4 ದಶಕಗಳ ಬಳಿಕ ಹೊಸಪೇಟೆ-ಹರಿಹರ ರೈಲು ಸಂಚಾರಕ್ಕೆ ಮುಕ್ತ

ಹೊಸಪೇಟೆ-ಹರಿಹರ ರೈಲು ಸಂಚಾರ ಇಂದಿನಿಂದ ಶುರು| 4 ದಶಕಗಳ ಬೇಡಿಕೆ ಈಡೇರಿದ್ದರಿಂದ ಪ್ರಯಾಣಿಕರು ಖುಷ್‌| ಹೆಚ್ಚಿನ ದರ ನೀಡಿ ಬಸ್‌ನಲ್ಲಿ ಸಂಚರಿಸುತ್ತದ್ದ ಜನರಿಗೆ ಅನುಕೂಲ| ಹೊಸಪೇಟೆಯಿಂದ ಹರಿಹರ ನಗರಕ್ಕೆ ರೈಲು ಸಂಚಾರಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿಸಲಿದ್ದಾರೆ| ಅ.18 ರಿಂದ ಟ್ರೇನ್‌ ನಂ: 56529 ಹರಿಹರ- ಕೊಟ್ಟೂರು- ಹೊಸಪೇಟೆ ಮತ್ತು ಟ್ರೇನ್‌ ನಂ.56530 ಹೊಸಪೇಟೆ- ಕೊಟ್ಟೂರು- ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ನಿತ್ಯ ಸಂಚರಿಸಲಿದೆ|

After Four Decade Hospete-Harihara Train Service Will Be Start From Today

ಪ್ರವೀಣ್‌ ಹನಗವಾಡಿ

ಹರಿಹರ(ಅ.17): ನಾಲ್ಕು ದಶಕಗಳ ನಂತರ ಹೊಸಪೇಟೆ- ಹರಿಹರ ಮಾರ್ಗದಲ್ಲಿ ರೈಲು ಸಂಚಾರ ಅಧಿಕೃತವಾಗಿ ಆರಂಭವಾಗುತ್ತಿದ್ದು, ಇಲ್ಲಿನ ರೈಲ್ವೆ ಪ್ರಯಾಣಿಕರು ಸಂತಸಗೊಂಡಿದ್ದಾರೆ.

ಅ.17ರಂದು ಹೊಸಪೇಟೆಯಿಂದ ಹರಿಹರ ನಗರಕ್ಕೆ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಗುತ್ತಿದೆ. ಹೊಸಪೇಟೆ ನಿಲ್ದಾಣದಲ್ಲಿ ಬೆಳಗ್ಗೆ 11 ಗಂಟೆಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಅ.18 ರಿಂದ ಟ್ರೇನ್‌ ನಂ: 56529 ಹರಿಹರ- ಕೊಟ್ಟೂರು- ಹೊಸಪೇಟೆ ಮತ್ತು ಟ್ರೇನ್‌ ನಂ.56530 ಹೊಸಪೇಟೆ- ಕೊಟ್ಟೂರು- ಹರಿಹರಕ್ಕೆ ದಾವಣಗೆರೆ ಮಾರ್ಗವಾಗಿ ನಿತ್ಯ ಸಂಚರಿಸಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಲ್ಲಿನ ಜನರಿಗೆ ಚಿಗಟೇರಿ ನಾರದಮುನಿ, ಗುರು ಕೊಟ್ಟೂರೇಶ್ವರ, ಜಂಭುಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಬರಲು ಈ ರೈಲು ಭಾವನಾತ್ಮಕ ಕೊಂಡಿಯಾಗಿದೆ. ಹರಿಹರದಿಂದ ಹೊಸಪೇಟೆವರೆಗಿನ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರಲು, ಪ್ರಯಾಣಿಕರು ಬೇರೆ ಬೇರೆ ಸ್ಥಳಗಳಿಗೆ ತೆರಳಲು ಈ ರೈಲು ಸಂಚಾರದಿಂದ ಹೆಚ್ಚು ಅನುಕೂಲವಾಗಲಿದೆ.

ಈ ಭಾಗದ ರೈತರಿಗೆ, ಬಡವರಿಗೆ ಜನಸಾಮಾನ್ಯರಿಗೆ ಅತ್ಯಂತ ಅನುಕೂಲವಾಗಲಿದೆ. ರೈಲು ಮಾರ್ಗ ಬ್ರಿಟಿಷರ ಕಾಲದಲ್ಲಿಯೇ ಶುರುವಾಗಿದ್ದಂಥದು. ಅನೇಕ ಕಾರಣದಿಂದ ನನೆಗುದಿಗೆ ಬಿದ್ದಿದ್ದ ರೈಲು ಯೋಜನೆ ಜನರ ಹೋರಾಟದ ಫಲವಾಗಿ ಪುನಃ ಪ್ರಾರಂಭ ಆಗಿರುವುದು ಜನರಿಗೆ ಸಂತಸ ತಂದಿದೆ.

ಹರಿಹರ- ಹೊಸಪೇಟೆ:

ಹರಿಹರದಿಂದ ಬೆಳಗ್ಗೆ 7.20ಕ್ಕೆ ಹೊರಟು, 7.25ಕ್ಕೆ ಅಮರಾವತಿ ಕಾಲೋನಿ, 7.45ಕ್ಕೆ ದಾವಣಗೆರೆ, 8.03ಕ್ಕೆ ಅಮರಾವತಿ ಕಾಲೋನಿ, 8.22ಕ್ಕೆ ತೆಲಗಿ, 8.43 ಹರಪನಹಳ್ಳಿ, 9.05ಕ್ಕೆ ಬೆಣ್ಣೆಹಳ್ಳಿ, 9.26ಕ್ಕೆ ಕೊಟ್ಟೂರು, 9.50 ಮಾಲವಿ, 10.08 ಹಗರಿಬೊಮ್ಮನಹಳ್ಳಿ, 10.44 ಮರಿಯಮ್ಮನಹಳ್ಳಿ, 11ಕ್ಕೆ ವ್ಯಾಸ ಕಾಲನಿ, 11.16ಕ್ಕೆ ವ್ಯಾಸನಕೆರಿ, 11.32ಕ್ಕೆ ತುಂಗಭದ್ರಾ ಡ್ಯಾಂ, ಮಧ್ಯಾಹ್ನ 12.10ಕ್ಕೆ ಹೊಸಪೇಟೆ ತಲುಪಲಿದೆ.

ಹೊಸಪೇಟೆ- ಹರಿಹರ:

ಹೊಸಪೇಟೆಯಿಂದ ಮಧ್ಯಾಹ್ನ 12.55ಕ್ಕೆ ಹೊರಡುವ ರೈಲು, 1.05ಕ್ಕೆ ತುಂಗಭದ್ರಾ ಡ್ಯಾಂ, 1.09ಕ್ಕೆ ವ್ಯಾಸನಕೇರಿ, 1.19 ವ್ಯಾಸ ಕಾಲನಿ, 1.34 ಮರಿಯಮ್ಮನಹಳ್ಳಿ, 1.53 ಹಂಪಾಪಟ್ಟಣ, 2.12 ಹಗರಿಬೊಮ್ಮನಹಳ್ಳಿ, 2.32 ಮಾಲವಿ, 3.02 ಕೊಟ್ಟೂರು, 3.32 ಬೆಣ್ಣೆಹಳ್ಳಿ, 3.45 ಹರಪನಹಳ್ಳಿ, 4.10 ತೆಲಗಿ, 5.01 ಅಮರಾವತಿ ಕಾಲೋನಿ, 5.25ಕ್ಕೆ ದಾವಣಗೆರೆ, 5.44ಕ್ಕೆ ಅಮರಾವತಿ ಕಾಲೋನಿ, 6.30ಕ್ಕೆ ಹರಿಹರ ತಲುಪಲಿದೆ.
ಹೊಸಪೇಟೆಯಿಂದ ದಾವಣಗೆರೆಗೆ 155 ಕಿಮೀ ಅಂತರವಿದ್ದು, ಹೊಸಪೇಟೆಯಿಂದ ವ್ಯಾಸ ಕಾಲೋನಿಗೆ 10, ಮರಿಯಮ್ಮನಹಳ್ಳಿಗೆ 10, ಹಂಪಾಪಟ್ಟಣಕ್ಕೆ 10, ಹಗರಿಬೊಮ್ಮನಹಳ್ಳಿಗೆ 10, ಮಾಲವಿಗೆ 15, ಕೊಟ್ಟೂರಿಗೆ 20, ಬೆಣ್ಣಿಹಳ್ಳಿಗೆ 25, ಹರಪನಹಳ್ಳಿಗೆ 25, ತೆಲಗಿಗೆ 30, ದಾವಣಗೆರೆ, ಅಮರಾವತಿ ಕಾಲೋನಿ ಮತ್ತು ಹರಿಹರಕ್ಕೆ 35 ದರ ನಿಗದಿಪಡಿಸಿದೆ.

ಈ ಬಗ್ಗೆ ಮಾತನಾಡಿದ ಹಿರಿಯ ನಾಗರಿಕ ಚಂದ್ರಶೇಖರ್‌ ಬಿ.ಎಂ ಅವರು, ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಆಹಾರ ಉತ್ಪನ್ನಗಳು ಗೂಡ್ಸ್‌ ರೈಲಿನ ಮೂಲಕ ಬೇರೆ ಬೇರೆ ಕಡೇ ಈ ಮಾರ್ಗದ ಮೂಲಕ ರವಾನೆ ಮಾಡಲಾಗುತ್ತಿತ್ತು. ರೈಲು ಇದ್ದುದರಿಂದ 1982-83ರಿಂದ ನಡೆದ ರೈತ ಚಳವಳಿ ಹೋರಾಟ ಯಶಸ್ಸು ಕಂಡಿತು. ರೈಲು ನಿಂತಾಗಿನಿಂದ ನಿರಂತರ ಹೋರಾಟ ನಡೆಯುತ್ತಲೇ ಬಂದಿತ್ತು. ಇಂದಿನಿಂದ ರೈಲು ಪ್ರಾರಂಭವಾಗುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.  
 

Latest Videos
Follow Us:
Download App:
  • android
  • ios