Asianet Suvarna News Asianet Suvarna News

‘ಆಪರೇಶನ್‌’ಗೆ ಹಣ ಇದೆ, ಸಂತ್ರಸ್ತರಿಗೆ ನೀಡಲು ಏಕಿಲ್ಲ: ಕಾಂಗ್ರೆಸ್ ವ್ಯಂಗ್ಯ

ಆಪರೇಷನ್ ಮಾಡೋಕೆ ಹಣ ಇದೆ, ನೆರೆ ಸಂತ್ರಸ್ತರಿಗೆ ನೆರವಾಗೋದಿಕ್ಕೆ ಯಾಕೆ ಹಣ ಇಲ್ಲ ಎಂದು ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್‌ ಬಿಜೆಪಿ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಆಪರೇಶನ್‌ ಕಮಲಕ್ಕೆ ನೀಡಲು ಹಣ ಇದ್ದವರಿಗೆ ಬಡವರಿಗೆ ನೀಡಲು ಏಕಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

congress leader taunts bjp for not releasing relief fund
Author
Bangalore, First Published Nov 7, 2019, 10:26 AM IST

ಮಂಗಳೂರು(ನ.07): ಬಿಜೆಪಿಗೆ ಆಪರೇಶನ್‌ ಕಮಲ ಮಾಡಲು ಬೇಕಾದಷ್ಟುಹಣ ಇದೆ. ಆದರೆ ಪ್ರವಾಹ ಸಂತ್ರಸ್ತರಿಗೆ ನೀಡಲು ಹಣ ಇಲ್ಲ ಎಂದು ಮಹಿಳಾ ಕಾಂಗ್ರೆಸ್‌ ರಾಜ್ಯಾಧ್ಯಕ್ಷೆ ಪುಷ್ಪಾ ಅಮರನಾಥ್‌ ಟೀಕಿಸಿದ್ದಾರೆ.

ರಾಜ್ಯದ ಬಹುತೇಕ ಜಿಲ್ಲೆಗಳ ಜನತೆ ಪ್ರವಾಹದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸಿದೆ. ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಸಾವಿರ ರು. ನೀಡುವುದಾಗಿ ರಾಜ್ಯ ಸರ್ಕಾರ ಹೇಳಿದರೂ ಈ ಮೊತ್ತ ಯಾರಿಗೆ ತಲುಪಿದೆ ಹೇಳಲಿ. 10 ಸಾವಿರ ರು. ಪರಿಹಾರದ ಚೆಕ್‌ಗಳು ಕೂಡ ಬೌನ್ಸ್‌ ಆಗಿವೆ. ಆಪರೇಶನ್‌ ಕಮಲಕ್ಕೆ ನೀಡಲು ಹಣ ಇದ್ದವರಿಗೆ ಬಡವರಿಗೆ ನೀಡಲು ಏಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಅವರು ಪ್ರಶ್ನಿಸಿದ್ದಾರೆ.

BJP ಅನ್ವರ್ಥನಾಮವೇ ಸುಳ್ಳು: ಸಿದ್ದು ವ್ಯಂಗ್ಯ

ಬಿಜೆಪಿಯವರು ಶೌಚಾಲಯ ಕಟ್ಟಬೇಕು ಎನ್ನುತ್ತಾರೆ. ಹಾಗೆ ಹೇಳುವವರು ಒಮ್ಮೆ ಉತ್ತರ ಕರ್ನಾಟಕಕ್ಕೆ ಹೋಗಿ ನೋಡಲಿ. ಅಲ್ಲಿ ವಾಸಕ್ಕೆ ಮನೆಗಳೇ ಇಲ್ಲ. ಇನ್ನು ಶೌಚಾಲಯ ಎಲ್ಲಿ ಕಟ್ಟಬೇಕು ಎಂದು ಟೀಕಿಸಿದ್ದಾರೆ.

ವಿದ್ಯಾವಂತರಿಗೆ ಟಿಕೆಟ್‌: ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬೇರೆ ಪಕ್ಷಗಳಿಗೆ ಹೋಲಿಸಿದರೆ ವಿದ್ಯಾವಂತ ಹೆಣ್ಮಕ್ಕಳಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದೆ. ಅವರು ಹೆಚ್ಚು ನ್ಯಾಯಯುತವಾಗಿ ಜನರ ಕೆಲಸ ಮಾಡಲಿದ್ದಾರೆ ಎಂದಿದ್ದಾರೆ.

ಮಂಗಳೂರು: ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಮಾಜಿ ಮೇಯರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್‌ ಅವ್ಯವಹಾರದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವ್ಯವಹಾರ ನಡೆದಿದ್ದರೆ ಅದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಮಹಿಳಾ ಕಾಂಗ್ರೆಸ್‌ ಮುಖಂಡರಾದ ಶಾಲೆಟ್‌ ಪಿಂಟೊ, ಸುರೇಖಾ, ಸವಿತಾ ರಮೇಶ್‌ ಮತ್ತಿತರರಿದ್ದರು.

ರಾಜ್ಯ ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಲಿ

ಪ್ರವಾಹದಿಂದಾಗಿ ಅತಿ ಹೆಚ್ಚು ತೊಂದರೆಗೆ ಒಳಗಾದವರು ರೈತರು. ತೀವ್ರ ಬೆಳೆಹಾನಿಯಿಂದ ಕಂಗಾಲಾದವರಿಗೆ ಯಾವುದೇ ಪರಿಹಾರ ಒದಗಿಸಿಲ್ಲ. ರಾಜ್ಯ ಸರ್ಕಾರ ಕೂಡಲೆ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜಾನೆಟ್‌ ಡಿಸೋಜ ಆಗ್ರಹಿಸಿದರು. 38 ಸಾವಿರ ಕೋಟಿ ರು. ಪ್ರವಾಹ ನಷ್ಟಸಂಭವಿಸಿದ್ದರೂ ಕೇಂದ್ರ ಸರ್ಕಾರ ಕೇವಲ 1200 ಕೋಟಿ ರು.ಗಳನ್ನು ಮಂಜೂರುಗೊಳಿಸಿದೆ. ಉಳಿದ ಮೊತ್ತವನ್ನು ಕೂಡಲೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

Follow Us:
Download App:
  • android
  • ios