Asianet Suvarna News Asianet Suvarna News

Career Horoscope 2022: ಹೊಸ ವರ್ಷಕ್ಕೆ ಈ ರಾಶಿಯವರ ಲಕ್ ತಿರುಗ್ತು ಅಂತಾನೇ ಲೆಕ್ಕ!

ಔದ್ಯೋಗಿಕ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯಿಂದ ಬದುಕಿನಲ್ಲಿ ಸಂತೋಷ ತುಂಬುತ್ತದೆ. 2022ರ ಉದ್ಯೋಗ ಭವಿಷ್ಯದಲ್ಲಿ ಸಿಂಹ, ವೃಷಭ, ಧನು ರಾಶಿಯವರಿಗೆ ಬಹಳಷ್ಟು ಬದಲಾವಣೆಗಳು ಕಾದಿವೆ. 

The Luckiest Zodiacs for Business and Job in 2022
Author
Bangalore, First Published Dec 6, 2021, 4:19 PM IST
  • Facebook
  • Twitter
  • Whatsapp

ಹೊಸ ವರ್ಷ ಹೊಸ್ತಿಲಲ್ಲಿದೆ. ಬರುವ ವರ್ಷವಾದ್ರೂ ನಮ್ ಲಕ್ ಬದ್ಲಾಗ್ಬೋದಾ ಅಂತ ಎಲ್ರೂ ಕಾಯ್ತಾ ಇರ್ಬೇಕಾದ್ರೆ ಕೆಲವು ರಾಶಿಗಳ ಒಡೆಯರಿಗೊಂದಿಷ್ಟು ಸಿಹಿ ಸುದ್ದಿ ತಂದಿದ್ದೇವೆ. ಇದು ನಿಮ್ಮ ಔದ್ಯೋಗಿಕ ಬದುಕಿನ ಭವಿಷ್ಯ. 2022ರಲ್ಲಿ ಕೆಲ ರಾಶಿಗಳಗೆ ಅವರ ಔದ್ಯೋಗಿಕ ಬದುಕಿನಲ್ಲಿ ದೊಡ್ಡ ಏಣಿ ಹತ್ತಲು ಸಿಗಲಿದೆ. ನೀವು ಬಹಳ ಕಾಲದಿಂದ ಕಾಯುತ್ತಿರುವ ಉದ್ಯೋಗ ಬದಲಾವಣೆ, ಹೊಸ ಉದ್ಯಮದ ಕನಸು, ಕಾಯುತ್ತಿರುವ ವರ್ಗಾವಣೆ ಎಲ್ಲವೂ ಸಾಧ್ಯವಾಗಲಿದೆ. ಇಂಥ ಅದೃಷ್ಟವಂತ ರಾಶಿಗಳಲ್ಲಿ ನೀವಿದ್ದೀರಾ ನೋಡಿಕೊಳ್ಳಿ

ವೃಷಭ(Taurus)
2022ರಲ್ಲಿ ವೃಷಭ ರಾಶಿಯವರು ಉದ್ಯೋಗದ ಬದುಕಿನಲ್ಲಿ ಬಹಳ ಎತ್ತರಕ್ಕೇರಲಿದ್ದಾರೆ. ಗ್ರಹಗಳ ಚಲನೆಯು ಇವರ ಔದ್ಯೋಗಿಕ ಬದುಕಿಗೆ ಪೂರಕವಾಗಿದ್ದು, ರಾಶಿ ರಾಶಿ ಉತ್ತಮ ಅವಕಾಶಗಳು ಅರಸಿ ಬರಲಿವೆ. ವರ್ಷಾರಂಭದಲ್ಲಿ ಗುರುವು ನಿಮ್ಮ ರಾಶಿಯ 10ನೇ ಮನೆಯಿಂದ ಚಲಿಸಲಿದ್ದಾನೆ. ಇದರಿಂದ ಉದ್ಯೋಗ ಬದಲಾಯಿಸಲು ಸಾಧ್ಯವಾಗುವುದು. ನಿಮಗೆ ಒಳ್ಳೆ ಹುದ್ದೆ ಹಾಗೂ ಸಂಬಳ ಹೆಚ್ಚಳ ಕೂಡಾ ಸಿಗಲಿದೆ. ಉದ್ಯಮಿಗಳು ಕೂಡಾ ತಮಗೆ ಯಶಸ್ಸು(success) ತಂದುಕೊಡುವಂಥ ಬದಲಾವಣೆಗಳನ್ನು ಕಾಣಲಿದ್ದಾರೆ. 

Intelligence and Zodiac sign: ರಾಶಿ ಪ್ರಕಾರ, ನೀವೆಷ್ಟು ಬುದ್ಧಿವಂತರು?

ಏಪ್ರಿಲ್‌ನಲ್ಲಿ ಶನಿಯು ನಿಮ್ಮ ರಾಶಿಯ 10ನೇ ಮನೆಯ ಮೂಲಕ ಚಲಿಸಲಿದ್ದಾನೆ. ಇದರಿಂದ ಉದ್ಯೋಗಸ್ಥರಿಗೆ ಮತ್ತಷ್ಟು ಉದ್ಯೋಗಾವಕಾಶಗಳು(job oppurtunities) ಸಿಗಬಹುದು. ನಿರುದ್ಯೋಗಿಗಳಿಗೆ ಪ್ರಯತ್ನ ಹಾಕಿದಲ್ಲಿ ತಮ್ಮ ಕನಸಿನ ಸಂಸ್ಥೆಯಲ್ಲಿ ಉದ್ಯೋಗ ಸಿಗಲಿದೆ. ವರ್ಷದ ಕೊನೆಯಲ್ಲಿ ಉದ್ಯಮಿಗಳಿಗೆ ಲಾಭದ ವಿಷಯದಲ್ಲಿ ಕೊಂಚ ನಿಧಾನಗತಿ ಕಾಣಬಹುದು. ಆದರೆ, ಹೊಸ ಯೋಜನೆಗಳಿಂದಾಗಿ ಮತ್ತೆ ಲಾಭದತ್ತ ಮುಖ ಮಾಡಬಹುದು. 

ಸಿಂಹ(Leo)
ಸಿಂಹ ರಾಶಿಯವರ ಔದ್ಯೋಗಿಕ ಬದುಕು ಹೊಸ ವರ್ಷದಲ್ಲಿ ಹೊಸ ಎತ್ತರಕ್ಕೇರಲಿದೆ. ವರ್ಷಾರಂಭದಲ್ಲಿ ಗ್ರಹಗಳೆಲ್ಲವೂ ನಿಮ್ಮ ಅನುಕೂಲದಂತೆಯೇ ಸ್ಥಿತ್ಯವಾಗುವುದರಿಂದ ಉದ್ಯೋಗದ ಬಗ್ಗೆ ನಿಮ್ಮ ಅಸ್ಥೆ, ಪ್ರೀತಿ ಹೆಚ್ಚುತ್ತದೆ. ಈ ಸಮಯದಲ್ಲಿ ನಿಮ್ಮ ಸ್ಪರ್ಧಿಗಳನ್ನು ಸುಲಭವಾಗಿ ಸೆಣೆಸಬಲ್ಲಿರಿ. ನಿಮ್ಮ ಹಾರ್ಡ್ ವರ್ಕ್ ಹಾಗೂ ಸಾಮರ್ಥ್ಯದ ಕಾರಣದಿಂದ ತಂಡದ ಪ್ರತಿಯೊಬ್ಬರಲ್ಲೂ ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆಗೆ ಪಾತ್ರವಾಗುವಿರಿ. ಇದು ನಿಮ್ಮನ್ನು ಮೇಲ್ದರ್ಜೆಗೇರಿಸಲಿದೆ. 

Effect of Rahu in 2022: ಮೇಷ, ವೃಷಭ ಸೇರಿ 6 ರಾಶಿಗೆ ರಾಹು ಕಾಟ

ಈಗಷ್ಟೇ ಪ್ರೊಫೆಶನಲ್ ಸೇವೆಗಳನ್ನು ಕೊಡಲು ಆರಂಭಿಸಿದವರಿಗೆ 2022ರಲ್ಲಿ ಹೆಚ್ಚಿನ ಕ್ಲೈಂಟ್ಸ್(clients) ಸಿಕ್ಕಿ ಬಹಳ ಲಾಭ ತಂದು ಕೊಡುವುದು. ಸ್ಟಾಕ್ ಬ್ರೋಕರ್ಸ್ ಆಗಿ ಕೆಲಸ ಮಾಡುವವರು ಹಾಗೂ ನಿರ್ಮಾಣ ಉದ್ದಿಮೆ(construction business)ಯಲ್ಲಿರುವವರಿಗೆ 2022 ಬಹಳ ಅದೃಷ್ಟಶಾಲಿ(luckiest) ವರ್ಷವಾಗಲಿದೆ. ವರ್ಷಗಳಿಂದ ಕುಂಟುತ್ತಾ ಸಾಗಿರುವ ಸಿಂಹ ರಾಶಿಯವರು ಆರಂಭಿಸಿದ ಸ್ಟಾರ್ಟಪ್‌ಗಳು ಕೂಡಾ ಈ ವರ್ಷದಲ್ಲಿ ಉತ್ತಮ ಲಾಭ ತಂದುಕೊಡುವ ಜೊತೆಗೆ, ಒಳ್ಳೆಯ ಹೆಸರು ಗಳಿಸಲಿವೆ. 

ಧನು(Sagittarius)
2022ರಲ್ಲಿ ಬಯಸಿದ ಬಾಗಿಲು ತೆರೆಯುವ ಅದೃಷ್ಟ ಧನು ರಾಶಿಯವರದು. ವರ್ಷಾರಂಭದಲ್ಲೇ ಧನು ರಾಶಿಯವರ ಅದೃಷ್ಟ(luck) ಹಾಗೂ ಸಂಪತ್ತು(fortune) ಎರಡೂ ಏರುಮುಖದಲ್ಲಿರಲಿವೆ. ಸೂರ್ಯನ ಚಲನೆಯಿಂದಾಗಿ ನಿಮ್ಮ ಔದ್ಯೋಗಿಕ ಬದುಕಿಗೆ ಅಧಿಕಾರ ಬರಲಿದೆ. ನಿಮ್ಮ ಸಹೋದ್ಯೋಗಿಗಳು, ಹಿರಿಯ ವ್ಯಕ್ತಿಗಳನ್ನು ಹೆಚ್ಚೇನೂ ಪ್ರಯತ್ನವಿಲ್ಲದೆ ಬೇಕಾದ ವಿಷಯದಲ್ಲಿ ಒಪ್ಪಿಸಬಲ್ಲ ಶಕ್ತಿ ಈ ಸಂದರ್ಭದಲ್ಲಿ ಧನು ರಾಶಿಯವರಿಗೆ ದೊರಕಲಿದೆ. ಉದ್ದಿಮೆದಾರರು ತಮ್ಮ ತಮ್ಮ ವೃತ್ತಿಯಲ್ಲಿ ಹೆಸರನ್ನು ಗಳಿಸಲಿದ್ದಾರೆ. ಏಪ್ರಿಲ್ ನಂತರ, ಶಿಕ್ಷಕರಾಗಿರುವವರಿಗೆ ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಧನು ರಾಶಿಯವರಿಗೆ ಬಹಳಷ್ಟು ಸಕಾರಾತ್ಮಕ ಅಚ್ಚರಿಗಳು ಕಾದಿವೆ. ಕುಟುಂಬದ ಉದ್ಯಮ ಮುಂದುವರೆಸಿಕೊಂಡು ಹೋಗಬಯಸುವವರಿಗೆ ಈ ಸಮಯ ವೃತ್ತಿ ಆರಂಭಿಸಲು ಸಕಾಲವಾಗಿದೆ. ಏಕೆಂದರೆ, ನಿಮ್ಮ ರಾಶಿಬಲದಿಂದಾಗಿ ಕುಟುಂಬದ ಸಂಪೂರ್ಣ ಸಹಕಾರ ನಿಮ್ಮ ಕೆಲಸಕ್ಕೆ, ಹೊಸ ಸಾಹಸಗಳಿಗೆ ದೊರಕಲಿದೆ. ಒಟ್ನಲ್ಲಿ ಧನು ರಾಶಿಯವರ ಧನಬಲ 2022ರಲ್ಲಿ ಉತ್ತಮವಾಗಿರಲಿದೆ. 

Follow Us:
Download App:
  • android
  • ios