ಧರ್ಮಸ್ಥಳ ತೆಲೆಬುರುಡೆ ಪ್ರಕರಣದ ವಿಚಾರಣೆ ತೀವ್ರಗೊಂಡಿದೆ. ಎಸ್ಐಟಿ ಅಧಿಕಾರಿಗಳು ದೂರು ನೀಡಿದ್ದ ಮುಸುಕುಧಾರಿ ವ್ಯಕ್ತಿಯನ್ನು ಸತತ 8 ಗಂಟೆಗಳ ಕಾಲ ವಿಚಾರಣೆ ಮಾಡಿದ್ದಾರೆ.ಇಂದಿನ ವಿಚಾರಣೆ ಅಂತ್ಯಗೊಂಡ ಬೆನ್ನಲ್ಲೇ ಮುಸುಕುಧಾರಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ಮಂಗಳೂರು (ಜು.26) ಧರ್ಮಸ್ಥಳದಲ್ಲಿ ನಡೆದಿದೆ ಎಂದು ಆರೋಪಿಸಿರುವ ನೂರೂರು ಶವಗಳ ಹೂತಿಟ್ಟ ಪ್ರಕರಣ ಹಾಗೂ ಭಾರಿ ಕೋಲಾಹಲ ಸೃಷ್ಟಿಸಿದ್ದ ಇತರ ಪ್ರಕರಣಗಳು ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದೆ. ಈ ಘಟನೆ ಸಂಬಂಧ ಶವಗಳನ್ನು ತಾನು ಧರ್ಮಸ್ಥಳದ ನೌಕರನಾಗಿದ್ದ ವೇಳೆ ಹೂತಿಟ್ಟಿದ್ದೆ ಅನ್ನೋ ಸ್ಫೋಟಕ ಆರೋಪದಿಂದ ರಚನೆಯಾದ ಎಸ್ಐಟಿ ತಂಡ ಇದೀಗ ವಿಚಾರಣೆ ತೀವ್ರಗೊಳಿಸಿದೆ. ಎಸ್ಐಟಿ ಅಧಿಕಾರಿಗಳು ಈ ಆರೋಪ ಮಾಡಿದ ಮುಸುಕುಧಾರಿ ವ್ಯಕ್ತಿಯನ್ನು ಕಚೇರಿಗೆ ಕರೆಯಿಸಿಕೊಂಡು ಸತತ 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇದೀಗ ವಿಚಾರಣೆ ಅಂತ್ಯಗೊಂಡಿದ್ದು, ಮುಸುಕುಧಾರಿ ವ್ಯಕ್ತಿ ಅಜ್ಞಾನತ ಸ್ಥಳಕ್ಕೆ ತೆರಳಿದ್ದಾರೆ.

ಬೆಳಗ್ಗೆ 11ರಿಂದ 7.20ರ ವರೆಗೆ ವಿಚಾರಣೆ

ಧರ್ಮಸ್ಥಳ ಪ್ರಕರಣ ಸಂಬಂಧ ವಿಚಾರಣೆ ಕೈಗೆತ್ತಿರುವ ಎಸ್ಐಟಿ ಅಧಿಕಾರಿಗಳು ಮಂಗಳೂರಿನ ಮಲ್ಲಿಕಟ್ಟೆ ಎಸ್ಐಟಿ ಕಚೇರಿಯಲ್ಲಿ ಮುಸುಕುಧಾರಿಯನ್ನು ವಿಚಾರೆ ನಡೆಸಿದ್ದಾರೆ. ಇಂದು ಇಬ್ಬರು ವಕೀರಲ ಜೊತೆ ಎಸ್ಐಟಿ ಕಚೇರಿಗೆ ಆಗಮಿಸಿದ ಮುಸುಕುಧಾರಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 11 ಗಂಟೆ ಸುಮಾರಿಗೆ ಮುಸುಕುಧಾರಿ ವ್ಯಕ್ತಿಯ ವಿಚಾರಣೆ ಆರಂಭಗೊಂಡಿದೆ. ಸಂಜೆ 7.20ರ ವರೆಗೆ ವಿಚಾರಣ ನಡೆಸಲಾಗಿದೆ. ಸರಿಸುಮಾರು 8 ಗಂಟೆಗಳ ಕಾಲ ನಿರಂತರ ವಿಚಾರಣೆ ನಡೆದಿದೆ.

ಅಜ್ಞಾತ ಸ್ಥಳಕ್ಕೆ ಮುಸುಕುಧಾರಿ ವ್ಯಕ್ತಿ

ಎಸ್ಐಟಿ ಅಧಿಕಾರಿ ಡಿಐಜಿ ಅನುಚೇತ್ ಸೇರಿದಂತೆ ಇತರ ಅಧಿಕಾರಿಗಳು ಮುಸುಕುಧಾರಿ ವ್ಯಕ್ತಿಯ ವಿಚಾರಣೆ ನಡೆಸಿದ್ದಾರೆ.ವಿಚಾರಣೆ ಅಂತ್ಯಗೊಂಡ ಬಳಿಕ ಇಬ್ಬರು ವಕೀಲರ ಜೊತೆ ಮುಸುಕುಧಾರಿ ವ್ಯಕ್ತಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಎಸ್ಐಟಿ ಅಧಿಕಾರಿಗಳು ಮುಸುಕುಧಾರಿ ವ್ಯಕ್ತಿಯನ್ನು ಮತ್ತೆ ವಿಚಾರಣೆಗೆ ಕರೆಯಿಸುವ ಸಾಧ್ಯತೆ ಇದೆ. ಮುಸುಕುಧಾರಿ ವ್ಯಕ್ತಿಯಿಂದ ಹೇಳಿಕೆಗಳನ್ನು ದಾಖಲಿಸಿಕೊಳ್ಳಳಾಗಿದೆ.

ಮಸುಕುಧಾರಿಗೆ ಎಸ್ಐಟಿ ಹಲವು ಪ್ರಶ್ನೆ

ಈಗಾಗಲೇ ಬುರುಡೆ ತೆಗೆದು ಪೊಲೀಸ್ ಠಾಣೆಗೆ ಬಂದಿದ್ದ ಮುಸುಕುಧಾರಿ ವ್ಯಕ್ತಿ ಇದೇ ರೀತಿ ನೂರಾರು ಶವಗಳು ಎಲ್ಲಿ ಹೂತಿದ್ದಾರೆ ಅನ್ನೋದು ನನಗೆ ತಿಳಿದಿದೆ ಎಂದಿದ್ದಾನೆ. ಕೆಲ ತೆಲಬುರುಡೆಗಳ ವಿಡಿಯೋ ಮಾಡಿದ್ದ ಮುಸುಕುಧಾರಿ ವ್ಯಕ್ತಿ ಬಳಿಕ ಅಧಿಕಾರಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ನಿರ್ದಿಷ್ಠ ಪ್ರದೇಶದಿಂದಲೇ ಬುರುಡೆ ತಂದಿರುವುದೇಕೆ? ಅದೇ ಸ್ಥಳ ಆಯ್ಕೆ ಮಾಡಿಕೊಂಡಿದ್ದೇಕೆ? ಬುರುಡೆ ಹೊರತೆಗೆಯು ಮೊದಲು ಪೊಲೀಸರಿಗೆ ಮಾಹಿತಿ ನೀಡಿಲ್ಲ ಯಾಕೆ ಎಂದು ಅಧಿಕಾರಿಗಳು ಪ್ರಶ್ನಿಸಿದ್ದಾರೆ.