ಯಾವ ರಾಶಿಗೆ ಹಣದ ಲಾಭ? ಯಾರಿಗೆ ಆರೋಗ್ಯದ ಸಮಸ್ಯೆ? ಕುಟುಂಬ ಜೀವನ, ಉದ್ಯೋಗ ಮತ್ತು ಹಣಕಾಸಿನ ಬಗ್ಗೆ ಪೂರ್ಣ ದೈನಂದಿನ ಜ್ಯೋತಿಷ್ಯ ಭವಿಷ್ಯವಾಣಿ. 

ಮೇಷ(Aries): ಕುಟುಂಬದ ಜೊತೆ ಹೆಚ್ಚಿನ ಸಮಯ ವ್ಯಯಿಸುವಿರಿ. ಮುಕ್ತ ಮಾತುಕತೆಯಿಂದ ಸಮಸ್ಯೆಗಳು ಇತ್ಯರ್ಥವಾಗಲಿವೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಒಳ್ಳೆ ನಿರ್ಧಾರ ತೆಗೆದುಕೊಳ್ಳುವರು. ಆರೋಗ್ಯದಲ್ಲಿ ಸುಸ್ತು, ರಕ್ತದೊತ್ತಡ ಹೆಚ್ಚಬಹುದು. ಶಿವ ಶಕ್ತಿಯರ ಸ್ಮರಣೆ ಮಾಡಿ.

ವೃಷಭ(Taurus): ಮನರಂಜನೆಗಾಗಿ ಹೆಚ್ಚು ವ್ಯಯಿಸುವಿರಿ. ಸಂಗಾತಿಯ ಸಲಹೆಯಂತೆ ನಡೆದರೆ ನೆಮ್ಮದಿ ಇರಲಿದೆ. ಮನೆಯಲ್ಲಿ ಮಾನಸಿಕವಾಗಿಯೂ ಮನೆಯವರ ಜೊತೆಯೇ ಇರಲು ಪ್ರಯತ್ನಿಸಿ. ಅನುಕರಣೆಯ ಜೀವನ ಬೇಡ. ನಿಮ್ಮತನ ಕಳೆದುಕೊಳ್ಳಬೇಡಿ. ಶನಿ ಸ್ಮರಣೆ ಮಾಡಿ.

ಮಿಥುನ(Gemini): ವಿನಾ ಕಾರಣ ಕೆಲ ವಿಷಯಗಳ ಬಗ್ಗೆ ಅನುಮಾನ ಮೂಡುವುದು, ಅಂಜಿಕೆ ಕಾಡುವುದು. ಅದನ್ನು ಪರಿಹರಿಸಿಕೊಳ್ಳುವ ಮಾರ್ಗಗಳ ಕಡೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆ ಕಾಡುವುದು. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ನವಗ್ರಹ ಶ್ಲೋಕ ಪಠಿಸಿ.

ಕಟಕ(Cancer): ಗೆಳೆಯರ ಸಮಸ್ಯೆಗಳನ್ನು ಕೇಳಿದಾಗ ನಿಮ್ಮ ಬದುಕೇ ಚೆನ್ನಾಗಿದೆ ಎನಿಸಿ ಸಮಾಧಾನವಾಗುವುದು. ಮುಂದಾಲೋಚನೆ ಇಲ್ಲದೆ ಆರಂಭಿಸಿದ ಉದ್ಯಮ ನಷ್ಟದಿಂದ ಬೇಸರವಾಗುವುದು. ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ನಿರಾಸೆ. ಅಶ್ವತ್ಥ ಮರಕ್ಕೆ ಸುತ್ತು ಬನ್ನಿ.

ಸಿಂಹ(Leo): ದೂರ ಪ್ರಯಾಣ ಯೋಗವಿದೆ. ಹೊಸ ಹೊಸ ಅನುಭವಗಳು ಮುದ ನೀಡಲಿವೆ. ವಿಪರೀತ ಧನ ವ್ಯಯದಿಂದ ಕಂಗಾಲಾಗುವಿರಿ. ಮಕ್ಕಳೊಂದಿಗೆ ಹೆಚ್ಚಿನ ಸಮಯ ವ್ಯಯಿಸುವಿರಿ. ಕೋಪ ನಿಯಂತ್ರಣ ಮಾಡಿಕೊಂಡರೆ ನೆಮ್ಮದಿ ಸಾಧ್ಯ. ಆಂಜನೇಯ ಸ್ಮರಣೆ ಮಾಡಿ.

ಕನ್ಯಾ(Virgo): ಒಡವೆ, ವಸ್ತ್ರ ಖರೀದಿ ಮಾಡಬಹುದು. ಹಿಂದಿನ ಹರಕೆಗಳು ಬಾಕಿಯಿದ್ದರೆ ತೀರಿಸುವತ್ತ ಗಮನ ಹರಿಸಿ. ಆರೋಗ್ಯದ ಕಿರಿಕಿರಿ ತಪ್ಪದು. ಸೋಮಾರಿತನ ಕಾಡಲಿದೆ. ಇದರಿಂದ ದಿನ ವ್ಯರ್ಥವಾಗುವುದು. ನಿರುದ್ಯೋಗಿಗಳು ಸಂಬಂಧಿಕರ ಸಹಾಯದಿಂದ ಪ್ರಯತ್ನಿಸಿದಲ್ಲಿ ಉದ್ಯೋಗ ದೊರಕಬಹುದು. ಎಳ್ಳು ದಾನ ಮಾಡಿ.

ತುಲಾ(Libra): ಹೊರಗಿನ ಸುತ್ತಾಟ ತ್ರಾಸದಾಯಕ ಎನಿಸುವುದು. ತಲೆನೋವು, ಬೆನ್ನುನೋವು, ಕೆಮ್ಮು ಮುಂತಾದ ಸಮಸ್ಯೆಗಳು ಬಾಧಿಸಲಿವೆ. ಕೆಲಸಗಳೊಂದೂ ಯೋಜಿತ ರೀತಿಯಲ್ಲಿ ಆಗದೆ ಕಂಗಾಲಾಗುವಿರಿ. ವೃತ್ತಿನಿರತರಿಗೆ ಕೊಂಚ ಕಡಿಮೆ ಶ್ರಮ. ಹನುಮಾನ್ ಚಾಲೀಸಾ ಹೇಳಿಕೊಳ್ಳಿ.

ವೃಶ್ಚಿಕ(Scorpio): ಹೊಸಬರ ಭೇಟಿ ಸಂತಸ ತರಲಿದೆ. ಮಾತು ಬಿಟ್ಟ ಗೆಳೆಯರನ್ನು ಮತ್ತೆ ಮಾತಾಡಿಸಿ, ಸ್ನೇಹ ಮತ್ತೆ ಚಿಗುರಿ ಸಂತಸವಾಗುವುದು. ಜೀವನದಲ್ಲಿ ಯಾವುದಕ್ಕೆ ಪ್ರಾಶಸ್ತ್ಯ ನೀಡಬೇಕೆಂಬ ಬಗ್ಗೆ ಪರಾಮರ್ಶಿಸಿ. ಹಣದ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳಬೇಡಿ. ಶನಿ ಸ್ಮರಣೆ ಮಾಡಿ.

ಧನುಸ್ಸು(Sagittarius): ಹತ್ತಿರದಲ್ಲೇ ಇರುವ ಖುಷಿಯನ್ನು ಅರಸಿ ದೂರ ಹೋದರೆ ಪ್ರಯೋಜನವಿಲ್ಲ. ಅದನ್ನು ಮನೆಯಲ್ಲೇ ಕಂಡುಕೊಳ್ಳಬೇಕು. ಕುಟುಂಬದೊಂದಿಗೆ ಬಾಂಧವ್ಯ ಕಾಪಾಡಿಕೊಳ್ಳುವತ್ತ ಗಮನ ಹರಿಸಿ. ಮನೆಯ ಕೆಲ ವಸ್ತುಗಳ ರಿಪೇರಿ ಕೆಲಸ ಹೆಗಲಿಗೆ ಬೀಳುವುದು. ಶಿವನಿಗೆ ಜಲಾಭಿಷೇಕ ಮಾಡಿಸಿ.

ಮಕರ(Capricorn): ಶುಭ ಕಾರ್ಯವೊಂದರ ಸಲುವಾಗಿ ಹೆಚ್ಚಿನ ತಿರುಗಾಟ ಮಾಡಬೇಕಾಗಿ ಬರಲಿದೆ. ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಸಂತೋಷ ಸಿಗಲಿದೆ. ಆಸ್ತಿ ಖರೀದಿ ಮಾಡಲಿದ್ದೀರಿ. ಆಯ್ಕೆ ಗೊಂದಲ ಪರಿಹಾರಕ್ಕಾಗಿ ದೇವಾಲಯದಲ್ಲಿ ಕೇಳಿಸಬಹುದು. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ.

ಕುಂಭ(Aquarius): ನಿದ್ರಾಹೀನತೆಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವುವು. ವಸ್ತ್ರ, ಒಡವೆ, ಶೃಂಗಾರ ಸಾಮಗ್ರಿ ವ್ಯಾಪಾರಸ್ಥರು, ಹೋಟೆಲ್, ಬೇಕರಿ ಮಾಲೀಕರಿಗೆ ಧನ ಲಾಭ ಹೆಚ್ಚಲಿದೆ. ಅವಿವಾಹಿತರು ಮುಕ್ತವಾಗಿ ಮನಸ್ಸಿನ ವಿಷಯ ಹೇಳಿಕೊಂಡರೆ ಸಮಸ್ಯೆ ಬಗೆಹರಿವುದು. ಶನಿ ಶ್ಲೋಕ ಹೇಳಿಕೊಳ್ಳಿ.

ಮೀನ(Pisces): ಸಂಗಾತಿಯ ವಿಷಯದಲ್ಲಿ ಮುನಿಸು ಶಮನಗೊಳ್ಳಲು ನೀವೇ ಸೋತು ನೋಡಿ. ಸೋತು ಗೆಲ್ಲುವುದರ ಅನುಭವ ನಿಮ್ಮದಾಗುವುದು. ತಂದೆತಾಯಿಯ ಸಲಹೆಗಳನ್ನು ಪರಿಗಣಿಸಿ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಕುಲದೇವರ ಸ್ಮರಣೆ ಮಾಡಿ.