರೀರಂಗಪಟ್ಟಣ ಟೌನ… ಪೊಲೀಸ… ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios