ಮಂಗಳೂರು(ನ.10): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಡೆಂಘೀ, ಮಲೇರಿಯಾ ರೋಗ ಉಲ್ಭಣಿಸಿ ಅವಾಂತರ ಸೃಷ್ಟಿಸಲು ಪಾಲಿಕೆಯ ಹಿಂದಿನ ಕಾಂಗ್ರೆಸ್ ಆಡಳಿತವೇ ಕಾರಣ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ. ಭರತ್ ಶೆಟ್ಟಿ ಆರೋಪಿಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಕೆಯಲ್ಲಿ ಮಲೇರಿಯಾ ಸೆಲ್ ಇದೆ. ಅಲ್ಲಿ ಹೊರಗುತ್ತಿಗೆ ಆಧಾರದಲ್ಲಿ 60 ಜನ ಸಿಬ್ಬಂದಿ ಮತ್ತು ಸೂಪರ್ ವೈಸರ್ ಆಗಿ ಹತ್ತು ಜನರನ್ನು ನೇಮಿಸಲಾಗಿತ್ತು.

ಬಿಜೆಪಿ ‘ವೆರಿ ಬ್ಯಾಡ್’ ಹೇಳಿಕೊಟ್ಟದ್ದೇ ಪೂಜಾರಿ: ಖಾದರ್

ಆದರೆ ಅವರಿಗೆ ನಿಗದಿಪಡಿಸಿದ ಕೆಲಸ ಬಿಟ್ಟು ನೀರಿನ ಬಿಲ್ ಸಂಗ್ರಹಕ್ಕೆ ನಿಯೋಜಿಸಿದ್ದರು. ಇದರಿಂದ ಸಾಂಕ್ರಾಮಿಕ ರೋಗ ಉಲ್ಭಣಿಸಿದೆ ಎಂದು ಅವರು ಆರೋಪಿಸಿದ್ದಾರೆ. ಡೆಂಘೀ, ಮಲೇರಿಯಾ ಹರಡಿದ್ದು, ಈಗಲೂ ಜನರು ಜ್ವರದಿಂದ ತತ್ತರಿಸುತ್ತಿದ್ದಾರೆ.

‘ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಅನರ್ಹ ಶಾಸಕ’