ದಾವಣಗೆರೆ, [ಮೇ.05]: ಇನ್ನು ಬಾಳಿ ಬದುಕಬೇಕಿದ್ದ ನವವಿವಾಹಿತೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಇಂದು [ಭಾನುವಾರ] ಘಟನೆ ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆದಿದೆ. 

ಚಿತ್ರದುರ್ಗ ಜಿಲ್ಲೆ ಕೋಣುರು ಗ್ರಾಮದ ಯುವತಿ ಶಿಲ್ಪಾ ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಕೈ ಮೇಲೆ ನಾಲ್ವರ ಹೆಸರು ಬರೆದುಕೊಂಡು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
 
ಚಿತ್ರದುರ್ಗ ಜಿಲ್ಲೆ ಕೋಣುರು ಗ್ರಾಮದ ಯುವತಿ ಶಿಲ್ಪಾ ಹಾಗೂ ಅದೇ ಗ್ರಾಮದ ಮಂಜು ನಡುವೆ ಕಳೆದ ಒಂದು ವಾರದ ಹಿಂದೆ ಮದುವೆಯಾಗಿತ್ತು.  ಆದ್ರೆ, ಮಂಜು ಹಾಗೂ ಶಿಲ್ಪಾ ಬೇರೆ ಬೇರೆ ಸಮುದಾಯಕ್ಕೆ ಸೇರಿದ್ದಾರೆ ಎಂದು ತಿಳಿದುಬಂದಿದೆ.