ಮೂಡಬಿದ್ರೆ ಇನ್ಸ್‌ಪೆಕ್ಟರ್ ಸಂದೇಶ್ ಮತ್ತೊಂದು ಕಾಮಕಾಂಡ, ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಕೇಸ್ ಬೆಳಕಿಗೆ ಬಂದಿದೆ. 2018 ರಿಂದ 2023ರ ವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಎಸಗಿದ್ದಾರೆ ಎಂದು ಸ್ವತಃ ಶಿಕ್ಷಕಿ ದೂರು ದಾಖಲಿಸಿದ್ದಾರೆ.

ವೇಣೂರು (ಮಾ.22) ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಕಾಮಕಾಂಡ ಪ್ರಕರಣ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿತ್ತು. ತನ್ನ ವ್ಯಾಪ್ತಿಯಲ್ಲಿ ಹಲವು ಕುಟಂಬಗಳ ಗಂಡನ ಮೇಲೆ ಕೇಸ್ ಹಾಕಿ ಅವರ ಹೆಂಡತಿಯರನ್ನು ಮಂಚಕ್ಕೆ ಕರೆಯುವ ಗಂಭೀರ ಆರೋಪ ಇನ್ಸ್‌ಪೆಕ್ಟರ್ ಸಂದೇಶ್ ಮೇಲೆ ಕೇಳಿಬಂದಿತ್ತು. ಈ ಕುರಿತು ಕೆಲ ಆಡಿಯೋಗಳು, ವಿಡಿಯೋಗಳು ಭಾರಿ ಸಂಚಲನ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಸಂದೇಶ್ ಅಮಾನತುಗೊಂಡಿದ್ದರು. ಇದೀಗ ಸಂದೇಶ್ ಮತ್ತೊಂದು ಕಾಮಕಾಂಡ ಬೆಳಕಿಗೆ ಬಂದಿದೆ. ಈ ಬಾರಿ ಶಿಕ್ಷಕಿಯೊಬ್ಬರು ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ದೂರು ನೀಡಿದ್ದಾರೆ. ಶಿಕ್ಷಕಿ ಮೇಲೆ ನಿರಂತರ ಅತ್ಯಾ*ರ ಎಸಗಿದ ಆರೋಪ ಕೇಳಿಬಂದಿದೆ. ಇದೀಗ ಸಂದೇಶ್ ವಿರುದ್ದ ಹೊಸ ಎಫ್ಐಆರ್ ದಾಖಲಾಗಿದೆ.

Add Asianetnews Kannada as a Preferred SourcegooglePreferred

2018 ರಿಂದ 2023 ರವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ

ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣೆಯಲ್ಲಿ ಅತ್ಯಾ*ರ ದೂರು ದಾಖಲಾಗಿದೆ. ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಸಂತ್ರಸ್ತೆ ಶಿಕ್ಷಕಿ ದೂರು ನೀಡಿದ್ದಾರೆ. ಸದ್ಯ ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಇದಕ್ಕೂ ಮೊದಲು ಬೆಳ್ತಂಗಡಿ ತಾಲೂಕಿನಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದರು. ಈ ವೇಳೆ 2018 ರಿಂದ 2023ರ ವರೆಗೆ ಶಿಕ್ಷಕಿ ಮನೆಗೆ ಹೋಗಿ ಅತ್ಯಾ*ರ ಮಾಡಿರುವುದಾಗಿ ಸ್ವತಃ ಶಿಕ್ಷಕಿ ದೂರು ನೀಡಿದ್ದಾರೆ. ಬೆಳ್ತಗಂಡಿ ಸರ್ಕಲ್ ವ್ಯಾಪ್ತಿಯಲ್ಲಿ ಬರುವ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲವು ಕಾರಣಗಳನ್ನು ಹಿಡಿದು, ಕೆಲ ಪ್ರಕರಣಗಳ ಕುರಿತು ಬೆದರಿಸಿ ನಿರಂತರವಾಗಿ ಅತ್ಯಾ*ರ ಮಾಡಿದ್ದಾರೆ. 2018 ರಿಂದ 2023ರವರೆಗೆ ಸತತ 5 ವರ್ಷಗಳ ಕಾಲ ಅತ್ಯಾ*ರ ಎಸಗಿದ್ದಾರೆ. ಜೀವ ಭಯ, ಮಾನ, ಕುಟುಂಬಸ್ಥರ ವಿರುದ್ಧವೂ ಬೆದರಿಕೆ ಹಾಕಿದ್ದ ಕಾರಣ ಮೌನವಾಗಿದ್ದೆ ಎಂದು ಶಿಕ್ಷಕಿ ದೂರಿನಲ್ಲಿ ಹೇಳಿದ್ದಾರೆ. 5 ವರ್ಷ ಬೆದರಿಸಿ ಬಲವಂತವಾಗಿ ನಿರಂತರ ಅತ್ಯಾ*ರ ಮಾಡಿದ್ದಾರೆ ಎಂದು ಶಿಕ್ಷಕಿ ಗಂಭೀರ ಆರೋಪ ಮಾಡಿದ್ದಾರೆ.

ಸಂದೇಶ್ ವಿರದ್ದ ಎಫ್ಐಆರ್ ದಾಖಲು

ಮೂಡಿಬಿದಿರೆ ಇನ್ಸ್‌ಪೆಕ್ಟರ್ ವಿರುದ್ದ ಇದೀಗ ಬಿಎನ್ ಎಸ್ 376(2)(A)(1), 376(2)(n), 384, 506 ಅಡಿ ಎಫ್ಐಆರ್ ದಾಖಲಾಗಿದೆ. ಈಗಾಗಲೇ ಮಹಿಳೆಯರನ್ನು ಲೈಂಗಿಕವಾಗಿ ಪೀಡಿಸಿದ ಆರೋಪ ಸಂದೇಶ್ ಮೇಲಿದೆ. ಇತ್ತೀಚೆಗೆ ಇಬ್ಬರು ಮಹಿಳೆಯರು ಮಾಡಿದ್ದ ಆರೋಪ ಬಾರಿ ಚರ್ಚೆಯಾಗಿತ್ತು. ಆದರೆ ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಇದು ಪ್ರಚೋದಿತ ಹಾಗೂ ಸುಳ್ಳು ಆರೋಪ ಎಂದು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶಿಕ್ಷಕಿಯೊಬ್ಬರು ದೂರು ನೀಡಿದ್ದು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಇಬ್ಬರು ಮಹಿಳೆಯರ ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದ್ದರು. ಇದಕ್ಕೆ ಪೂರಕವಾಗಿ ಆಡಿಯೋ ಹಾಗೂ ವಿಡಿಯೋ ವೈರಲ್ ಆಗಿತ್ತು. ಆಡಿಯೋದಲ್ಲಿ ಅರೆಸ್ಟ್ ಆಗಿರುವ ಗಂಡನ ಬಿಡುಗಡೆ ಮಾಡಲು 25 ಲಕ್ಷ ರೂಪಾಯಿ ನೀಡುವಂತೆ ಬೆದರಿಸಿದ್ದಾರೆ. ಇಲ್ಲದಿದ್ದರೆ ತನ್ನ ಜೊತೆ ಮಲಗುವಂತೆ ಬೆದರಿಸಿದ ಆಡಿಯೋ ಭಾರಿ ಕೋಲಾಹಲ ಸೃಷ್ಟಿಸಿತ್ತು. ಆದರೆ ಈ ಪ್ರಕರಣ ಸಂಬಂಧ ಪೊಲೀಸ್ ಪ್ರಾಥಮಿಕ ತನಿಖೆಗಳು ಹೊಸ ವರದಿ ನೀಡಿತ್ತು. ಮಹಿಳೆಯ ಆರೋಪದಲ್ಲಿ ಹುರುಳಿಲ್ಲ ಎಂದಿತ್ತು.