ಥಾರ್, ಜೆಸಿಬಿ, ಲಾರಿ- ಏನ್ ಕೊಟ್ರೂ ಸಲೀಸಾಗಿ ಓಡಿಸ್ತಾರೆ ಈ 73 ವರ್ಷದ ಅಜ್ಜಿ! ಇವರ ಬಳಿ ಇದೆ 11 ರೀತಿಯ ವಾಹನ ಪರವಾನಗಿ

ರೋಲ್ಸ್ ರಾಯ್, ಜೆಸಿಬಿ, ಲಾರಿ, ಬಸ್ಸು, ಬುಲ್ಡೋಜರ್- ಏನ್ ಬೇಕಾದ್ರೂ ಇವ್ರ ಮುಂದಿಡಿ- ಅದೊಂದು ಆಟದ ವಸ್ತುವೇನೋ ಎಂಬಂತೆ ಕರತಲಾಮಲಕವಾಗಿ ಓಡಿಸ್ತಾರೆ 71 ವರ್ಷದ ಮಣಿಯಮ್ಮ. ಇವ್ರ ಬಳಿ 11 ರೀತಿಯ ವಾಹನಗಳಿಗೆ ಲೈಸೆನ್ಸ್ ಇದೆ!

73-year-old Mani Amma of Kerala has licence for 11 types of vehicles skr

ಬೈಕು, ಕಾರು ಓಡಿಸುವ ಆಸೆ ಎಲ್ಲರಿಗೂ ಇರುತ್ತದೆ. ಆದರೂ ಮಹಿಳೆಯರಿಗೆ ತಾವೂ ಕಾರು, ಬೈಕ್ ಓಡಿಸಿಕೊಂಡು ಆರೀಮಾಗಿ ಬೇಕೆಂದಲ್ಲಿ ತಿರುಗಬೇಕೆಂಬ ಆಸೆ ಇರುತ್ತದೆ. ಆದರೆ, ಬಹಳಷ್ಟು ಮಹಿಳೆಯರಿಗೆ ಭಯ ಅಡ್ಡಿಯಾದರೆ, ಮತ್ತೆ ಕೆಲವರಿಗೆ ಅದು ತಲೆಬಿಸಿಯ ಕೆಲಸ ಬೇಡವೇ ಬೇಡ ಎನಿಸುತ್ತದೆ. ಆದರೆ, ನಿಮಗೆಲ್ಲ ಬೇಕಾಗಿರುವುದ ಸ್ಪೂರ್ತಿಯಷ್ಟೇ.

ಇಂಥ ಮಹಿಳೆಯರೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ 73 ವರ್ಷದ ಅಜ್ಜಿ ಕೇರಳದ ಮಣಿಯಮ್ಮ ಅಲಿಯಾಸ್ ರಾಧಾಮಣಿ ಅಮ್ಮ. ಇವರ ಬಳಿ, ಒಂದೆರಡಲ್ಲಾ 11 ರೀತಿಯ ವಾಹನ ಓಡಿಸಲು ಪರವಾನಗಿಗಳಿವೆ. 
 11 ವಿವಿಧ ವಿಭಾಗಗಳಲ್ಲಿ ವಾಹನಗಳನ್ನು ಓಡಿಸಲು ಪರವಾನಗಿಯನ್ನು ಹೊಂದಿರುವ ಭಾರತದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಯೂ ಇದೆ. ಅವರ ಚಾಲನಾ ಕೌಶಲ್ಯ ನೆಕ್ಸ್ಟ್ ಲೆವೆಲ್‌ನದು. 

ಫೆ.11ಕ್ಕೆ ಶನಿ ಅಸ್ತ; 2 ತಿಂಗಳ ಕಾಲ ಹೈರಾಣಾಗಲಿದ್ದಾರೆ ಕುಂಭ ಸೇರಿ ಈ ಮೂರು ರಾಶಿಯವರು..

ಅವರ ಪರವಾನಗಿಯು ಸಾರಿಗೆ ಮತ್ತು ಸಾರಿಗೆಯೇತರ ವಾಹನಗಳನ್ನು ಓಡಿಸಲು ಅನುವು ಮಾಡಿಕೊಡುತ್ತದೆ. ಲಘು ಮೋಟಾರು ವಾಹನಗಳ ಜೊತೆಗೆ ಅವರು ಬಸ್‌ಗಳು, ಲಾರಿಗಳು ಮತ್ತು ಟ್ರಕ್‌ಗಳಂತಹ ಭಾರೀ ವಾಹನಗಳನ್ನು ಕೂಡಾ ಓಡಿಸಬಹುದು. ಜೊತೆಗೆ ಜೆಸಿಬಿಗಳು, ಕ್ರೇನ್‌ಗಳು, ರೋಡ್ ರೋಲರ್‌ಗಳು, ಫೋರ್ಕ್‌ಲಿಫ್ಟ್‌ಗಳು, ಟ್ರೇಲರ್‌ಗಳು ಮತ್ತು ಅಗೆಯುವ ಯಂತ್ರಗಳಂತಹ ಪುರುಷರ ವಿಶೇಷ ಡೊಮೇನ್ ಆಗಿರುವ ವಾಹನಗಳನ್ನು ಸಹ ಲೀಲಾಜಾಲವಾಗಿ ಓಡಿಸುತ್ತಾರೆ.

30 ವರ್ಷ ವಯಸ್ಸಿನವರಾಗಿದ್ದಾಗ ಚಾಲನೆ ಪ್ರಾರಂಭಿಸಿದ ರಾಧಾಮಣಿಯಮ್ಮ ಕಾರ್‌ನಿಂದ ಆರಂಭಿಸಿದರು. ಇದಕ್ಕೆ ಅವರ ಪತಿ ಟಿ.ವಿ.ಲಾಲ್ ಅವರ ಒತ್ತಾಯ ಕಾರಣವಾಗಿತ್ತು.ಪ್ರಾಸಂಗಿಕವಾಗಿ, ಅವರ ಪತಿ 1978ರಲ್ಲಿ ಕೊಚ್ಚಿಯಲ್ಲಿ ಡ್ರೈವಿಂಗ್ ಶಾಲೆಯನ್ನು ಪ್ರಾರಂಭಿಸಿದರು. ಇಲ್ಲಿ ಎಲ್ಲ ರೀತಿಯ ಹೆವಿ ವಾಹನ ಚಾಲನೆ ತರಬೇತಿ ನೀಡಲಾಗುತ್ತಿತ್ತು.

ಮೆಟಲ್ ಡಿಟೆಕ್ಟರ್ ಸಹಾಯದಿಂದ ಮಿಲೇನಿಯರ್ ಆದ ಟಿಕ್ ಟಾಕರ್!

ಆಗ ಮಹಿಳೆಯರು ಲಾರಿ ಮತ್ತು ಬಸ್ಸುಗಳನ್ನು ಓಡಿಸುವುದರಲ್ಲಿ ನಿಪುಣರಾಗಿರುವುದು ಅಸಾಮಾನ್ಯವಾಗಿತ್ತು. ಇದರ ಸದುಪಯೋಗ ಪಡೆದುಕೊಂಡ ಮಣಿಯಮ್ಮ ಒಂದೊಂದಾಗಿ ಎಲ್ಲ ರೀತಿಯ ವಾಹನಗಳನ್ನು ಓಡಿಸಲು ಕಲಿತು ಪರವಾನಗಿ ಗಳಿಸಿದರು. ಆಗಿನ ಕಾಲದಲ್ಲೇ ಲಾರಿ, ಬಸ್ಸುಗಳನ್ನು ಮಣಿಯಮ್ಮ ಓಡಿಸುವುದು ನೋಡಿ ಜನರು ಚಕಿತರಾಗುತ್ತಿದ್ದರು. ಇಂದಿಗೂ ಬಿಳಿ ಕೇರಳ ಸೀರೆ ಉಟ್ಟು ಬಿಳಿಗೂದಲಿನ ಅಜ್ಜಿಯೊಬ್ಬರು ಲಾರಿ, ಕಾರು, ಬಸ್ಸು, ಜೀಪು, ಜೆಸಿಬಿ ಎಲ್ಲವನ್ನೂ ಸುಲಭವಾಗಿ ಓಡಿಸುವುದು ನೋಡಿದವರು ಅಚ್ಚರಿಯ ನೋಟ ಬೀರದೆ ಇರುವುದಿಲ್ಲ.

2004ರಲ್ಲಿ ರಾಧಾಮಣಿ ಅಮ್ಮನ ಪತಿ ಅಪಘಾತದಲ್ಲಿ ನಿಧನರಾದ ನಂತರ ತಮ್ಮ ಕುಟುಂಬವನ್ನು ಬೆಂಬಲಿಸಲು ಅವರೇ ಗಂಡನ ಎ ಟು ಝೆಡ್ ಡ್ರೈವಿಂಗ್ ಸ್ಕೂಲ್ ಅನ್ನು ವಹಿಸಿಕೊಂಡರು. ಇಂದು ಮಕ್ಕಳೂ ಮಣಿಯಮ್ಮನ ಸಹಾಯಕ್ಕೆ ನಿಂತಿದ್ದಾರೆ. ಆದರೆ, ಅವರ ಚಾಲನೆಯ ಪ್ರೀತಿ ನಿಂತಿಲ್ಲ. 


 

Latest Videos
Follow Us:
Download App:
  • android
  • ios