Asianet Suvarna News Asianet Suvarna News

ಮಂಗಳೂರು ಏರ್‌ಪೋರ್ಟ್‌ನಲ್ಲಿ 2 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ!

ಮಂಗಳೂರು ಏರ್‌ಪೋರ್ಟ್‌ನಲ್ಲಿ 2 ಕೋಟಿ ಮೌಲ್ಯದ ಚಿನ್ನ ಪತ್ತೆ|  5 ಕೇಜಿ ಚಿನ್ನ ವಶಪಡಿಸಿಕೊಂಡು ಇಬ್ಬರು ಆರೋಪಿಗಳ ಬಂಧನ

Gold Worth of Two Crore Rupees Found In Mangalore Old Airport two Are Arrested
Author
Bangalore, First Published Jan 15, 2020, 8:25 AM IST
  • Facebook
  • Twitter
  • Whatsapp

ಮಂಗಳೂರು[ಜ.15]: ಕಂದಾಯ ನಿರ್ದೇಶನಾಲಯದ ಬೆಂಗಳೂರು ಮತ್ತು ಮಂಗಳೂರಿನ ಅಧಿಕಾರಿಗಳು ಮಂಗಳೂರಿನ ಬಜ್ಪೆ ಹಳೆ ವಿಮಾನ ನಿಲ್ದಾಣದಲ್ಲಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ಸುಮಾರು 2 ಕೋಟಿ ಮೌಲ್ಯದ 5 ಕೇಜಿ ಚಿನ್ನವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಉಡುಪಿಯ ಸ್ವರೂಪ್‌ ಮಿನರಲ್‌ ರಿಸೋರ್ಸಸ್‌ ಕಂಪನಿ ನಿರ್ದೇಶಕ ಮನೋಹರ್‌ ಕುಮಾರ್‌ ಪೂಜಾರಿ ಮತ್ತು ಮಂಗಳೂರಿನ ಅಶೋಕನಗರ ನಿವಾಸಿ ಲೋಹಿತ್‌ ಶ್ರೀಯಾನ್‌ ಬಂಧಿತ ಆರೋಪಿಗಳು.

8 ಲಕ್ಷ ರುಪಾಯಿ ಮೌಲ್ಯ ಚಿನ್ನಾಭರಣ ಹಿಂತಿರುಗಿಸಿದ ಹೋಮ್‌ಗಾರ್ಡ್‌

ಗಣಿ ಉದ್ಯಮದಲ್ಲಿ ಬಳಸುವ ಲೋಹದ ಕನ್ವೆಯರ್‌ ಡ್ರೈವ್‌ ಚೈನ್‌ನ ಒಳಭಾಗದಲ್ಲಿರಿಸಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದರು. ಬೆಂಗಳೂರು ಮತ್ತು ಮಂಗಳೂರು ಡಿಆರ್‌ಐ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಡಿಆರ್‌ಐ ಉಪ ನಿರ್ದೇಶಕ ಶ್ರೇಯಸ್‌ ಕೆ.ಎಂ.ತಿಳಿಸಿದ್ದಾರೆ.

Follow Us:
Download App:
  • android
  • ios