ಲಕ್ಷಾಂತರ ಹೂಡಿಕೆದಾರರಿಗೆ ಪಂಗನಾಮ ಹಾಕಿರುವ ಐಎಮ್ ಎ ಮೋಸದ ಜಾಲದ ವಿಸ್ತಾರ ದಾವಣಗೆರೆಗೂ ವ್ಯಾಪಿಸಿದೆ.
ದಾವಣಗೆರೆ[ಜೂ. 10] ಬಹುಕೋಟಿ ವಂಚನೆಯ ಐಎಮ್ ಎ ಮೋಸದ ಜಾಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ದಾವಣಗೆರೆಯಲ್ಲಿಯೂ ಜನರು ಅಪಾರ ಹಣ ಕಳೆದುಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದಾವಣಗೆರೆ ವಿವಿಧ ಬಡಾವಣೆಗಳ ನೂರಾರು ಜನರು ವಂಚನೆ ಮಾಡಿದ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಬೆಂಗಳೂರಿನಿಂದ ಐಎಮ್ ಎ ಮೋಸದ ಸುದ್ದಿ ಸ್ಫೋಟವಾಗುತ್ತಿದ್ದಂತೆ ದಾವಣಗೆರೆ ಶಂಕರ್ ವಿಹಾರ್ ಭಾಗದಲ್ಲಿರುವ ಕಚೇರಿ ಮುಂದೆ ಜನ ಜಮಾಯಿಸಿದರು.
50 ಕ್ಕು ಹೆಚ್ಚು ಹೂಡಿಕೆದಾರರು ದಾವಣಗೆರೆ ಪೊಲೀಸರಿಗೆ ದೂರು ನೀಡಿದ್ದಾರೆ. 3 ಸಾವಿರಕ್ಕೂ ಹೆಚ್ಚು ಜನರು ದಾವಣಗೆರೆ ವ್ಯಾಪ್ತಿಯಲ್ಲಿ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. ಜೂನ್ 11 ರಂದು ಬೆಳಗ್ಗೆ ಎಸ್ ಪಿಗೆ ದೂರು ನೀಡಲು ನಿರ್ಧರಿಸಲಾಗಿದೆ.
