ಇಂದು ಮೇ 16 ಈ ರಾಶಿಗೆ ಲಕ್ಷ್ಮೀ ನಾರಾಯಣ ಯೋಗ ಯಾವ ರಾಶಿಗೆ ಲಾಭ? ಯಾರಿಗೆ ನಷ್ಟ?

ಇಂದು 16ನೇ ಮೇ 2024 ಗುರುವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

daily horoscope today may 16th Thursday 2024 suh

ಮೇಷ (Aries):ಅನುಭವದಿಂದ ಕಲಿಯಲು ಸಾಧ್ಯವಾಗದ ಅನೇಕ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಲು ಇಂದು ನಿಮಗೆ ಸಾಕಷ್ಟು ಅವಕಾಶಗಳು ಸಿಗಲಿವೆ. ಈ ಸಮಯವನ್ನು ನಿಮ್ಮ ಆರೋಗ್ಯ ಸುಧಾರಣೆಗೆ ಬಳಸಿಕೊಳ್ಳಿ. ದೀರ್ಘ ಸಮಯದಿಂದ ನೀವು ಬಯಸುತ್ತಿದ್ದ ಸಾಹಸ ಕ್ರೀಡೆಯನ್ನು ಕೈಗೊಳ್ಳಲು ಇಂದು ಸಕಾಲ. ಈ ಸಾಹಸದಲ್ಲಿ ಭಾಗವಹಿಸಲು ನಿಮಗೆ ಸಾಕಷ್ಟು ಅನುಭವ ಇರಬೇಕಾದ ಅಗತ್ಯವಿಲ್ಲ. ಆ ಆಟವನ್ನು ಆನಂದಿಸಿ ಅಷ್ಟೇ. ನಿಮ್ಮ ಸಂಗಾತಿಯೊಂದಿಗೆ ಇಂದು ಖುಷಿಯಿಂದ ಕಾಲ ಕಳೆಯುತ್ತೀರಿ.

ವೃಷಭ(Taurus):ನೀವು ಇನ್ನೂ ಒಂಟಿಯಾಗಿದ್ದರೆ ಇಂದು ಪ್ರೀತಿ ವಿಚಾರಗಳಲ್ಲಿ ಆಸಕ್ತಿ ಮೂಡುವ ಸಾಧ್ಯತೆ ಕಡಿಮೆ. ಒಂದು ವೇಳೆ ನೀವು ಸಂಬಂಧದಲ್ಲಿದ್ದರೆ, ನಿಮ್ಮ ಪ್ರೇಮ ಜೀವನ ಮಧ್ಯಮ ವೇಗದಲ್ಲಿ ನಡೆಯಲಿದೆ. ಆರೋಗ್ಯ ಸಂಬಂಧಿ ಸಮಸ್ಯೆ ಅನುಭವಿಸುವ ನಿಮಗೆ ಇಂದು ಸಂಗಾತಿಯ ಬೆಂಬಲ ಸಿಗಲಿದೆ. ಇದರಿಂದ ಮನಸ್ಸಿಗೆ ತುಸು ನೆಮ್ಮದಿ ಸಿಗಲಿದೆ.

ಮಿಥುನ(Gemini):ಹಲವು ದಿನಗಳಿಂದ ಮಹತ್ವದ ನಿರ್ಧಾರ ಕೈಗೊಳ್ಳಲು ಹಿಂಜರಿಯುತ್ತಿದ್ದ ನೀವು ಇಂದು ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡುತ್ತೀರಿ. ಭಯ ಇಂಥ ಮಹತ್ವದ ನಿರ್ಧಾರ  ಕೈಗೊಳ್ಳಲು ನಿಮಗೆ ದೊಡ್ಡ ಅಡ್ಡಿಯಾಗಿದ್ದರೂ ಇಂದು ನೀವು ನಿಮ್ಮ ಮನಸ್ಸಿನ ಮಾತನ್ನು ಆಲಿಸಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಗಡಿಬಿಡಿ ಮಾಡಬೇಡಿ.

ಕಟಕ(Cancer):ಇಂದು ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸೋದು ಅಗತ್ಯ. ಇಂದು ನೀವು ಮಹತ್ವದ ಕೆಲಸವೊಂದರ ನೇತೃತ್ವ ವಹಿಸುತ್ತೀರಿ ಮತ್ತು ಅದರಲ್ಲಿ ಯಶಸ್ಸು ಕೂಡ ಗಳಿಸುತ್ತೀರಿ. ಇದರಿಂದ ನಿಮಗೆ ಕೆಲಸದಲ್ಲಿ ಮುಂಬಡ್ತಿ ಸಿಗಲಿದೆ. ಇಂದು ನಿಮ್ಮ ಸಂಗಾತಿ ಜೊತೆಗೆ ವಿನಾಕಾರಣ ಸಿಟ್ಟು ಮಾಡಿಕೊಳ್ಳುತ್ತೀರಿ. ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ.

ಸಿಂಹ(Leo):ಸಕಾರಾತ್ಮಕ ಶಕ್ತಿಗಳು ಇಂದು ನಿಮ್ಮನ್ನು ಕಾಯುತ್ತವೆ. ಇಂದು ಅದೃಷ್ಟ ಎಷ್ಟು ಮುಖ್ಯ ಎಂಬುದು ನಿಮಗೆ ತಿಳಿಯುತ್ತದೆ. ಇಂದು ನೀವು ತಪ್ಪು ಮಾಡಿದ್ದರೂ ಅದೃಷ್ಟದ ಕಾರಣದಿಂದ ಸೋಲು ಮತ್ತು ನಷ್ಟದಿಂದ ಪಾರಾಗುತ್ತೀರಿ. ಇಂದು ನೀವು ಭೇಟಿಯಾಗಉವ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಲು ಮರೆಯಬೇಡಿ. ಸಮಾಜದ ದುರ್ಬಲ ವರ್ಗದ ಜನರಿಗೆ ನಿಮ್ಮ ಕೈಲಾದ ನೆರವು ನೀಡಿ.

ಕನ್ಯಾ(Virgo):ಇಂದಿನ ನಿಮ್ಮ ದಿನ ಸಂತಸದಿಂದ ಕೂಡಿರುತ್ತದೆ. ವೃತ್ತಿ ಸ್ಥಳದಲ್ಲಿ ಆಸಕ್ತಿ ಮತ್ತು ಉತ್ಸಾಹದಿಂದ ಕಾರ್ಯನಿರ್ವಹಿಸುತ್ತೀರಿ. ಕಠಿಣ ಪರಿಶ್ರಮದ ಕಾರಣಕ್ಕೆ  ಪ್ರಗತಿ ಕೂಡ ಸಾಧಿಸುತ್ತೀರಿ. ಸಂಗಾತಿ ಜೊತೆಗೆ ಸಂಬಂಧ ಸುಧಾರಿಸಲು ಸ್ವಲ್ಪ ಕಷ್ಟಪಡಬೇಕಾಗುತ್ತದೆ. ಸಂಗಾತಿಗೆ ನಿಮ್ಮ ಪ್ರೀತಿಯನ್ನು ತೋರ್ಪಡಿಸಲು ಅಂಜಿಕೆ ಬೇಡ.

ತುಲಾ(Libra):ನೀವು ಇಂದು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ದೀರ್ಘ ಸಮಯದಿಂದ ಕಾಡುತ್ತಿದ್ದ ಸಮಸ್ಯೆಗೆ ಇಂದು ಪರಿಹಾರ ಸಿಗಲಿದೆ. ಕೆಲಸ ಅಥವಾ ನೂತನ ಯೋಜನೆ ಮೇಲೆ ಗಮನ ಕೇಂದ್ರೀಕರಿಸಲು ಇಂದಿನ ದಿನ ನೆರವು ನೀಡಲಿದೆ. ಇದರಿಂದ ಸಹಜವಾಗಿ ನಿಮ್ಮ ಆತ್ಮವಿಶ್ವಾಸ ಉನ್ನತ ಮಟ್ಟದಲ್ಲಿರಲಿದೆ. 

ವೃಶ್ಚಿಕ(Scorpio):ವಿಶ್ರಾಂತಿ ಪಡೆಯಲು ಇಂದಿನ ದಿನ ಸೂಕ್ತವಾಗಿದೆ. ಇಂದು ಒಂಟಿಯಾಗಿರೋರು ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಅಧಿಕ. ಇನ್ನು ವಿವಾಹಿತರು ಸಂಗಾತಿಯೊಂದಿಗೆ ನೆಮ್ಮದಿಯ ಜೀವನ ನಡೆಸುತ್ತೀರಿ. ಸಂಗಾತಿಯೇ ನಿಮಗೆ ದೊಡ್ಡ ಶಕ್ತಿ. ಸುಖ-ದುಃಖ, ಸೋಲು-ಗೆಲುವಿನಲ್ಲಿ ಜೊತೆಗಿದ್ದು ನೆರವು ನೀಡುತ್ತಾರೆ. 

ಧನುಸ್ಸು(Sagittarius):ಇಂದು ಅನೇಕ ಆಕರ್ಷಕ ವ್ಯಕ್ತಿತ್ವದ ಜನರನ್ನು ಭೇಟಿಯಾಗುತ್ತೀರಿ. ಅವರೊಂದಿಗೆ ಉತ್ತಮ ಸಂಬಂಧ ಕೂಡ ಹೊಂದುತ್ತೀರಿ. ಕೆಲವೊಂದು ಕೆಲಸಗಳಲ್ಲಿ ಹಿನ್ನಡೆ ಅನುಭವಿಸುವ ಸಾಧ್ಯತೆ. ಆಸ್ತಿ ಖರೀದಿ ಸೇರಿದಂತೆ ಹೂಡಿಕೆ ವಿಚಾರದಲ್ಲಿ ಎಚ್ಚರ ಅಗತ್ಯ. ತಪ್ಪು ಹೂಡಿಕೆಯಿಂದ ಹಣ ಕೈಜಾರುವ ಸಾಧ್ಯತೆ ಅಧಿಕ.

ಮಕರ(Capricorn):ವಿಶ್ರಾಂತಿ ಪಡೆಯಲು ಮತ್ತು ಉತ್ಸಾಹದಿಂದ ಇರಲು ಇಂದು ನಿಮಗೆ ಸಾಕಷ್ಟು ಸಮಯ ಸಿಗಲಿದೆ. ನಿಮಗಾಗಿ ದೊರಕುವ ಈ ಸಮಯವನ್ನು ಸರಿಯಾಗಿ ಬಳಸಿಕೊಳ್ಳಿ. ಎಲ್ಲ ಸಮಯ ಮತ್ತು ಸಂದರ್ಭಗಳಲ್ಲಿಯೂ ನೀವು ಒಳ್ಳೆಯವರಾಗಿ ಇರಬೇಕಾದ ಅಗತ್ಯವಿಲ್ಲ. ಖುಷಿಯಿಂದ ಸಮಯ ಕಳೆಯುವತ್ತ ಗಮನ ಕೇಂದ್ರೀಕರಿಸಿ.

ಕುಂಭ(Aquarius):ಇಂದು ನಿಮ್ಮ ಪ್ರೀತಿ ಜೀವನ ಸಂತಸದಿಂದ ಕೂಡಿರುತ್ತದೆ.  ನೀವು ಒಂಟೆಯಾಗಿದ್ದರೆ ಇಂದು ನಿಮ್ಮ ಸಂಗಾತಿಯನ್ನು ಭೇಟಿಯಾಗಲಿದ್ದೀರಿ. ವೃತ್ತಿ ಸ್ಥಳದಲ್ಲಿ ಅಸೂಯೆಪಡುವ ಜನರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಆದರೆ, ನಿಮ್ಮ ಸಕಾರಾತ್ಮಕ ಮನೋಭಾವ ಹಾಗೂ ಪ್ರೀತಿ ತುಂಬಿದ ನಡೆ ಎಲ್ಲರನ್ನೂ ಆಕರ್ಷಿಸಲಿದೆ. 

ಮೀನ(Pisces):ಇಂದಿನ ದಿನ ನಿಮಗೆ ಉತ್ತಮವಾಗಿರಲಿದೆ. ಕಠಿಣ ಪರಿಶ್ರಮಪಡುವ ಉದ್ಯೋಗಿ ಎಂಬ ಕಾರಣಕ್ಕೆ ಇಂದು ನಿಮ್ಮನ್ನು ಇಂದು ಅಭಿನಂದಿಸುವ ಸಾಧ್ಯತೆ ಇದೆ. ಮುಂಬಡ್ತಿ ದೊರೆತು ನೀವು ಉನ್ನತ ಸ್ಥಾನಕ್ಕೇರುವ ಸಾಧ್ಯತೆ ಅಧಿಕ. ನಿಮ್ಮ ಬಿಡುವಿಲ್ಲದ ವೇಳಾಪಟ್ಟಿ ಸಂಗಾತಿಯೊಂದಿಗೆ ಜಾಸ್ತಿ ಸಮಯ ಕಳೆಯಲು ಅವಕಾಶ ನೀಡೋದಿಲ್ಲ.
 

Latest Videos
Follow Us:
Download App:
  • android
  • ios