ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ದೂರುದಾರ ಚಿನ್ನಯ್ಯ ಅರೆಸ್ಟ್ ಆಗಿ ವಿಚಾರಣೆ ಎದುರಿಸುತ್ತಿದ್ದಾನೆ. ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ಇದೀಗ ಎಸ್ಐಟಿ ಅಧಿಕಾರಿಗಳು ತಿಮರೋಡಿ, ಮಟ್ಟೆಣ್ಣನವರ್, ಜಯಂತ್‌ ಗ್ಯಾಂಗ್‌ಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಧರ್ಮಸ್ಥಳ (ಆ.25) ಧರ್ಮಸ್ಥಳ ವಿರುದ್ದ ಗಂಭೀರ ಆರೋಪದ ಸತ್ಯಾಸತ್ಯತೆ ಬಯಲಾಗುತ್ತಿದೆ. ನೂರಾರು ಶವ ಹೂತಿಟ್ಟ ಪ್ರಕರಣ, ಸುಜಾತಾ ಭಟ್ ಮಗಳು ಅನನ್ಯಾ ಭಟ್ ನಾಪತ್ತೆ ಪ್ರಕರಣದ ಅಸಲಿ ಕತೆ ಬಹಿರಂಗವಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಈಗಾಗಲೇ ನ್ಯಾಯಾಧೀಶರ ಎದುರು ತಿಮರೋಡಿ ಗ್ಯಾಂಗ್ ನಡೆಸಿದ ಷಡ್ಯಂತ್ರ ಹೇಳಿದ್ದಾನೆ. ಇದೀಗ ಎಸ್ಐಟಿ ವಿಚಾರಣೆಯಲ್ಲಿ ಕೆಲ ಸ್ಫೋಟಕ ಮಾಹಿತಿ ಹೇಳಿದ್ದಾನೆ. ಈ ಮಾಹಿತಿ ಆಧರಿಸಿ ಇದೀಗ ಎಸ್ಐಟಿ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಹಾಗೂ ಜಯಂತಿ ಟಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.

ಜಡ್ಜ್ ಎದುರು ಕೂಡ ಸಂಪೂರ್ಣ ಸತ್ಯ ಒಪ್ಪಿಕೊಂಡಿರೋ ಚಿನ್ನಯ್ಯ

ಜಡ್ಜ್ ಎದುರೇ ಚಿನ್ನಯ್ಯ ಸತ್ಯ ಒಪ್ಪಿಕೊಂಡಿದ್ದಾನೆ. ನೂರಾರು ಶವ ಹೂತಿಟ್ಟ ಪ್ರಕರಣದ ಹಿಂದಿನ ಷಡ್ಯಂತ್ರವನ್ನು ಬಯಲು ಮಾಡಿದ್ದಾನೆ. ಚಿನ್ನಯ್ಯಗೆ ಆಶ್ರಯ ನೀಡಿದ, ತಲೆಬುರುಡೆ ಪ್ರಕರಣವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಕುರಿತು ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ. ಗಿರೀಶ್ ಮಟ್ಟೆಣ್ಣನವರ್, ಜಯಂತ್ ಟಿ ಸಂಕಷ್ಟ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆ ಜಂಟಿ ಸುದ್ದಿಗೋಷ್ಟಿ ನಡೆಸಿದ್ದ ತಿಮರೋಡಿ ಮತ್ತು ಮಟ್ಟೆಣ್ಣನವರ್, ಮಾಸ್ಕ್ ಮ್ಯಾನ್ ಜೊತೆ ನಾವೇ ಇರೋದು ಎಂದು ಹೇಳಿದ್ದರು.

ವಿಚಾರಣೆ ವೇಳೆ ಗ್ಯಾಂಗ್ ಸದಸ್ಯರ ಹೆಸರು ಹೇಳಿರುವ ಚಿನ್ನಯ್ಯ

ಎಸ್ಐಟಿ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್, ಜಯಂಟಿ ಟಿ ಹೆಸರು ಹೇಳಿದ್ದಾನೆ. ಹೀಗಾಗಿ ಎಸ್ಐಟಿ ಅದಿಕಾರಿಗಳು ಈ ಮೂವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಬಯಲಾದ ಬುರುಡೆ ಕತೆ

ಸೌಜನ್ಯ ಪ್ರಕರಣವನ್ನು ಹಿಡಿದು ಕಳೆದ 13 ವರ್ಷಗಳಿಂದ ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಹೋರಾಟ ನಡೆಸುತ್ತಿದೆ. ದಾಖಲೆ ಇದೆ ತೋರಿಸಿಸ್ತೀನಿ, ಈ ಮೊಬೈಲ್‌ನಲ್ಲಿದೆ, ಜೇಬಿನಲ್ಲಿದೆ ಎಂದು ಹೇಳಿಕೊಂಡು ಒಂದೇ ಒಂದು ದಾಖಲೆ ಸಲ್ಲಿಸಿದ ಈ ಗ್ಯಾಂಗ್‌ ಹೋರಾಟವನ್ನು ತೀವ್ರಗೊಳಿಸಲು ಹಾಗೂ ದೇಶಾದ್ಯಂತ ಧರ್ಮಸ್ಥಳ ವಿರುದ್ದ ಅಪನಂಬಿಕೆ ಬರುವಂತೆ ಮಾಡಲು ಬುರುಡೆ ಕತೆ ಹೆಣೆಯಲಾಗಿತ್ತು ಅನ್ನೋದು ಎಸ್ಐಟಿ ತನಿಖೆಯಿಂದ ಬಯಲಾಗುತ್ತಿದೆ. ಚಿನ್ನಯ್ಯನ ಮೂಲಕ ಹೋರಾಟ ತೀವ್ರಗೊಳಿಸಲು ನಡೆಸಿದ ಎಲ್ಲಾ ಪ್ಲಾನ್ ಉಲ್ಟಾ ಆಗಿದೆ. ಇದೀಗ ತಿಮರೋಡಿ ಗ್ಯಾಂಗ್ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಚಿನ್ನಯ್ಯನ ಹೇಳಿಕೆಯಿಂದ ಇದೀಗ ತಿಮರೋಡಿ ಗ್ಯಾಂಗ್‌ ವಿಚಾರಣೆಗೆ ಹಾಜರಾಗಬೇಕಾದ ಅನಿವಾರ್ಯತೆ ಎದುರಾಗಿದೆ.

ಬುರುಡೆ ಜೊತೆ ದೆಹಲಿಗೆ ತೆರಳಿದ್ದ ಚಿನ್ನಯ್ಯ

ಮಾಸ್ಟರ್ ಪ್ಲಾನ್ ಪ್ರಕಾರ ಆರಂಭದಲ್ಲಿ ಚಿನ್ನಯ್ಯ ತಂದಿದ್ದ ಬುರಡೆ ನೇರವಾಗಿ ಕೋರ್ಟ್ ಹಾಗೂ ಪೊಲೀಸರ ಕೈಸೇರಿದ್ದಲ್ಲ. ಕಳೆದ 2 ವರ್ಷಗಳಿಂದ ಬುರುಡೆ ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಬುರಡೆಯೊಂದನ್ನು ಗ್ಯಾಂಗ್ ಸದಸ್ಯರು ತಂದು ಚಿನ್ನಯ್ಯನಿಗೆ ನೀಡಿದ್ದಾರೆ. ಬಳಿಕ ಬುರಡೆ ಜೊತೆ ಚಿನ್ನಯ್ಯ ಹಾಗೂ ತಂಡ ದೆಹಲಿಗೆ ತೆರಳಿ ಪ್ರಮುಖರನ್ನು ಭೇಟಿಯಾಗಿತ್ತು. ಈ ಭೇಟಿ ಬಳಿಕ ಯಾವ ರೀತಿ ಹೋರಾಟ ರೂಪಿಸಬೇಕು ಅನ್ನೋದು ಪ್ಲಾನ್ ಮಾಡಲಾಗಿದೆ. ಜೊತೆಗೆ ಯಾರೆಲ್ಲಾ ವಕೀಲರು ಇರಬೇಕು, ವಕೀಲರ ನೆರವೊಂದಿಗೆ ಈ ಪ್ರಕರಣವನ್ನು ಗಂಭೀರ ಸ್ವರೂಪದಲ್ಲಿ ಪ್ರಸ್ತುತಪಡಿಸಲು ಪ್ಲಾನ್ ಮಾಡಲಾಗಿತ್ತು.