ಮಂಗಳೂರು: 'ಮಹಾ' ಅಬ್ಬರಕ್ಕೆ ಸಿಲುಕಿದ ಮೀನುಗಾರಿಕಾ ದೋಣಿ
ಕರಾವಳಿಯಲ್ಲಿ ಮಹಾ ಸೈಕ್ಲೋನ್ ಪ್ರಭಾವ ಕಾಣಿಸಿಕೊಳ್ಳುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾಸರಗೋಡು ಕಡಲಿನ ಭಾಗದಲ್ಲಿ ಮೀನುಗಾರಿಕಾ ದೋಣಿಯೊಂದು ಅಲೆಗಳ ದಾಳಿಗೆ ಸಿಲುಕಿದೆ.
ಕಾಸರಗೋಡು(ಅ.31): ಕರಾವಳಿಯಲ್ಲಿ ಮಹಾ ಸೈಕ್ಲೋನ್ ಪ್ರಭಾವ ಕಾಣಿಸಿಕೊಳ್ಳುತ್ತಿದ್ದು, ಅಲೆಗಳ ಅಬ್ಬರ ಹೆಚ್ಚಾಗಿದೆ. ಕಾಸರಗೋಡು ಕಡಲಿನ ಭಾಗದಲ್ಲಿ ಮೀನುಗಾರಿಕಾ ದೋಣಿಯೊಂದು ಅಲೆಗಳ ದಾಳಿಗೆ ಸಿಲುಕಿದೆ.
ಮೀನುಗಾರಿಕಾ ದೋಣಿ ಮಂಜೇಶ್ವರದಲ್ಲಿ ಕಡಲಿನ ಅಬ್ಬರಕ್ಕೆ ಸಿಲುಕಿದೆ. ಮಂಗಳೂರು ಗಡಿಭಾಗದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ 'ಮಹಾ' ಚಂಡಮಾರುತದ ಪರಿಣಾಮ ಮಂಜೇಶ್ವರದ ಕಡಲು ಅಬ್ಬರಿಸುತ್ತಿದೆ. ಭಾರೀ ಗಾತ್ರದ ಅಲೆಗಳಿಂದ ಮಂಜೇಶ್ವರ ಕಡಲ ತೀರದಲ್ಲಿ ಆತಂಕ ಸೃಷ್ಟಿಯಾಗಿದೆ.
ಮೀನುಗಾರಿಕೆಯಿಂದ ವಾಪಾಸಾಗುತ್ತಿದ್ದ ದೋಣಿ ಅಚಾನಕ್ ಆಗಿ ಕಡಲಿನ ಅಲೆಗಳಿಗೆ ಸಿಲುಕಿದೆ. ದೋಣಿ ಇನ್ನೇನು ದಡಕ್ಕೆ ತಲುಪುವ ವೇಳೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸಿದೆ. ದೋಣಿಗೆ ಅಲೆಗಳು ಅಪ್ಪಳಿಸೋ ದೃಶ್ಯ ಮೊಬೈಲ್ ಕ್ಯಾಮಾರದಲ್ಲಿ ಸೆರೆಯಾಗಿದೆ.
‘ಕ್ಯಾರ್’ ಆಯ್ತು, ಈಗ ‘ಮಹಾ’ ಸೈಕ್ಲೋನ್ ಭೀತಿ!
ಈಗಾಗಲೇ ಸೈಕ್ಲೋನ್ ಕ್ಯಾರ್‌ನಿಂದ ಕರಾವಳಿ ಪ್ರದೇಶ ತತ್ತರಿಸಿದ್ದು, ಕಳೆದೊಂದು ವಾರದಿಂದ ಭಾರೀ ಮಳೆಯಾಗಿದೆ. ಮೀನುಗಾರಿಕೆಗೂ ಸಮಸ್ಯೆಯಾಗಿದ್ದು, ಇನ್ನೇನು ಕ್ಯಾರ್ ಅಬ್ಬರ ಕಡಿಮೆಯಾಗುತ್ತಿದ್ದಂತೆ ಮಹಾ ಸೈಕ್ಲೋನ್ ಬೀತಿ ಆವರಿಸಿದೆ. ಮಂಗಳೂರು, ಉಡುಪಿ, ಕಾಸರಗೋಡು ಸೇರಿ ಕರಾವಳಿ ಭಾಗದಲ್ಲಿ ಸೈಕ್ಲೋನ್ ಪ್ರಭಾವ ಕಂಡುಬರಲಿದ್ದು, ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.