ಮಂಗಳೂರು(ಅ.22): ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್‌ ವಿರುದ್ಧ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆ ಸರಿಯಲ್ಲ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ಬಂಟ್ವಾಳದ ಬಿ.ಸಿ.ರೋಡಿನ ಸುಂದರೀಕರಣದ ಬಗ್ಗೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಯೋಜನಾ ವರದಿಯ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ.

ಜನರೇ ಬಾಯಿ ಮುಚ್ಚಿಸ್ತಾರೆ:

ಸ್ವಾತಂತ್ರ್ಯ ಹೋರಾಟ ಮಾಡಿದ ವೀರ ಸಾವರ್ಕರ್‌ ವಿರುದ್ಧ ಮಾತನಾಡುವ ಸಿದ್ದರಾಮಯ್ಯ ಅವರ ನಾಲಗೆ ಹಿಡಿತ ಇರಲಿ. ಸಿದ್ದರಾಮಯ್ಯ ಅವರು ಒಂದು ದಿನ ಅಂಡಮಾನ್‌ ಜೈಲಿನಲ್ಲಿ ಇದ್ದು ನೋಡಲಿ, ಅಲ್ಲಿನ ಕಷ್ಟವನ್ನು ನಾನೂ ನೋಡಿದ್ದೇನೆ. ಅಂತಹಾ ಸೇನಾನಿಗೆ ಅವಮಾನ ಮಾಡುವ ಕೀಳು ಅಭಿರುಚಿ ಸಿದ್ದರಾಮಯ್ಯರಿಗೆ ಒಳ್ಳೆಯದಲ್ಲ ಎಂದ ಅವರು, ನಾಲಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳದೇ ಇದ್ದರೆ, ಜನರೇ ಬಾಯಿಮುಚ್ಚಿಸುತ್ತಾರೆ ಎಂದಿದ್ದಾರೆ.

ಎಲ್ಲೆಲ್ಲಿ ಸುತ್ತಿದ್ರೂ ಮಲಗೋದಕ್ಕೆ ಮಾತ್ರ ಕಾಳಿಂಗಕ್ಕೆ ತನ್ನ ಮನೆಯೇ ಬೇಕು..!

ತನ್ನ ಸ್ವಾರ್ಥಕ್ಕಾಗಿ ಮಕ್ಕಳನ್ನು ಅಡವಿಟ್ಟಟಿಪ್ಪು ವಿಗೆ ಜಯಂತಿ ಮಾಡ್ತಾರೆ, ಸಾವರ್ಕರ್‌ ಅಂತವರಿಗೆ ಅವಮಾನ ಮಾಡುತ್ತಾರೆ, ಇದು ಒಳ್ಳೆಯದಲ್ಲ ಎಂದು ಅಶೋಕ್‌ ಹೇಳಿದ್ದಾರೆ.

ಮಳೆ: ಕರಾವಳಿಯಲ್ಲಿ 27ರ ತನಕ ರೆಡ್‌ ಅಲರ್ಟ್‌