Asianet Suvarna News Asianet Suvarna News

ವಿಷಪೂರಿತ ಮೇವು ತಿಂದು 10 ಕುರಿಗಳ ದಾರುಣ ಸಾವು

ವಿಷಪೂರಿತ ಮೇವು ತಿಂದು ಜಾನುವಾರುಗಳು ಸಾವನ್ನಪುವ ಘಟನೆಗಳು ನಡೆಯುತ್ತಿದ್ದರೂ, ಜನ ಮಾತ್ರ ತಮ್ಮ ಜಾನುವಾರುಗಳ ಬಗ್ಗೆ ಎಚ್ಚರಿಕೆ ವಹಿಸುತ್ತಿಲ್ಲ. ದಾವಣಗೆರೆಯಲ್ಲಿ ವಿಷ ಪೂರಿತ ಮೇವು ಸೇವಿಸಿ 10 ಕುರಿಗಳು ದಾರುಣವಾಗಿ ಸತ್ತಿರುವ ಘಟನೆ ನಡೆದಿದೆ

10 sheeps died after eating poisonous grass
Author
Bangalore, First Published Oct 15, 2019, 3:49 PM IST

ದಾವಣಗೆರೆ(ಅ.15): ವಿಷಪೂರಿತ ಮೇವು ಸೇವಿಸಿ 10 ಕುರಿಗಳು ದಾರುಣವಾಗಿ ಸತ್ತಿರುವ ಘಟನೆ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊನ್ನಾಳಿ ಕ್ಯಾಸಿನಕೆರೆ ಸೂರಮಟ್ಟಿಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಇವು ಕ್ಯಾಸಿನಕೆರೆ ಗ್ರಾಪಂ ವ್ಯಾಪ್ತಿಯ ಸೂರಮಟ್ಟಿಗ್ರಾಮದ ಕುರಿಗಾಹಿ ರವಿಯಪ್ಪ ಎಂಬುವರಿಗೆ ಸೇರಿದ ಕುರಿಗಳು ಎಂದು ಹೇಳಲಾಗಿದೆ. ಭಾನುವಾರ ಹಟ್ಟಿಯಾಳು ಕೆರೆಯಂಗಳದ ಕೆರೆಯ ಏರಿ ಮೇಲೆ 60-70 ಕುರಿಗಳು ಮೇಯಿಸಿಕೊಂಡು ಬಂದಿದ್ದಾರೆ. ಭಾನುವಾರ ಮಧ್ಯರಾತ್ರಿಯಿಂದಲೂ ಕುರಿಗಳು ದೊಡ್ಡಿಯಲ್ಲಿ ಹೊಟ್ಟೆಯುಬ್ಬಿಸಿಕೊಂಡು ಒದ್ದಾಡಿ ಸೋಮವಾರ ಬೆಳಗ್ಗೆಯವರೆಗೆ ಸುಮಾರು 10 ಕುರಿಗಳು ಸಾವು ಕಂಡಿವೆ.

ರಾಜ್ಯದ ಬಡ ಜನರಿಗೆ ಬಂಪರ್ ಗಿಫ್ಟ್ : ಇದು BSY ಸರ್ಕಾರದ ಮೊದಲ ಯೋಜನೆ

ಸತ್ತ ಕುರಿಗಳನ್ನು ಟ್ಯಾಕ್ಟರ್‌ನಲ್ಲಿ ಸಾಸ್ವೆಹಳ್ಳಿ ಪಶು ಚಿಕಿತ್ಸಾ ಕೇಂದ್ರಕ್ಕೆ ಒಯ್ದು ಪರೀಕ್ಷಿಸಲಾಯಿತು. ಸಾಸ್ವೆಹಳ್ಳಿ ಪಶು ಚಿಕಿತ್ಸಾ ಕೇಂದ್ರದ ಡಾ. ಚಂದ್ರಶೇಖರ್‌ ಮಾತನಾಡಿ ವಿಷಪೂರಿತ ಸಸ್ಯಗಳ ಸೇವನೆಮಾಡಿ ಸತ್ತ ಕುರಿಗಳ ಪೋಸ್ಟ್‌ ಮಾರ್ಟಮ್‌ ಮಾಡಿದ್ದು, ಸಂಗ್ರಹಿಸಿದ ಕೆಲವು ಮಾದರಿಗಳನ್ನು ದಾವಣಗೆರೆ ಜಿಲ್ಲಾ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿಸಿದರು.

ಉಡುಪಿ ಭಾಗದಲ್ಲಿ ಗುಡುಗು, ಮಿಂಚು ಸಹಿತ ಮಳೆ

Follow Us:
Download App:
  • android
  • ios