ದಾವಣಗೆರೆ(ನ.09): ಶ್ರೀರಾಮನಿಗೆ ಇಂದು ನ್ಯಾಯ ಸಿಕ್ಕಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಏಳು ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದದಕ್ಕೆ ಸುಪ್ರೀಂ ಕೋರ್ಟ್ ಇಂದು ತೆರೆ ಎಳೆದಿದ್ದು, ಐತಿಹಾಸಿಕ ತೀರ್ಪಿನ ಬಗ್ಗೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದಾರೆ.

ದಾವಣಗೆರೆಯಲ್ಲಿ ಅಯೋಧ್ಯೆ ತೀರ್ಪಿಗೆ ಪ್ರತಿಕ್ರಿಯೆ ನೀಡಿದ ಅವರು, ಅಯೋಧ್ಯೆ ಹೋರಾಟ ಐನೂರು ವರ್ಷಗಳದ್ದು. ಸುಪ್ರೀಂ ಕೋರ್ಟ್ ಬೆಂಚ್ ನೀಡಿದ ತೀರ್ಪು ಸ್ವಾಗತಾರ್ಹ. ರಾಮನಿಗೆ ಇವತ್ತಿಗೆ ನ್ಯಾಯ ಸಿಕ್ಕಿದೆ. ತ್ಯಾಗ ಬಲಿದಾನಕ್ಕೆ ಇವತ್ತು ನ್ಯಾಯ ಸಿಕ್ಕಿದೆ. ದೀಪಾವಳಿಯ ದಿನ ಐತಿಹಾಸಿಕ ದಿನ ಎಂದಿದ್ದಾರೆ.

ಭವ್ಯವಾದ ದೇವಾಲಯ ನಿರ್ಮಾಣ:

ಮುಂದಿನ ದಿನಗಳಲ್ಲಿ ಭವ್ಯವಾದ ದೇವಾಲಯ ನಿರ್ಮಾಣವಾಗಲಿದೆ. ಶ್ರೀರಾಮನ ಮೂಲ ಸ್ಥಾನ ಸಿಕ್ಕಿದ್ದು ಸಂತಸದ ವಿಷಯ. ಐದು ಬಾರೀ ಅಯೋಧ್ಯೆಗೆ ಹೋಗಿದ್ದೇನೆ. ಇವತ್ತು ಕೋಟ್ಯಂತರ ಜನರ ಆಸೆ ಈಡೇರಿದೆ ಎಂದಿದ್ದಾರೆ.

ಬಾಬರ್ ಅಯೋಧ್ಯೆ(5 ಎಕರೆ)ಯಲ್ಲೇ ಇರಲಿದ್ದಾನೆ: ಸಹೋದರರ ನಂಬಿಕೆ ಮುಖ್ಯ ಎಂದ ಸುಪ್ರೀಂ!

ಕೂಡಲೇ ರಾಮ ಮಂದಿರ ನಿರ್ಮಾಣ ವಾಗಬೇಕು ಎಂದಿದ್ದಾರೆ.ರಾಮ ಮಂದಿರದ ತೀರ್ಪು ನ್ಯಾಯಲಯದ ಮೂಲಕ ಬರಬೇಕು ಎಂಬುದು ಮೋದಿಯವರ ಆಸೆಯಾಗಿತ್ತು. ಅವರ ಆಸೆ ನೆರವೇರಿದೆ. ಮಂದಿರ ನಿರ್ಮಾಣಕ್ಕೆ ತಡವಾಗುವುದು ಬೇಡ. ಹಿಂದುಗಳಿಗೆ ಇಂದು ಪವಿತ್ರವಾದ ದಿನ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಮನಿಗೆ ದೊರೆತ ಅಯೋಧ್ಯೆ: ಶತಮಾನಗಳ ನಂಬಿಕೆಗೆ ಸುಪ್ರೀಂ ತೀರ್ಪಿನ ನೈವೇದ್ಯೆ!

7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಇಂದು ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.