Asianet Suvarna News Asianet Suvarna News

ವಿದ್ಯುತ್ ಬೆಲೆಯೇರಿಕೆ ಆದ್ರೂ ಇವ್ರಿಗೆ ನೋ ಟೆನ್ಶನ್: ರೈತರಿಂದಲೇ ವಿದ್ಯುತ್ ಉತ್ಪಾದನೆ!

  • ವಿದ್ಯುತ್ ಬೆಲೆ ಎಷ್ಟೇ ಹೆಚ್ಚಾದ್ರೂ ಇವರಿಗೆ ನೋ ಟೆನ್ಶನ್
  • ಅಯ್ಯೋ ಬಿಲ್ ಕಟ್ಟಿಲ್ಲ ಅಂತ ಇವರು ತಲೆಕೆಡಿಸಿಕೊಳ್ಳೋ ಅವಶ್ಯಕತೆಯೇ ಇಲ್ಲ
  • ತಮಗೆ ಬೇಕಾದ ವಿದ್ಯುತ್ ತಾವೇ ಉತ್ಪಾದಿಸ್ತಾರೆ ಇವರು
Farmers produce electricity themselves in Puttur dpl
Author
Bangalore, First Published Jun 24, 2021, 4:09 PM IST

ರಾಘವೇಂದ್ರ ಅಗ್ನಿಹೋತ್ರಿ

ಮಂಗಳೂರು(ಜೂ.24): ಕೊರೋನಾ ಸಂಕಷ್ಟದ ಸಮಯದಲ್ಲಿ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವದನ್ನು ಎಲ್ಲೆಡೆ ವಿರೋಧಿಸಲಾಗುತ್ತಿದೆ. ಆದರೆ ದಕ್ಷಿಣ ಕನ್ನಡದ ರೈತರೊಬ್ಬರಿಗೆ ವಿದ್ಯುತ್ ಬಿಲ್‌ನ ತಲೆಬಿಸಿಯೇ ಇಲ್ಲ. ಮನಸ್ಸಿದ್ದರೆ ಮಾರ್ಗವೆಂಬಂತೆ ಸರ್ಕಾರದ ಹಂಗಿಲ್ಲದೆ ಮಳೆಗಾಲದಲ್ಲಿ ಸ್ವತಃ ವಿದ್ಯುತ್ ಉತ್ಪಾದಿಸುತ್ತಿದ್ದಾಾರೆ. ಇವರು ಎಂಜಿನಿಯರ್ ಅಲ್ಲ, ರೈತರೊಬ್ಬರು ಕಳೆದ ೧೭ ವರ್ಷಗಳಿಂದ ವಿದ್ಯುತ್ ಉತ್ಪಾಾದಿಸುತ್ತಿರುವುದೇ ವಿಶೇಷ.

ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಪ್ರಗತಿಪರ ಕೃಷಿಕ ಬಲ್ನಾಡು ಸುರೇಶ್ ಅವರು ಮಳೆಗಾಲ ಆರಂಭದ ಜೂನ್ ತಿಂಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದರೆ ಆರು ತಿಂಗಳ ಕಾಲ ಸ್ವಂತ ವಿದ್ಯುತ್‌ನಲ್ಲೇ ಬೆಳಕು ಕಾಣುತ್ತಿದ್ದಾರೆ. ಕಡಿಮೆ ಖರ್ಚಿನಲ್ಲೇ ವಿದ್ಯುತ್ ಉತ್ಪಾದಿಸುವ ಮೂಲಕ ರೈತರಿಗೆ ಪ್ರೇರಣೆಯಾಗಿದ್ದಾರೆ. ಜಲವಿದ್ಯುತ್ ಘಟಕದ ಮೂಲಕ ವಿದ್ಯುತ್ ಆತ್ಮನಿರ್ಭರತೆ ಸಾಧಿಸಿ ಇತರ ರೈತರಿಗೆ ಮಾದರಿಯಾಗಿದ್ದಾಾರೆ.

ಹೇಗೆ ವಿಚಾರ ಬಂತು?: 

ಕೊಪ್ಪದಲ್ಲಿ ರೈತರೊಬ್ಬರು ವಿದ್ಯುತ್ ಉತ್ಪಾದಿಸುವ ಕುರಿತು ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ತಾವೂ ಏಕೆ ವಿದ್ಯುತ್ ಉತ್ಪಾದನೆ ಮಾಡಬಾರದು ಎಂಬ ಚಿಂತನೆ ಸುರೇಶ್ ಅವರಲ್ಲಿ ಮೊಳೆಯುತ್ತದೆ. ಹಗಲಿರುಳು ಯೋಚಿಸಿ ಯೋಜನೆ ರೂಪಿಸುತ್ತಾರೆ. ಅದು ಕಾರ್ಯಗತವಾಗಿ ಇಂದು ಸ್ವಂತ ಬೆಳಕು ಕಾಣುವಲ್ಲಿ ಯಶಸ್ಸು ಸಾಧಿಸಿದ್ದಾಾರೆ.

ಹೇಗೆ ಉತ್ಪತ್ತಿ?:

ಬಲ್ನಾಾಡಿನ 16 ಎಕ್ರೆ ವಿಶಾಲ ಪ್ರದೇಶದಲ್ಲಿ ಇವರಿಗೆ ಪ್ರಾಕೃತಿಕವಾಗಿ ಎತ್ತರ ಪ್ರದೇಶವಿದೆ. 60 ಅಡಿ ಎತ್ತರದಲ್ಲಿ ಟ್ಯಾಂಕ್ ನಿರ್ಮಿಸಿದ್ದು, ಮಳೆಗಾಲದಲ್ಲಿ 3 ಲಕ್ಷ ಲೀಟರ್ ನೀರು ಸಂಗ್ರಹವಾಗುತ್ತದೆ. ಆ ಟ್ಯಾಂಕ್‌ನ ನೀರನ್ನು ಗುರುತ್ವಾಕರ್ಷಣೆಯ ಆಧಾರದಲ್ಲಿ ಒತ್ತಡದ (ಪ್ರೆಶರ್) ಮೂಲಕ ಪೈಪ್‌ನಲ್ಲಿ ತಗ್ಗು ಪ್ರದೇಶಕ್ಕೆ ಹರಿಸಿ ಟರ್ಬೈನ್ ಮೂಲಕ ವಿದ್ಯುತ್ ಉತ್ಪಾಾದಿಸಿದ್ದಾರೆ.

Farmers produce electricity themselves in Puttur dpl

ಎತ್ತರದಲ್ಲಿ ಆರಂಭಕ್ಕೆ 6 ಇಂಚು, ಬಳಿಕ 4 ಇಂಚು, ಮತ್ತೆ ಕೆಳಗೆ ಬರುತ್ತಿದ್ದಂತೆ 2 ಇಂಚು, ಒಂದುವರೆ ಇಂಚು ಗಾತ್ರದ ಪಿವಿಸಿ ಪೈಪ್‌ನಲ್ಲಿ ನೀರು ಟರ್ಬೈನ್ ತಲಪುತ್ತದೆ. ಒತ್ತಡದಲ್ಲಿ ನೀರು ಬೀಳುವಾಗ ಟರ್ಬೈನ್ ತಿರುಗಲು ಪ್ರಾರಂಭವಾಗಿ ಡೈನೆಮೊ ಮೂಲಕ ವಿದ್ಯುತ್ ಉತ್ಪಾಾದನೆ ಆಗುತ್ತೆ. ಪೈಪ್‌ನಲ್ಲಿ ನೀರಿನ ಜೊತೆ ಗಾಳಿಹೋಗದಂತೆ ಏರ್‌ಟೈಟ್ ಮಾಡಲಾಗಿದೆ. ಗಾಳಿ ಹೋದರೆ ವೋಲ್ಟೇಜ್‌ಲ್ಲಿ ವ್ಯತ್ಯಾಸ ಬರುತ್ತದೆ.

ಎಷ್ಟು ಉತ್ಪಾದನೆ?:

ಈಗ ಜೂನ್ ತಿಂಗಳಲ್ಲಿ ಉತ್ತಮ ಮಳೆ ಸುರಿಯುತ್ತಿದೆ. ಇವರಲ್ಲಿ ಜೂನ್‌ನಿಂದಲೇ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ವರ್ಷದ 6 ತಿಂಗಳು ವಿದ್ಯುತ್ ಉತ್ಪಾದಿಸಿ ಮನೆಗೆ ಬೇಕಾಗುವಷ್ಟು ಅಂದರೆ 20 ಲೈಟ್, 4 ಫ್ಯಾನ್, ಟಿ.ವಿ. ಸ್ವಂತ ವಿದ್ಯುತ್‌ನಲ್ಲೇ ಉರಿಸುತ್ತಿದ್ದಾರೆ. ಇವಿಷ್ಟು ಉತ್ಪಾದನೆಗೆ 2004 ರಲ್ಲಿ ಸುರೇಶ್ ಅವರಿಗೆ 70 ಸಾವಿರ ರು. ಖರ್ಚು ತಗಲಿದೆ. ಈಗ ವರ್ಷಕ್ಕೊಮ್ಮೆ ಸಾಮಾನ್ಯ ನಿರ್ವಹಣೆ ವೆಚ್ಚ ಮಾತ್ರ ಬರುತ್ತಿದೆ. ಎರಡು ವರ್ಷಗಳಿಗೊಮ್ಮೆ ಬೆಲ್‌ಟ್‌ ಬದಲಿಸಬೇಕಾಗುತ್ತದೆ, ಇಷ್ಟೇ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಸ್ವಾಾವಲಂಬನೆ ಸಾಧ್ಯವಾಗಿದೆ.
ಇದರೊಂದಿಗೆ, ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿ ಸುರೇಶ್ ಬಲ್ನಾಾಡು ಯಶಸ್ವಿಯಾಗಿದ್ದಾಾರೆ. ಕಿರು ಜಲವಿದ್ಯುತ್ ಘಟಕವನ್ನು ನೋಡಲು ಎಂಜನೀಯರಿಂಗ್ ವಿದ್ಯಾರ್ಥಿಗಳು, ಕೃಷಿಕರು ಹಾಗೂ ಆಸಕ್ತರ ದಂಡೇ ಇವರ ಮನೆಗೆ ಪ್ರತಿ ವರ್ಷ ಬರುತ್ತಾಾರೆ. ಸಾಧನೆ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿವೆ. ಜಿಲ್ಲಾ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರದಿಂದ ಲಾಕ್‌ಡೌನ್ ಸಡಿಲಿಕೆ?

ಜಲವಿದ್ಯುತ್ ಉತ್ಪಾದನೆಗೆ ಎತ್ತರದ ಪ್ರದೇಶವಿದ್ದರೆ ಉತ್ತಮ. ನಮ್ಮಲ್ಲಿ ೬೦ ಅಡಿ ಎತ್ತರದಲ್ಲಿ ೩ ಲಕ್ಷ ಲೀಟರ್ ನೀರು ಸಂಗ್ರಹವಾಗುವ ಟ್ಯಾಾಂಕ್ ಇದೆ. ಕನಿಷ್ಠ 30 ಅಡಿ ಎತ್ತರದಲ್ಲಿ 10 ಸಾವಿರ ಲೀಟರ್ ಸಂಗ್ರಹದ ಟ್ಯಾಂಕ್ ಇದ್ದರೆ ಘಟಕಕ್ಕೆ ಉತ್ತಮ. ನೀರಿನ ಜೊತೆ ಪೈಪ್‌ಲ್ಲಿ ಗಾಳಿ ಹೋಗಬಾರದು, ನೀರಿನ ಜೊತೆ ಗಾಳಿ ಹೋದರೆ ವೋಲ್ಟೇಜ್ ವ್ಯತ್ಯಾಸ ಬರುತ್ತದೆ. ಅದಕ್ಕಾಾಗಿ ಏರ್‌ಟೈಟ್ ವ್ಯವಸ್ಥೆ ಮಾಡಲಾಗಿದೆ. ಇದು ಕಡಿಮೆ ವೆಚ್ಚದಲ್ಲಿ ಸುಲಭದಲ್ಲಿ ವಿದ್ಯುತ್ ತಯಾರಿಸುವ ವಿಧಾನ ರೈತರೆಲ್ಲ ಅಳವಡಿಸಿಕೊಂಡರೆ ಉತ್ತಮ.
-ಸುರೇಶ್ ಬಲ್ನಾಾಡು, ಪ್ರಗತಿಪರ ಕೃಷಿಕ, ಪುತ್ತೂರು

Follow Us:
Download App:
  • android
  • ios