Asianet Suvarna News Asianet Suvarna News

ಮಂಗಳೂರು: ಜಿಲ್ಲಾದ್ಯಂತ ಬಿಜೆಪಿ ಧ್ವಜ ರಹಿತ ಪಾದಯಾತ್ರೆ

ಮಂಗಳೂರು ಜಿಲ್ಲಾ ಬಿಜೆಪಿ ಅ.20ರಿಂದ ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ. ವಿಶೇಷ ಅಂದ್ರೆ ಈ ಕಾರ್ಯಕ್ರಮದಲ್ಲಿ ಪಕ್ಷದ ಧ್ವಜ ಬಳಸಲಾಗುವುದಿಲ್ಲ.

bjp footmarch without party flag
Author
Bangalore, First Published Oct 17, 2019, 8:04 AM IST

ಮಂಗಳೂರು(ಅ.17): ಮಹಾತ್ಮಾಗಾಂಧೀಜಿ ಅವರ 150ನೇ ಜನ್ಮಶತಾಬ್ದಿಯನ್ನು ಬಿಜೆಪಿ ದೇಶಾದ್ಯಂತ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.20ರಿಂದ ಜನವರಿ 30ರ ವರೆಗೆ ಪಾದಯಾತ್ರೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ, ಪುತ್ತೂರು ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟು ಅಸೆಂಬ್ಲಿ ಕ್ಷೇತ್ರಗಳ ಒಂಭತ್ತು ಮಂಡಲಗಳಲ್ಲಿ ಏಳು ಮಂದಿ ಶಾಸಕರ ನೇತೃತ್ವದಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರ ಮುತುವರ್ಜಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿದೆ.

ಮಂಗಳೂರು: ಜಿಲ್ಲೆಯಲ್ಲಿ ಗುಡುಗಿನಬ್ಬರ, ಸಾಧಾರಣ ಮಳೆ

ಇದರಲ್ಲಿ ಎಲ್ಲ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ 422 ಗ್ರಾಮ, 232 ಗ್ರಾಮ ಪಂಚಾಯ್ತಿ, ಎಂಟು ಪಟ್ಟಣ ಪಂಚಾಯ್ತಿ ಸೇರಿದಂತೆ ನಗರದ ಸ್ಥಳೀಯಾಡಳಿತಗಳಲ್ಲಿ ಗಾಂಧೀಜಿ ಚಿಂತನೆಗೆ ಪೂರಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.

20ರಂದು ಪಾದಯಾತ್ರೆಗೆ ಚಾಲನೆ:

ದ.ಕ. ಜಿಲ್ಲೆಯಲ್ಲಿ ಅ.20ರಂದು ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಬೆಳಗ್ಗೆ 8.30ಕ್ಕೆ ಕಾಲ್ನಡಿಗೆ ಜಾಥಾಗೆ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಇಲ್ಲಿನ ಪುರಭವನ ಎದುರು ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಿದ್ದಾರೆ.

ಕಾರವಾರದ ರಾಬಿನ್ಸನ್ ಪೂರ್ವಾಪರ ಪತ್ತೆಹಚ್ಚಿದ ಕುವೈತ್ ಅಧಿಕಾರಿಗಳು

ಬಳಿಕ ಪಾದಯಾತ್ರೆ ನಗರದ ಮಂಗಳಾ ಸ್ಟೇಡಿಯಂ ಹಿಂಭಾಗವರೆಗೆ ಸಾಗಲಿದೆ. ಇದರಲ್ಲಿ ಜಿಲ್ಲೆಯ ಶಾಸಕರು, ಇತರೆ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಅಂದಿನಿಂದ ಆರಂಭವಾಗುವ ಪಾದಯಾತ್ರೆ ನ.5ರ ವರೆಗೆ ಜಿಲ್ಲೆಯಲ್ಲಿ 1,200 ಕಿ.ಮೀ. ವರೆಗೆ ಸಂಚರಿಸಲಿದೆ ಎಂದು ಅವರು ಹೇಳಿದ್ದಾರೆ.

ಈ ಕಾರ್ಯಕ್ರಮ ರಾಜಕೀಯ ರಹಿತವಾಗಿ ನಡೆಯಲಿದೆ. ಗಾಂಧಿ ಟೋಪಿ, ರಾಷ್ಟ್ರಧ್ವಜ, ಖಾದಿ ವೇಷಭೂಷಣದೊಂದಿಗೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಾಗುವುದು. ಪಾದಯಾತ್ರೆಯಲ್ಲದೆ ಗಾಂಧೀಜಿಯ ಸ್ವದೇಶಿ ಚಿಂತನೆ, ಸ್ವಚ್ಛತಾ ಕಾರ್ಯಕ್ರಮ, ಖಾದಿ ಪ್ರಚಾರ, ಸ್ವಾವಲಂಬಿ ಬದುಕು, ನಶೆ ಮುಕ್ತ ಸಮಾಜ, ಜಲಸಂರಕ್ಷಣೆ ಮತ್ತು ಪ್ಲಾಸ್ಟಿಕ್‌ ಮುಕ್ತ ಭಾರತಕ್ಕೆ ಪಣ ತೊಡಲಾಗುವುದು. ಗಾಂಧಿ ಭಜನ್‌, ಗಾಂಧಿ ಭಾವಚಿತ್ರ ರಥ, ಗಾಂಧಿ ಆದರ್ಶ ಭಾಷಣ ಕೈಗೊಳ್ಳಲಾಗುವುದು. ಗಾಂಧೀಜಿ ಅವರ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಲಿದೆ ಎಂದು ಅವರು ಹೇಳಿದ್ದಾರೆ. ಶಾಸಕ ವೇದವ್ಯಾಸ ಕಾಮತ್‌, ಮುಖಂಡರಾದ ಸಂಜಯ ಪ್ರಭು, ಸುದರ್ಶನ ಮೂಡುಬಿದಿರೆ ಇದ್ದರು.

ಸಿದ್ಧಾರ್ಥ ಹೆಗ್ಡೆ ಆತ್ಮಹತ್ಯೆ ಜಾಗದಲ್ಲಿಯೇ ಮತ್ತೋರ್ವ ವ್ಯಕ್ತಿ ಆತ್ಮಹತ್ಯೆ ಯತ್ನ

Follow Us:
Download App:
  • android
  • ios