Asianet Suvarna News Asianet Suvarna News

ಫೆ.11ಕ್ಕೆ ಶನಿ ಅಸ್ತ; 2 ತಿಂಗಳ ಕಾಲ ಹೈರಾಣಾಗಲಿದ್ದಾರೆ ಕುಂಭ ಸೇರಿ ಈ ಮೂರು ರಾಶಿಯವರು..

ಶನಿ ದೇವನು ನಾವು ಮಾಡು ಕಾರ್ಯಗಳಿಗನುಸಾರ ಫಲಿತಾಂಶಗಳನ್ನು ನೀಡುತ್ತಾನೆ. ಶನಿಯು ಫೆಬ್ರವರಿ 11ರಂದು ಮಧ್ಯಾಹ್ನ 1.55ಕ್ಕೆ ಕುಂಭ ರಾಶಿಯಲ್ಲಿ ಅಸ್ತನಾಗುವ ಮೂಲಕ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ರಾಶಿಚಕ್ರ ಚಿಹ್ನೆಗಳು ಶನಿ ಅಸ್ತದ ಸಮಯದಲ್ಲಿ ಜಾಗರೂಕರಾಗಿರಬೇಕು.

Shani Ast 2024 will increase difficulties in the life of Aquarius Cancer and other zodiac signs skr
Author
First Published Feb 11, 2024, 9:58 AM IST

ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ನ್ಯಾಯಾಧೀಶ ಎಂಬ ಬಿರುದು ಇದೆ. ಶನಿದೇವನು ಎಲ್ಲರನ್ನೂ ನ್ಯಾಯಯುತವಾಗಿ ನಡೆಸಿಕೊಳ್ಳುತ್ತಾನೆ. ಅನ್ಯಾಯವಾಗಿ ವರ್ತಿಸುವವರು ಶನಿಯ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಾಳೆ ಅಂದರೆ ಫೆಬ್ರವರಿ 11ರಂದು ಶನಿಯ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಶನಿಯು ಕುಂಭ ರಾಶಿಯಲ್ಲಿದ್ದಾಗ ದಹನ ಸ್ಥಿತಿಯಲ್ಲಿರುತ್ತಾನೆ. ಅಂದರೆ ಶನಿಗ್ರಹವು ಅಸ್ತವಾಗುವುದರೊಂದಿಗೆ, ಕೆಲವು ರಾಶಿಚಕ್ರ ಚಿಹ್ನೆಗಳ ತೊಂದರೆಗಳು ಹೆಚ್ಚಾಗಲಿವೆ. ಮಾರ್ಚ್ 18ರವರೆಗೂ ಶನಿಯು ಇದೇ ಸ್ಥಿತಿಯಲ್ಲಿರುತ್ತಾನೆ. ಯಾವ ರಾಶಿಚಕ್ರದ ಚಿಹ್ನೆಗಳು ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲಿವೆ ಎಂದು ತಿಳಿಯೋಣ.

ಕರ್ಕಾಟಕ ರಾಶಿ
ಕುಂಭದಲ್ಲಿ ಅಸ್ತ ಸ್ಥಿತಿಗೆ ಹೋಗುವ ಶನಿಯು ಕರ್ಕ ರಾಶಿಯ ಜನರ ಮೇಲೆ ಅತ್ಯಂತ ನಕಾರಾತ್ಮಕ ಪ್ರಭಾವವನ್ನು ಬೀರಲಿದ್ದಾನೆ. ಇನ್ನೆರಡು ತಿಂಗಳ  ಕಾಲ ನಿಮ್ಮ ಜೀವನದಲ್ಲಿ ಬಹಳಷ್ಟು ಸಮಸ್ಯೆಗಳು ಬರಬಹುದು. ಶನಿಯು ಈ ರಾಶಿಯವರಿಗೆ ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆ ಕೊಡಲಿದ್ದಾನೆ. ಶನಿಯ ಅಸ್ತ ಪರಿಣಾಮದಿಂದಾಗಿ, ನಿಮ್ಮ ಎಲ್ಲಾ ಕೆಲಸಗಳಿಗೆ ಅಡ್ಡಿಯಾಗಬಹುದು. ವ್ಯಾಪಾರದಲ್ಲಿಯೂ ನಷ್ಟ ಅನುಭವಿಸಬಹುದು.

ಈ ದೇಶದಲ್ಲಿ ಸಂಬಳ ರೂಪದಲ್ಲಿ ಸಿಗ್ತಿತ್ತು ಬೆಳ್ಳುಳ್ಳಿ!

ಮಕರ  ರಾಶಿ
ಶನಿದೇವನ ಅಸ್ತದಿಂದ ಮಕರ ರಾಶಿಯವರಿಗೆ ಸಮಸ್ಯೆಗಳು ಹೆಚ್ಚಾಗಲಿವೆ. ಸದ್ಯ ಈ ರಾಶಿಯವರಿಗೆ ಶನಿಯ ಸಾಡೇಸಾತಿ ನಡೆಯುತ್ತಿದೆ. ಈಗ, ಶನಿಯ ಅಸ್ತ ಸ್ಥಿತಿಯೂ ಸೇರಿ, ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗಬಹುದು. ಶನಿಯು ಈ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಬಹಳಷ್ಟು ತೊಂದರೆ ಕೊಡುತ್ತಾನೆ. ನಿಮ್ಮ ಪ್ರಗತಿಯಲ್ಲಿ ಅಡೆತಡೆಗಳು ಉಂಟಾಗಬಹುದು, ಪ್ರಚಾರವು ನಿಲ್ಲಬಹುದು. ಕಚೇರಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಹದಗೆಡಬಹುದು ಮತ್ತು ಇದರಿಂದಾಗಿ ನೀವು ನಿಮ್ಮ ಕೆಲಸವನ್ನು ಕಳೆದುಕೊಳ್ಳಬಹುದು. ಈ ಅವಧಿಯಲ್ಲಿ ಮಕರ ರಾಶಿಯವರ ಆರೋಗ್ಯವೂ ಹದಗೆಡಬಹುದು.

60 ವರ್ಷದ ಹಿಂದೆ ಸಿಕ್ಕ ಪೋಸ್ಟ್ ಕಾರ್ಡಲ್ಲಿ ಅಂಥದ್ದೇನಿತ್ತು? ಪತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪತ್ನಿ

ಕುಂಭ ರಾಶಿ
ಸದ್ಯ ಈ ರಾಶಿಯವರಿಗೆ ಶನಿಯ ಸಾಡೇ ಸಾತಿ ನಡೆಯುತ್ತಿದೆ. ಶನಿಗ್ರಹದ ಅಸ್ತದ ಸಮಯದಲ್ಲಿ, ಕುಂಭ ರಾಶಿಯವರಿಗೆ ಕಷ್ಟಗಳು ಮತ್ತಷ್ಟು ಹೆಚ್ಚಾಗಲಿವೆ. ನೀವು ಹಣದ ದೊಡ್ಡ ನಷ್ಟವನ್ನು ಅನುಭವಿಸಬಹುದು. ನಿಮ್ಮ ಜೀವನದಲ್ಲಿ ಅನೇಕ ಏರಿಳಿತಗಳು ಬರಬಹುದು. ಸಂಬಂಧಗಳು ದೂರವಾಗಬಹುದು. ಸಂಗಾತಿಯೊಂದಿಗಿನ ವಾದಗಳು ತುಂಬಾ ಹೆಚ್ಚಾಗಬಹುದು. ಅದು ಪ್ರತ್ಯೇಕತೆಗೆ ಕಾರಣವಾಗಬಹುದು.  ಶನಿಗ್ರಹದ ದುಷ್ಪರಿಣಾಮಗಳಿಂದ ಕುಂಭ ರಾಶಿಯ ಜನರು ಕೆಲವು ಪ್ರಮುಖ ರೋಗಗಳಿಗೆ ಈಡಾಗಬಹುದು. ಆರೋಗ್ಯ ಹಾಗೂ ಸಂಬಂಧಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ನೀವು ಅನೇಕ ಸವಾಲುಗಳನ್ನು ಎದುರಿಸಬೇಕಾಗಬಹುದು. 

Follow Us:
Download App:
  • android
  • ios