ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರ್ಕಾರದ ವಶಕ್ಕೆ..?
ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರ್ಕಾರದ ವಶಕ್ಕೆ ಪಡೆಯುವ ವಿಚಾರವಾಗಿ ಸರ್ಕಾರಕ್ಕೆ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನವೆಂಬರ್‌ನಲ್ಲಿ ಕಟೀಲು ಮೇಳ ಹೊರಡುವ ಮೊದಲೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಗಳೂರು(ಅ.19): ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರ್ಕಾರದ ವಶಕ್ಕೆ ಪಡೆಯುವ ವಿಚಾರವಾಗಿ ಸರ್ಕಾರಕ್ಕೆ ಯಾವುದೇ ಗೊಂದಲಗಳಿಲ್ಲ ಎಂದು ಮುಜರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಸರ್ಕಾರದ ವಶಕ್ಕೆ ಪಡೆಯುವ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಚಿವರು, ನವೆಂಬರ್‌ನಲ್ಲಿ ಕಟೀಲು ಮೇಳ ಹೊರಡುವ ಮೊದಲೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೇಕಲ ಶಾಲೆಗೆ ಶೀಘ್ರ ಕನ್ನಡಿಗ ಶಿಕ್ಷಕರ ನೇಮಕ
ಕಟೀಲು ಯಕ್ಷಗಾನ ಮೇಳದ ಪರಂಪರೆಯಿಂದ ಬಂದ ವ್ಯವಸ್ಥೆಯನ್ನ ಪ್ರಶ್ನಿಸಿ ಕೆಲವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಈ ಬಗ್ಗೆ ಹೈಕೋರ್ಟ್ ಮೇಳವನ್ನುಏಲಂ ಪ್ರಕ್ರಿಯೆಯಲ್ಲಿ ಪಾರದರ್ಶಕವಾಗಿ ಮಾಡಬೇಕು ಎಂದು ಆದೇಶಿಸಿತ್ತು. ಹೀಗಾಗಿ ನ್ಯಾಯಾಲಯ ಸೂಚನೆ ಬಳಿಕ ದ.ಕ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ ಎಂದಿದ್ದಾರೆ.
ಈಗಾಗಲೇ ಒಂದು ಬಾರಿ ಚರ್ಚೆಗೆ ಬಂದಿದ್ದು, ಪೂರ್ಣ ಪ್ರಮಾಣದಲ್ಲಿ ಚರ್ಚೆ ನಡೆಸುತ್ತೇವೆ. ಈ ಬಗ್ಗೆ ಸರ್ಕಾರ ಅಥವಾ ಇಲಾಖೆಯಲ್ಲಿ ಯಾವುದೇ ಗೊಂದಲವಿಲ್ಲ. ನ್ಯಾಯಾಲಯ, ಜಿಲ್ಲಾಧಿಕಾರಿ ವರದಿ ಮತ್ತು ಯಕ್ಷಗಾನ ಕಲಾವಿದರ ಅಭಿಪ್ರಾಯ, ಆಡಳಿತ ಮಂಡಳಿ ಅಭಿಪ್ರಾಯ ಕ್ರೋಢಿಕರಿಸುತ್ತೇವೆ ಎಂದು ಹೇಳಿದ್ದಾರೆ.
ಪಾರದರ್ಶಕತೆಯಿಂದ ತೀರ್ಮಾನ:
ಯಾವುದೇ ಸಂಕೋಚ, ಸಂದೇಹ ಮತ್ತು ಪಾರದರ್ಶಕತೆ ಬಗ್ಗೆ ಗೊಂದಲವಿಲ್ಲದೇ ತೀರ್ಮಾನಕ್ಕೆ ಬರುತ್ತೇವೆ. ನವೆಂಬರ್‌ನಲ್ಲಿ ಕಟೀಲು ಮೇಳ ಹೊರಡುವ ಮೊದಲೇ ಈ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಟೀಲು ಯಕ್ಷಗಾನ ಮೇಳದ ಅವ್ಯವಹಾರಗಳ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ಖಾಸಗಿ ಆಡಳಿತದಲ್ಲಿ ಕಲಾವಿದರ ಸಂಕಷ್ಟಗಳ ಬಗ್ಗೆ ಸುವರ್ಣ ನ್ಯೂಸ್ ತನ್ನ ವರದಿಯಲ್ಲಿ ಬೆಳಕು ಚೆಲ್ಲಿತ್ತು.
ಚುನಾವಣೆಗೆ ಅಗ್ರೆಸಿವ್ ಪ್ರಚಾರ ಮಾಡಿ ಎಂದ ಸಿದ್ದು