ಮಂಗಳೂರು: ಕಂಬಳ ವೇಳಾಪಟ್ಟಿ ಪ್ರಕಟ
ತುಳುನಾಡ ಸಂಸ್ಕೃತಿ ಕಂಬಳದ ವೇಳಾಪಟ್ಟಿ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಹಲವು ಕಡೆ ನಡೆಯುವ ಕಂಬಳ, ಯಾವಾಗ, ಎಲ್ಲಿ ನಡೆಯುತ್ತದೆ ಎಂಬ ಮಾಹಿತಿ ಇಲ್ಲಿದೆ.
ಮಂಗಳೂರು(ಅ.13): ಅವಿಭಜಿತ ದ.ಕ. ಜಿಲ್ಲಾ ಕಂಬಳ ಸಮಿತಿಯು 2019-20ನೇ ಸಾಲಿನಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.
ಇತ್ತೀಚೆಗೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆದ ಸಮಿತಿಯ ಮಹಾಸಭೆಯಲ್ಲಿ ಕಂಬಳಗಳ ದಿನಾಂಕದ ಬಗ್ಗೆ ಚರ್ಚಿಸಿ ಕರಡು ಪ್ರತಿ ಸಿದ್ಧಗೊಳಿಸಿದ್ದು, ಶುಕ್ರವಾರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವೇಳಾಪಟ್ಟಿ:
ನ. 30ರಂದು ಕಕ್ಯಪದವು, ಡಿ. 7ರಂದು ಹೋಕ್ಕಾಡಿಗೋಳಿ, ಡಿ. 14ರಂದು ಬಾರಡಿಬೀಡು, ಡಿ. 21ರಂದು ಮೂಡುಬಿದಿರೆ, ಡಿ. 25ರಂದು ಅಲ್ತಾರು, ಡಿ. 28ರಂದು ಮೂಲ್ಕಿ, 2020ರ ಜ. 4ರಂದು ಮಿಯಾರು, ಜ. 11ರಂದು ಅಡ್ವೆ, ಜ.18ರಂದು ಪುತ್ತೂರು, ಜ. 25ರಂದು ಮಂಗಳೂರು, ಫೆ. 1ರಂದು ಐಕಳ, ಫೆ. 8ರಂದು ಜಪ್ಪು, ಫೆ. 15ರಂದು ವಾಮಂಜೂರು, ಫೆ. 22ರಂದು ಪೈವಳಿಕೆ/ಸುರತ್ಕಲ್, ಫೆ. 29ರಂದು ಉಪ್ಪಿನಂಗಡಿ, ಮಾ.7ರಂದು ವೇಣೂರು, ಮಾ. 14ರಂದು ಬಂಗಾಡಿಕೊಲ್ಲಿ, ಮಾ. 21ರಂದು ತಲಪಾಡಿ ಹಾಗೂ ಮಾ. 29ರಂದು ಕಟಪಾಡಿಯಲ್ಲಿ ಕಂಬಳ ನಡೆಯಲಿದೆ.
ಕಂಬಳ, ಯಕ್ಷಗಾನ ಪ್ರವಾಸೋದ್ಯಮ: ಸಿ.ಟಿ.ರವಿ ಸೂಚನೆ