ಟ್ರಕ್ ಚಾಲಕರಿಗೆ ಕೇಂದ್ರ ಸರ್ಕಾರ ಕೊಡುಗೆ, ಸುಗಮ ಸಂಚಾರಕ್ಕೆ ಹೊಸ ನಿಯಮ!

ಟ್ರಕ್ ಚಾಲಕರ ಸುಖಕರ ಚಾಲನೆ ಹಾಗೂ ಪ್ರಯಾಣಕ್ಕೆ ಕೇಂದ್ರ ಸರ್ಕಾರ ಮಹತ್ವದ ತಿದ್ದುಪಡಿ ಮಾಡಿದೆ. ಭಾರತೀಯ ಟ್ರಕ್‌ಗಳಿಗೆ ಎಸಿ ಕ್ಯಾಬಿನ್ ಕಡ್ಡಾಯ ಮಾಡಿದೆ. 

AC cabin must for all trucks from 2025 ministry of road transport approves proposal ckm

ನವದೆಹಲಿ(ಜೂ.21):  ಟ್ರಕ್ ಚಾಲಕರಿಗಾಗಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಟ್ರಕ್ ಚಾಲಕರ ಸುಗಮ ಸಂಚಾರ ಹಾಗೂ ಚಾಲನೆಗಾಗಿ ಇದೀಗ ಕೆಲ ತಿದ್ದುಪಡಿಗಳನ್ನು ಕೇಂದ್ರ ಸರ್ಕಾರ ಮಾಡಿದೆ. ಟ್ರಕ್‌ಗಳ ಕ್ಯಾಬಿನ್‌ನಲ್ಲಿ ಏರ್ ಕಂಡೀಷನ್ ಕಡ್ಡಾಯ ಮಾಡಿದೆ. ಈ ಮೂಲಕ ಟ್ರಕ್ ಚಾಲಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ. ಟ್ರಕ್ ಚಾಲಕರ ಸಂಘ, ಕೈಗಾರಿಕೆ, ಆಟೋಮೊಬೈಲ್ ಕ್ಷೇತ್ರದ ಹಲವು ಪ್ರಮುಖರ ಜೊತೆಗೆ ಕಳೆದೊಂದು ವರ್ಷದಿಂದ ಸತತ ಸಭೆ ನಡೆಸಿರುವ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಘೋಷಣೆ ಮಾಡಿದ್ದಾರೆ.

ಟ್ರಕ್ ಚಾಲಕರು ಸತತ ಪ್ರಯಾಣ, ದುರ್ಗಮ ಹಾದಿ, ಸುದೀರ್ಘ ಚಾಲನೆಗಳಿಂದ ದಣಿಯುವುದು ಹೆಚ್ಚು. ಪ್ರಸ್ತುತ ಹವಾಮಾನಗಳು ಚಾಲಕರನ್ನು ಮತ್ತಷ್ಟು ಕಂಗೆಡಿಸುತ್ತದೆ. ಇದರಿಂದ ಟ್ರಕ್ ಚಾಲಕರು ಕಠಿಣ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಇವರ ಚಾಲನೆ ಹಾಗೂ ಪ್ರಯಾಣ ಸುಗಮವಾಗಿಸಲು 2025ರಿಂದ ಎಲ್ಲಾ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್ ಕಡ್ಡಾಯ ಮಾಡಲಾಗಿದೆ.

ಅಮೆರಿಕದಲ್ಲೂ ರಾಹುಲ್‌ ಟ್ರಕ್‌ ರೈಡ್‌: ಭಾರತೀಯ ಮೂಲದ ಚಾಲಕನ ಲಾರಿಯಲ್ಲಿ ಸಿಧು ಮೂಸೇವಾಲಾ ಹಾಡು ಕೇಳಿ ಎಂಜಾಯ್‌!

ಟ್ರಕ್ ಕ್ಯಾಬಿನ್‌ಗಳಲ್ಲಿ ಎಸಿ ಕಡ್ಡಾಯಮಾಡುವುದರಿಂದ ಚಾಲಕರ ಸುದೀರ್ಘ ಪ್ರಯಾಣಕ್ಕೆ ಅನುಕೂಲವಾಗಲಿದೆ. ಇನ್ನುಚಾಲಕರು ಕ್ಯಾಬಿನ್‌ನಲ್ಲೇ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ. ವೋಲ್ವೋ, ಸ್ಕಾನಿಯಾ ಸೇರಿದಂತೆ ಕೆಲ ಕಂಪನಿಗಳು ತಮ್ಮ ಟ್ರಕ್‌ಗಳಲ್ಲಿ ಈಗಾಗಲೇ ಎಸಿ ಕ್ಯಾಬಿನ್ ಪರಿಚಯಿಸಿದೆ. ಆದರೆ ಭಾರತದಲ್ಲಿ ಟ್ರಕ್‌ಗಳಲ್ಲಿ ಎಸಿ ಕ್ಯಾಬಿನ್‌ಗಳಿಲ್ಲ. ಕೆಲವರು ಖರೀದಿ ಬಳಿಕ ಮಾಡಿಫಿಕೇಶನ್ ಮಾಡಿ ಎಸಿ ಕ್ಯಾಬಿನ್ ಮಾಡಿಕೊಂಡಿದ್ದಾರೆ. ಆದರೆ 2025ರಿಂದ ಯಾವುದೇ ಟ್ರಕ್ ಖರೀದಿಸಿದರೂ ಎಸಿ ಕ್ಯಾಬಿನ್ ಕಡ್ಡಾಯವಾಗಿ ಇರಲಿದೆ.

ಟ್ರಕ್ ಚಾಲಕರಿಗೆ ಎಸಿ ಕ್ಯಾಬಿನ್ ಮಾತ್ರವಲ್ಲ, ಇವರ ಕೆಲಸ ಸಮಯದ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಹಲವ ಚಾಲಕರು ಪ್ರತಿ ದಿನ 14 ರಿಂದ 16 ಗಂಟೆ ಕೆಲಸ ಮಾಡುತ್ತಾರೆ. ಸರಕು ಸಾಗಾಣೆ ಸೇರಿದಂತೆ ಇತರ ವಸ್ತುಗಳ ಸಾಗಣೆ ಚಾಲಕರು ಸುದೀರ್ಘ ಅವಧಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಚಾಲಕರ ಕೆಲಸದ ಸಮಯ ಮೀರದಂತೆ, ಅವರ ಸುರಕ್ಷತೆಗೆ ಅತ್ಯವಶ್ಯಕ ಕ್ರಮಗಳನ್ನು ಕೈಗೊಳ್ಳಲು ಸಚಿವ ನಿತಿನ್ ಗಡ್ಕರಿ ನಿರ್ಧರಿಸಿದ್ದಾರೆ.

 

ಟ್ರಕ್‌ನಲ್ಲಿ ರಾಹುಲ್‌ ಗಾಂಧಿ ಪ್ರಯಾಣ: ಕಾಂಗ್ರೆಸ್‌ ಸರ್ಕಾರ ಬಂದ್ರೆ ಲಾರಿ ಚಾಲಕರ ಸಮಸ್ಯೆ ಬಗೆಹರಿಸುವ ಭರವಸೆ

2016ರಲ್ಲಿ ನಿತಿನ್ ಗಡ್ಕರಿ ಟ್ರಕ್ ಚಾಲಕರ ಸುಗಮ ಸಂಚಾರಕ್ಕೆ ಕೆಲ ಬದಲಾವಣೆ ಪ್ರಸ್ತಾವನೆ ಮುಂದಿಟ್ಟಿದ್ದರು. ಆದರೆ ಟ್ರಕ್ ಕ್ಷೇತ್ರದ ದಿಗ್ಗಜರು ಹಲವು ಬದಲಾವಣೆ ಸೂಚಿಸಿದ್ದರು. ಇಷ್ಟೇ ಅಲ್ಲ ಎಸಿ ಕಡ್ಡಾಯಕ್ಕಿಂತ ಆಯ್ಕೆ ಮಾಡಿದರೆ ಒಳಿತು ಎಂಬ ಸಲಹೆ ಬಂದಿತ್ತು. ಆದರೆ ಚಾಲಕರ ಸುರಕ್ಷತೆಗೆ ಎಸಿ ಕ್ಯಾಬಿನ್, ಸಮಯದ ಅವಧಿ ಸೇರಿದಂತೆ ಇತರ ಕೆಲ ಬದಲಾವಣೆ ಅತ್ಯಗತ್ಯ ಎಂದು ಗಡ್ಕರಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios