ಸುಟ್ಟು ಕರಕಲಾದ ಸ್ಥತಿಯಲ್ಲಿ ವೃದ್ಧ ದಂಪತಿಗಳ ಶವ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಚೆಂಬುಗುಡ್ಡೆಯಲ್ಲಿ ಪದ್ಮನಾಭ(72), ವಿಮಲ(60) ಅವರ ಮೃತದೇಹಗಳು ಪತ್ತೆಯಾಗಿವೆ.
ಮಂಗಳೂರು[ಜೂ. 19] ಮನೆಯಲ್ಲಿ ಸುಟ್ಟು ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಮೃತದೇಹ ಪತ್ತೆಯಾಗಿದೆ. ಬುಧವಾರ ಬೆಳಿಗ್ಗೆ ಚೆಂಬುಗುಡ್ಡೆ ನಿವಾಸಿಗಳಾದ ಪದ್ಮನಾಭ (72) ಹಾಗೂ ವಿಮಲ (60) ಮೃತದೇಹಗಳು ಅನುಮಾನಾಸ್ಪದ ರೀತಿ ಪತ್ತೆಯಾಗಿವೆ.
ಮೃತ ದಂಪತಿಗಳಿಗೆ ಮೂವರು ಮಕ್ಕಳಿದ್ದು ಎಲ್ಲರೂ ಮದುವೆಯಾಗಿ ಬೇರೆ ಬೇರೆ ವಾಸಮಾಡುತ್ತಿದ್ದಾರೆ. ಬುಧವಾರ ಮಧ್ಯಾಹ್ನ ಮೃತ ಪದ್ಮನಾಭ ಅವರ ಅಳಿಯ ಉಮಾರಾವ್ ಮನೆಗೆ ಆಗಮಿಸಿದ್ದಾರೆ. ಈ ವೇಳೆ ಮನೆಯೊಳಗಿನಿಂದ ದುರ್ವಾಸನೆ ಬಂದಿದೆ. ಅನುಮಾನಗೊಂಡು ಸ್ಥಳೀಯರ ನೆರವಿನಿಂದ ಪೋಲೀಸರಿಗೆ ಮಾಹಿತಿ ನೀಡಿದಾಗ ಅತ್ತೆ-ಮಾವ ಅನುಮಾನಾಸ್ಪದ ರೀತಿ ಸಾವನ್ನಪ್ಪಿರುವುದು ಕಂಡುಬಂದಿದೆ.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ.
