ಬಂಟ್ವಾಳದ ಬಿಸಿರೋಡಿನಲ್ಲಿರುವ ಟೆಕ್ಸ್ ಟೈಲ್ ಅಂಗಡಿಯೊಂದರಲ್ಲಿ, ಬುರ್ಖಾ ಧರಿಸಿ ಮಾರುವೇಷದಲ್ಲಿ ಬಂದ ಪತ್ನಿಯೊಬ್ಬರು ತನ್ನ ಪತಿಯ ಮೇಲೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವ. ಆರೋಪಿ ಪತ್ನಿಯನ್ನು ಪೊಲೀಸರು ಬಂಧಿಸಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದಾರೆ.

ಬಂಟ್ವಾಳ (ನ.20): ಟೆಕ್ಸ್ ಟೈಲ್ ಅಂಗಡಿಗೆ ಮಾರುವೇಷದಲ್ಲಿ ಬಂದ ಪತ್ನಿ ಗಂಡನಿಗೆ ಕತ್ತಿಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬಿಸಿರೋಡಿನಲ್ಲಿ ಬುಧವಾರ ಸಂಜೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೃಷ್ಣ ಕುಮಾರ್ ಸೋಮಯಾಜಿ ಅವರಿಗೆ ಪತ್ನಿ ಜ್ಯೋತಿ ಸೋಮಯಾಜಿ ಎಂಬವರು ಕತ್ತಿಯಿಂದ ಕಡಿದ ಮಹಿಳೆಯಾಗಿದ್ದಾರೆ.

ಬಿಸಿ ರೋಡಿನ ಸೋಮಯಾಜಿ ಟೆಕ್ಸ್ ಟೈಲ್ ಅಂಗಡಿಗೆ ನುಗ್ಗಿದ ಮಹಿಳೆ, ಕ್ಯಾಶ್ ಕೌಂಟರ್ ನಲ್ಲಿ ಕುಳಿತ್ತಿದ್ದ ಗಂಡನಿಗೆ ಬುರ್ಖಾ ಧರಿಸಿಕೊಂಡು ಬಂದಿದ್ದ ಪತ್ನಿ ಕತ್ತಿಯಿಂದ ಕಡಿದು ಪರಾರಿಯಾಗಿದ್ದರು.

ಪತಿ ಗಂಭೀರ ಗಾಯ:

ಗಂಭೀರವಾಗಿ ಗಾಯಗೊಂಡ ಕೃಷ್ಣ ಸೋಮಯಾಜಿ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿತೆ ಜ್ಯೋತಿ ಸೋಮಯಾಜಿ ಅವರನ್ನು ಬಂಟ್ವಾಳ ಪೋಲೀಸರು ಕ್ಷಣಾರ್ಧದಲ್ಲಿ ಬಂಧಿಸಿದ್ದಾರೆ.

ಬಂಟ್ವಾಳ ನಗರ ಪೋಲೀಸರು ಸ್ಥಳದಲ್ಲಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆ ಯತ್ನಕ್ಕೆ ಕಾರಣಗಳೇನು? ಹಣಕಾಸಿನ ವ್ಯವಹಾರವೇ, ಆಸ್ತಿ ಸಂಬಂಧಿತ ದ್ವೇಷವೇ ಇನ್ನೇನಾದರೂ ಕರಣಗಳಿವೆ? ಪೊಲೀಸರು ಎಲ್ಲ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಕೌಟುಂಬಿಕ ಕಲಹದ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಕೌಟುಂಬಿಕ ವಿಚಾರಕ್ಕೆ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲು ಕೂಡ ಏರಿದ್ದರು ಎನ್ನಲಾಗಿದೆ.