ಹಿಜಾಬ್ ತೀರ್ಪಿಗೆ ವಿರೋಧ : ಬಂದ್‌ಗೆ ಮಂಗಳೂರು ಮುಸ್ಲಿಮರ ಬೆಂಬಲ: ಹಲವೆಡೆ ಸ್ತಬ್ಧ

  • ಹಿಜಾಬ್ ತೀರ್ಪು ವಿರೋಧಿಸಿ ಬಂದ್‌ಗೆ ಕರೆ
  • ಮುಸ್ಲಿಂ ಬಾಹುಳ್ಯದ ಪ್ರದೇಶ ಸಂಪೂರ್ಣ ಬಂದ್‌
  • ಬಂದ್‌ಗೆ ಕರೆ ನೀಡಿದ್ದ ಮುಸ್ಲಿಂ ಸಂಘಟನೆ
Opposition to Hijab verdict Mangalore Muslims called bundh akb

ಮಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಂಗಳೂರು ಮುಸ್ಲಿಮರು ಸಂಪೂರ್ಣ ಬೆಂಬಲ ಸೂಚಿಸಿದ್ದು, ಮಂಗಳೂರು ನಗರ ಸೇರಿ ದ.ಕ ಜಿಲ್ಲೆಯ ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸಂಪೂರ್ಣ ಬಂದ್ ಆಗಿವೆ.

ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಬೆಳಿಗ್ಗಿನಿಂದಲೇ ವಹಿವಾಟು ಸ್ಥಗಿತಗೊಂಡಿದ್ದು, ಮೀನುಗಾರಿಕಾ ವಹಿವಾಟು ಸ್ಥಗಿತಗೊಳಿಸಿದ ಮುಸ್ಲಿಂ ವ್ಯಾಪಾರಿಗಳು ಮತ್ತು ಕೆಲಸಗಾರರು ಬಂದ್ ಬೆಂಬಲಿಸಿದ್ದಾರೆ. ಇದರಿಂದ ಮಂಗಳೂರು ಬಂದರಿನಲ್ಲಿ ಭಾಗಶಃ ಬಂದ್ ವಾತಾವರಣ ಕಂಡು ಬಂದಿದೆ. ಇನ್ನು ಕೆಲ ಮುಸ್ಲಿಮೇತರ ವ್ಯಾಪಾರಿಗಳು ಮತ್ತು ಮೀನುಗಾರರು ವಹಿವಾಟು ನಡೆಸಿದ್ದಾರೆ. ಐಸ್ ಪ್ಲಾಂಟ್ ಗಳು, ರಫ್ತು ವ್ಯವಹಾರ ಸೇರಿ ಬಹುತೇಕ ವಹಿವಾಟು ಸ್ಥಬ್ತವಾಗಿದ್ದು, ಮೀನು ಹರಾಜು ಜಾಗದಲ್ಲೂ ಮುಸ್ಲಿಮೇತರರಿಂದ ವ್ಯಾಪಾರ ನಡೆದಿದೆ. ಇನ್ನು ಬಂದ್ ಹಿನ್ನೆಲೆಯಲ್ಲಿ ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 

Hijab Verdict: ಸುಪ್ರೀಂ ಅಂಗಳಕ್ಕೆ ಹಿಜಾಬ್, ಹೋರಾಟ ಮುಂದುವರೆಸುತ್ತೇವೆ: ಹಿಜಾಬ್ ಪರ ವಕೀಲರು
 

ಮಂಗಳೂರು ವ್ಯಾಪಾರಿ ಕೇಂದ್ರ ಭಾಗಶಃ ಸ್ತಬ್ಧ!

ಮುಸ್ಲಿಂ ಸಂಘಟನೆಗಳ ಬಂದ್ ಕರೆಗೆ ಮಂಗಳೂರಿನ (Manglore) ಮುಸ್ಲಿಂ ಬಾಹುಳ್ಯದ ಪ್ರದೇಶಗಳು ಸಂಪೂರ್ಣ ಸ್ತಬ್ಧವಾಗಿದೆ. ನಗರದ ಪ್ರಮುಖ ವ್ಯಾಪಾರಿ ಕೇಂದ್ರ ಬಂದರು‌ ಪ್ರದೇಶ ಭಾಗಶಃ ಬಂದ್ ಆಗಿದ್ದು, ಬಹುತೇಕ ಮುಸ್ಲಿಂ ವ್ಯಾಪಾರಸ್ಥರೇ ವಹಿವಾಟು ನಡೆಸುವ ಮಂಗಳೂರಿನ ಬಂದರು ಪ್ರದೇಶದಲ್ಲಿ ಬಹುತೇಕ ಅಂಗಡಿಗಳು ಮೆಚ್ಚಿದ್ದವು. ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಗೂ ದಿನಸಿ ಸಾಮಾಗ್ರಿ ರಫ್ತಾಗುವ ಬಂದರು ಪ್ರದೇಶದಲ್ಲಿ ದಿನಸಿ ಸೇರಿ ಹಲವಾರು ಅಂಗಡಿ ಬಂದ್ ಮಾಡಿ ಮುಸ್ಲಿಂ ವ್ಯಾಪಾರಸ್ಥರು ಬೆಂಬಲ ಸೂಚಿಸಿದ್ದರು. ಮುಸ್ಲಿಂ ದಿನಗೂಲಿ ಕಾರ್ಮಿಕರು ಕೂಡ ಬಾರದ ಕಾರಣ ಅರ್ಧದಷ್ಟು ವಹಿವಾಟು ಸ್ಥಗಿತಗೊಂಡಿತ್ತು. ಉಳಿದಂತೆ ಜಿಲ್ಲೆಯ ಹಲವೆಡೆ ವ್ಯಾಪಾರ ವಹಿವಾಟು ಯಥಾಸ್ಥಿತಿಯಲ್ಲಿದ್ದು, ಮುಸ್ಲಿಮರಿಂದ ಮಾತ್ರ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ‌

Hijab Verdict: ಕೋರ್ಟ್ ಆದೇಶದ ಬಳಿಕವೂ ಉಡುಪಿಯ 6 ವಿದ್ಯಾರ್ಥಿನಿಯರು ಕಾಲೇಜಿಗೆ ಗೈರು
 

ಉಳಿದಂತೆ ಮಂಗಳೂರಿನಲ್ಲಿ ಯಥಾಸ್ಥಿತಿ

ಮುಸ್ಲಿಂ ವ್ಯಾಪಾರಿಗಳನ್ನ ಹೊರತುಪಡಿಸಿ ಮಂಗಳೂರು ನಗರ ಸೇರಿ ಜಿಲ್ಲೆಯ ಹಲವೆಡೆ ವ್ಯಾಪಾರ ವಹಿವಾಟು ಯಥಾ ಸ್ಥಿತಿಯಲ್ಲಿದೆ. ಬಸ್ ಸಂಚಾರ, ವಾಹನ ಸಂಚಾರ ಎಂದಿನಂತೆ ಇದ್ದು, ಮುಸ್ಲಿಂ ವ್ಯಾಪಾರಿಗಳು ವಹಿವಾಟು ಸ್ಥಗಿತ ಮಾಡಿದ ಕಾರಣ ಕೆಲ ಪ್ರದೇಶಗಳಲ್ಲಿ ಬಂದ್ ವಾತಾವರಣವಿತ್ತು.

ಇತ್ತ ರಾಜ್ಯದಲ್ಲಿ ಹಿಜಾಬ್ ವಿಚಾರವಾಗಿ ಕರ್ನಾಟಕ ಹೈ ಕೋರ್ಟ್ ತೀರ್ಪಿನ (High Court) ಬೆನ್ನಲ್ಲೆ, ಬುರ್ಕಾ ವಿಚಾರವಾಗಿ ಶಾಸಕ ಸಿ.ಟಿ ರವಿ ಮಾತನಾಡಿದ್ದರು. ಬುರ್ಕಾ ಗುಲಾಮಗಿರಿಯ ಸಂಕೇತ ಎಂದು ಅವರು ಹೇಳಿದ್ದರು. ಬುರ್ಕಾ ಬಗ್ಗೆ ಸಂವಿಧಾನ ಬರೆದ ಅಂಬೇಡ್ಕರ್ ಏನು ಹೇಳಿದ್ದಾರೆ ಓದಿದ್ದೀರಾ. ಬುರ್ಕಾ ಧರಿಸುವುದನ್ನ ಅಂಬೇಡ್ಕರ್ ಒಪ್ಪಿರಲಿಲ್ಲ. ಬುರ್ಕಾ ಅವರ ಮಾನಸಿಕ ಗುಲಾಮಗಿರಿಯನ್ನ ತೋರಿಸುತ್ತದೆ ಎಂದಿದ್ದರು. ಅಂಬೇಡ್ಕರ್ ವಿಚಾರಧಾರೆ ಮಾತಾಡುವವರು ಬುರ್ಕಾ ಬಗ್ಗೆ ಅಂಬೇಡ್ಕೆರ್ ಹೇಳಿದ್ದನ್ನ ಓದಿ ತಿಳಿದುಕೊಳ್ಳಿ ಎಂದು ಸಿ.ಟಿ ರವಿ (C T Ravi) ಹೇಳಿದ್ದಾರೆ. 

ಹಾಗೆ ನೋಡಿದರೆ ಫ್ರಾನ್ಸ್ ಸೇರಿದಂತೆ 12 ದೇಶಗಳಲ್ಲಿ ಬುರ್ಕಾ, ಹಿಜಾಬ್ ಬ್ಯಾನ್ ಮಾಡಲಾಗಿದೆ. ಆದರೆ ನಮ್ಮ ದೇಶದಲ್ಲಿ ಹಿಜಾಬ್ ಬ್ಯಾನ್ ಮಾಡಿಲ್ಲ. ಹಿಜಾಬ್ ವಿಚಾರವಾಗಿ ಹೈಕೋರ್ಟ್ ತೀರ್ಪು ಗಮನಿಸಿ. ಹಿಜಾಬ್ ಅನ್ನುನ ಸಾರ್ವಜನಿಕ ಸ್ಥಳಗಳಲ್ಲಿ ಹೈಕೋರ್ಟ್ ಬ್ಯಾನ್ ಮಾಡಿಲ್ಲ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನ ಎತ್ತಿ ಹಿಡಿದಿದ್ದಾರೆ ಅಷ್ಟೇ. ಶಾಲೆಯೊಳಗೆ ಎಲ್ಲ ಮಕ್ಕಳು ಒಂದೆ ಎಂಬ ಭಾವನೆಯಿಂದ ಈ ತೀರ್ಪು ನೀಡಿರಬಹುದು. ಹಿಜಾಬ್ ವಿಚಾರವಾಗಿ ಅಸಮಾಧಾನಗಳಿದ್ರೆ ಸುಪ್ರೀಂಕೋರ್ಟ್ ಗೆ ಚಾಲೆಂಜ್ ಮಾಡಬಹುದು. ಆದರೆ, ಬೆದರಿಸಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪನ್ನ ಗೌರವಿಸಿ ಪಾಲಿಸಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios