ಮಂಗಳೂರು(ಜೂ.28): ಕಳೆದ ಒಂದೂವರೆ ವರ್ಷದಿಂದ ಮಂಗಳೂರಿನ ಪೊಲೀಸ್ ಕಮಿಷನರ್ ಆಗಿ ಆಗಮಿಸಿದ IPS ಹರ್ಷಾ ಇದೀಗ ಮತ್ತೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಮಂಗಳೂರಿನಲ್ಲಿ ಅತ್ಯುತ್ತಮ ಕೆಲಸದ ಮೂಲಕ ಎಲ್ಲರ ಪ್ರೀತಿ ಪಾತ್ರರಾಗಿದ್ದ ಹರ್ಷ ಇದೀಗ ಮಂಗಳೂರಿಗೆ ವಿದಾಯ ಹೇಳಿದ್ದಾರೆ. ಈ ವೇಳೆ ತುಳುವಿನಲ್ಲಿ ಟ್ವೀಟ್ ಮಾಡೋ ಮೂಲಕ ಮಂಗಳೂರಿಗರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಡಾ. ಹರ್ಷ ವರ್ಗ, ನೂತನ ಕಮಿಷನರ್‌ ವಿಕಾಸ್‌ ಕುಮಾರ್.

ಮಂಗಳೂರಿನ ಪ್ರೀತಿಯ ಬಂಧುಗಳೇ, ಕಳೆದ 11 ತಿಂಗಳಿನಿಂದ ಮಂಗಳೂರಿನ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ ನನಗೆ ಇದೀಗ ವರ್ಗಾವಣೆ ಆಗಿದೆ.  ಇಲಾಖೆಯ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಹಾಗೂ ಜನಪರ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ನನಗೆ ಸಹಕಾರ ನೀಡಿದ ಎಲ್ಲರಿಗೂ ಪ್ರೀತಿ ಪೂರ್ವಕ ನಮನಗಳು ಎಂದು ಹರ್ಷ ತುಳು ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ.

 

ಐಪಿಎಸ್ ಹರ್ಷಾರನ್ನು ಬೆಂಗಳೂರಿನ ವಾರ್ತಾ ಇಲಾಖೆ ಆಯುಕ್ತರಾಗಿ ವರ್ಗಾವಣೆ ಮಾಡಲಾಗಿದೆ. ತೆರವಾದ ಸ್ಥಾನಕ್ಕೆ ಕಾರ್ಕಳದ ನಕ್ಸಲ್ ನಿಗ್ರಹ ಪಡೆಯ ಡಿಐಜಿ ವಿಕಾಸ್ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ. ಹರ್ಷಾ ಪೊಲೀಸ್ ಆಯುಕ್ತರಾದ ಬಳಿಕ ಮಂಗಳೂರಿನಲ್ಲಿ ಶಾಂತಿ ಸುವ್ಯಸ್ಥವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆಗೆ ಹರ್ಷ ಪಾತ್ರರಾಗಿದ್ದಾರೆ.