ಮಂಗಳೂರು(ನ.11): ಡೆಡ್ಲಿ ಸೋಮ ಚಿತ್ರದ ಖ್ಯಾತಿಯ ನಟ ಆದಿತ್ಯ ಶುಕ್ರವಾರ ಕುತ್ತಾರು ಶ್ರೀ ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಹರಕೆ ಸಲ್ಲಿಸಿದ್ದಾರೆ. ಬೇಜಾರಾದಾಗ ಮಂಗಳೂರಿಗೆ ಆಗಾಗ್ಗೆ ಬರುತ್ತೇನೆ. ಕರಾವಳಿಯ ಪುಣ್ಯಕ್ಷೇತ್ರಗಳ ದರ್ಶನ ಮಾಡಿದರೆ ಮನಸ್ಸಿಗೆ ಒಂದಷ್ಟು ಖುಷಿ ಕೊಡುತ್ತದೆ ಎಂದಿದ್ದಾರೆ.

ಬೇಡಿಕೆಯೊಂದನ್ನು ಸ್ನೇಹಿತನ ಮಾತಿನಂತೆ ಕೊರಗಜ್ಜ ಈಡೇರಿಸಿದ. ತಿಂಗಳು ಕಳೆದ ಬಳಿಕ ತಡವಾಗಿ ಹರಕೆಯನ್ನು ತೀರಿಸಿದ್ದೇನೆ ಎಂದು ನಟ ಹೇಳಿದ್ದಾರೆ. ಅಲ್ಲಿಂದ ಮುನ್ನೂರು ಗ್ರಾಮದ ಅತ್ಯಂತ ಕಾರಣಿಕ ದೈವಗಳಾದ ಶ್ರೀ ಪಂಜಂದಾಯ, ಬಂಟ, ವೈದ್ಯನಾಥ ಹಾಗೂ ಕೊರಗತನಿಯ ದೈವಗಳಿಗೆ ಪೂಜಾ ಕೈಂಕರ್ಯಕ್ಕೆ ಬೇಕಾದ ದೀಪದ ಎಣ್ಣೆ ತಯಾರಿಸುತ್ತಿದ್ದ, ಪ್ರಸ್ತುತ ಜೀರ್ಣೋದ್ಧಾರಗೊಳ್ಳುತ್ತಿರುವ ಗಾಣದಮನೆಯ ಕಾಮಗಾರಿ ವೀಕ್ಷಿಸಿದ್ದಾರೆ.

ಕೈ - ಕಮಲ ಬಿಗ್ ಫೈಟ್: ಪಾಲಿಕೆ ಚುಕ್ಕಾಣಿ ಹಿಡಿಯೋರ‍್ಯಾರು..?...

ನನಗೆ ಬಾಲ್ಯದಿಂದಲೂ ಕುಡ್ಲದ ನಂಟು ಇದೆ. ನಾನು ಮನೆಯಲ್ಲಿ ಕೊಂಕಣಿ ಮಾತನಾಡುತ್ತೇನೆ. ತುಳು ಕಲಿಯಬೇಕು ಎಂಬ ಆಸೆ ಇದೆ. ನಿಧಾನವಾಗಿ ತುಳು ಕಲಿಯುತ್ತಿದ್ದೇನೆ. ಹಾಸ್ಯ ಪ್ರಧಾನ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಆಸೆ ಬಹಳಷ್ಟಿದೆ. ಆದರೆ ಎಲ್ಲ ನಿರ್ದೇಶಕರು ಮಚ್ಚು ಕತ್ತಿಯೇ ಕೊಡುತ್ತಿದ್ದಾರೆ. ದಯವಿಟ್ಟು ಯಾರಾದರೂ ಒಳ್ಳೆಯ ನಿರ್ದೇಶಕರು ಒಳ್ಳೆಯ ಹಾಸ್ಯ ಪ್ರಧಾನ ಚಿತ್ರದ ಕಥೆ ಹಿಡಿದುಕೊಂಡು ಬನ್ನಿ. ನಾನು ಸದಾ ನಿಮ್ಮ ಜೊತೆಗೆ ಇದ್ದೇನೆ. ‘ಮುಂದುವರಿದ ಅಧ್ಯಾಯ’ ಎಂಬ ಆ್ಯಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ತೆರೆಗೆ ಬರಲಿದ್ದು, ಓಂ ಪ್ರಕಾಶ್ ನಿದೇಶನದ ‘ಆಪರೇಷನ್ ಟೈಗರ್’ ಭಾಗಶಃ ಮುಗಿದಿದೆ. ಡೆಡ್ಲಿ ಸೋಮ ಆಯಿತು, ಡೆಡ್ಲಿ -2 ಆಯಿತು ಈಗ ರವಿ ಶ್ರೀವಾಸ್ತವ ಡೆಡ್ಲಿ-3 ಮಾಡುತ್ತಿದ್ದಾರೆ.

ಮಂಗಳೂರು: ಪಾಲಿಕೆ ಚುನಾವಣೆ ಕರ್ತವ್ಯಕ್ಕೆ ಬಸ್ ನಿಯೋಜನೆ

ಜನವರಿಯಿಂದ ಮಂಗಳೂರಿನಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ. ಇತರ ಭಾಷೆಗಳಲ್ಲಿ ಆಫರ್ ಬಂದಿದೆ. ಚಿತ್ರ ನಿರ್ಮಾಣ ಮಾಡ್ತಿದ್ದೆ, ಸದ್ಯಕ್ಕೆ ನಿರ್ಮಾಣ ಯೋಜನೆ ಇಲ್ಲ. ನಟನೆಗೆ ಮಾತ್ರ ಆದ್ಯತೆ. ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ಬಹಳಷ್ಟು ಕನ್ನಡ ಸಿನಿಮಾ ಯಶಸ್ಸು ಕಾಣುತ್ತಿದ್ದು, ಇತರ ಇಂಡಸ್ಟ್ರಿಯಲ್ಲಿ ಆ ಯಶಸ್ಸು ಇಲ್ಲ. ಕನ್ನಡ ಉಳಿಸಿ ಬೆಳೆಸಿ ಎಂದು ಹೇಳಿದ್ದಾರೆ.