Asianet Suvarna News Asianet Suvarna News

8 ಲಕ್ಷ ರುಪಾಯಿ ಮೌಲ್ಯ ಚಿನ್ನಾಭರಣ ಹಿಂತಿರುಗಿಸಿದ ಹೋಮ್‌ಗಾರ್ಡ್‌

8 ಲಕ್ಷ ರೂಪಾಯಿ ಮೌಲ್ಯದ ಆಭರಣ ಬಿದ್ದು ಸಿಕ್ಕಿದರೆ ನೀವೇನ್ಮಾಡ್ತೀರಾ..? ಮಂಗಳೂರಿನ ವ್ಯಕ್ತಿಯೊಬ್ಬರು ತಮಗೆ ಸಿಕ್ಕಿದ ಅಷ್ಟೂ ಆಭರಣವನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

man returns gold worth rupees 8 lakh to its owner in mangalore
Author
Bangalore, First Published Jan 15, 2020, 9:43 AM IST

ಮಂಗಳೂರು(ಜ.15): 8 ಲಕ್ಷ ರೂಪಾಯಿ ಮೌಲ್ಯದ ಆಭರಣ ಬಿದ್ದು ಸಿಕ್ಕಿದರೆ ನೀವೇನ್ಮಾಡ್ತೀರಾ..? ಮಂಗಳೂರಿನ ವ್ಯಕ್ತಿಯೊಬ್ಬರು ತಮಗೆ ಸಿಕ್ಕಿದ ಅಷ್ಟೂ ಆಭರಣವನ್ನು ಮಾಲೀಕರಿಗೆ ಒಪ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಬೆಳ್ತಂಗಡಿ ತಾಲೂಕು ಕುಕ್ಯೇಡಿ ಗ್ರಾಮದ ನಿವಾಸಿ ರತ್ನಾಕರ್‌ ಅವರು ತನಗೆ ಸಿಕ್ಕಿದ 8 ಲಕ್ಷ ರು. ಮೌಲ್ಯದ ಚಿನ್ನಾಭರಣವನ್ನು ಅದರ ಮಾಲೀಕರಿಗೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವೆ ಎಂದು ಸರ್ಕಾರಕ್ಕೆ ಪತ್ರ ಬರೆದ ಗಣಿ ಧಣಿ!

ರತ್ನಾಕರ್‌ ಅವರು ಗೃಹ ರಕ್ಷಕ ದಳದ ಸಿಬ್ಬಂದಿಯಾಗಿ ಕಳೆದ 6 ತಿಂಗಳಿನಿಂದ ಬೆಳ್ತಂಗಡಿ ಅಗ್ನಿ ಶಾಮಕ ದಳದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಮಾನವೀಯ ಕಾರ್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹ ರಕ್ಷಕ ದಳದ ಹೋಮ್‌ ಕಮಾಂಡೆಂಟ್‌ ಡಾ.ಮುರಲೀ ಮೋಹನ್‌ ಚೂಂತಾರು ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಕೊಡಗು: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಗೆ ಶೀಘ್ರ ಚಾಲನೆ

Follow Us:
Download App:
  • android
  • ios