ಮಂಗಳೂರು [ಅ.09]: ಸರಳತೆಗೆ ಹೆಸರಾಗಿರುವ ಮೀನುಗಾರಿಕೆ ಮತ್ತು ಬಂದರು ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನಗರದ ಹೋಟೆಲ್‌ವೊಂದರ ಹೊರಗಡೆ ನಿಂತು ತಿಂಡಿ ತಿನ್ನುವ ಮೂಲಕ ಅಲ್ಲಿದ್ದವರ ಅಚ್ಚರಿಗೆ ಕಾರಣರಾಗಿದ್ದಾರೆ.

ಈ ಫೋಟೊಗಳು ಜಾಲತಾಣದಲ್ಲೀಗ ವೈರಲ್‌ ಆಗಿವೆ. ಭಾನುವಾರ ಕುದ್ರೋಳಿ ದೇವಾಲಯದಲ್ಲಿ ಮಂಗಳೂರು ದಸರಾ ಉದ್ಘಾಟನೆ ಬಳಿಕ ಸಚಿವರು ಬೆಂಗಳೂರಿಗೆ ಹೊರಡುವವರಿದ್ದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದಾಗಲೇ ತಡವಾಗಿದ್ದರಿಂದ ನಗರದ ಸಕ್ರ್ಯೂಟ್‌ ಹೌಸ್‌ ಮುಂಭಾಗದಲ್ಲಿ ಕಾರು ನಿಲ್ಲಿಸಿದವರೇ ಅಲ್ಲಿದ್ದ ಸಣ್ಣ ಹೋಟೆಲ್‌ ಒಂದಕ್ಕೆ ಹೋಗಿ ಹೊರಗಡೆಯೇ ನಿಂತುಕೊಂಡು ತಿಂಡಿ ತಿಂದರು. ಸಚಿವರೊಂದಿಗೆ ಆಗಮಿಸಿದ್ದ ಬೆಂಗಾವಲು ಸಿಬ್ಬಂದಿ, ಗನ್‌ಮ್ಯಾನ್‌, ಪಿಎ ಕೂಡ ತಿಂಡಿ ಸೇವನೆ ಮಾಡಿದರು. ಬಳಿಕ ಅಲ್ಲಿಂದ ವಿಮಾನ ನಿಲ್ದಾಣಕ್ಕೆ ತೆರಳಿದರು.

ಸಚಿವರಾದರೂ ಸರಳತೆ ತೋರಿದ ಕೋಟ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.