Asianet Suvarna News Asianet Suvarna News

Daily Horoscope: ಇಂದು ಈ ರಾಶಿಯವರಿಗೆ ಸಂಬಂಧಿಗಳ ಜೊತೆಗೆ ಜಗಳ ಸಾಧ್ಯತೆ

ಇಂದು 07ನೇ ಸೆಪ್ಟೆಂಬರ್ 2023 ಗುರುವಾರ, ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.

daily horoscope of september 7th 2023 in kannada anu
Author
First Published Sep 7, 2023, 5:00 AM IST

ಮೇಷ ರಾಶಿ  (Aries): ಈ ರಾಶಿಯ ಯುವಕ ಅಥವಾ ಯುವತಿ ತಮ್ಮ ವೃತ್ತಿಜೀವನವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಆದರೆ, ನೆನಪಿಡಿ ಕೆಲವೊಮ್ಮೆ ಉದಾಸೀನತೆ ಕೆಲಸ ಕೆಡಿಸಬಲ್ಲದು. ಹಾಗಾಗಿ ಎಚ್ಚರ ಅಗತ್ಯ. ಸಾಮಾಜಿಕ ಕಾರ್ಯಗಳಲ್ಲಿನ ನಿಮ್ಮ ಆಸಕ್ತಿ ಇಂದು ಎಲ್ಲರಿಗೂ ತಿಳಿಯಲಿದೆ.  ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳಬೇಡಿ. ಸಂಗಾತಿ ಜೊತೆಗೆ ವೈಮನಸ್ಸು ಮೂಡುವ ಸಾಧ್ಯತೆ. ಅಲರ್ಜಿ ಸಮಸ್ಯೆ ಕಾಡಬಹುದು. 

ವೃಷಭ ರಾಶಿ  (Taurus): ಇಂದು ನೀವು ಕುಟುಂಬ ಹಾಗೂ ಉದ್ಯೋಗ ಎರಡೂ ಕಡೆ ಉತ್ತಮ ಸಮತೋಲನ ಸಾಧಿಸುವಿರಿ. ಕೆಲಸದಲ್ಲಿ ನಿಮ್ಮ ಸಂಪೂರ್ಣ ಸಾಮರ್ಥ್ಯ ಹಾಗೂ ತಲ್ಲೀನತೆಯನ್ನು ತೋರ್ಪಡಿಸುತ್ತೀರಿ. ಇಂದು ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸಗಳಿದ್ದರೂ  ಮುಂದೂಡಿ. ಯಾರಿಗಾದರೂ ಹಣ ನೀಡುವ ಮುನ್ನ ಮರುಪಾವತಿಯ ದಿನಾಂಕವನ್ನು ಮೊದಲೇ ನಿಗದಿಪಡಿಸಿಕೊಂಡು ನೀಡಿ. 

ಮಿಥುನ ರಾಶಿ (Gemini): ಇಂದು ನಿಮ್ಮ ಬಹುತೇಕ ಸಮಯ ಮನೆ ಸ್ವಚ್ಛತೆಯಲ್ಲೇ ಕಳೆದು ಹೋಗಲಿದೆ. ಮಕ್ಕಳೊಂದಿಗೆ ಸ್ವಲ್ಪ ಸಮಯ ಕಳೆಯುವ ಜೊತೆಗೆ ಅವರಿಗೆ ಅಗತ್ಯ ಮಾರ್ಗದರ್ಶನ ನೀಡುವ ಮೂಲಕ ಅವರ ಆತ್ಮವಿಶ್ವಾಸ ಹೆಚ್ಚಿಸುತ್ತೀರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ಖರ್ಚು ಹೆಚ್ಚುವ ಸಾಧ್ಯತೆ. ಸಂಬಂಧಿಗಳೊಂದಿಗೆ ಜಗಳವಾಗುವ ಸಾಧ್ಯತೆಯಿದ್ದು, ಮಾತಿನ ಮೇಲೆ ನಿಗಾವಿರಲಿ.

ಬೆಂಗಳೂರು: ಶ್ರೀ ಕೃಷ್ಣ ಜನ್ಮಾಷ್ಟಮಿ, ಬಾಲ ಕೃಷ್ಣನ ವೇಶ ಧರಿಸಿ ಸಂಭ್ರಮಪಟ್ಟ ಪುಟಾಣಿಗಳು..!

ಕಟಕ ರಾಶಿ  (Cancer): ಇಂದು ಅಸಾಧ್ಯವಾದ ಕೆಲಸ ಸಾಧ್ಯವಾಗುವ ಮೂಲಕ ನಿಮ್ಮ ಮನಸ್ಸಿಗೆ ಖುಷಿಯಾಗಲಿದೆ. ಕಳೆದ ಕೆಲವು ದಿನಗಳಿಂದ ಮನಸ್ಸಿನಲ್ಲಿದ್ದ ಗೊಂದಲ ಹಾಗೂ ಬೇಗುದಿಗಳು ಇಂದು ದೂರವಾಗಲಿವೆ. ಹೊಸ ಹುರುಪಿನೊಂದಿಗೆ ಕಾರ್ಯನಿರ್ವಹಿಸುತ್ತೀರಿ. ಉದ್ಯೋಗದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ. 

ಸಿಂಹ ರಾಶಿ  (Leo): ಇಂದಿನ ದಿನ ನಿಮಗೆ ಪೂರಕವಾಗಿದೆ. ಮನೆಯ ಹಿರಿಯ ಸದಸ್ಯರ ಸಲಹೆಗಳನ್ನು ಪಾಲಿಸಿ. ಅನೇಕ ಸಕಾರಾತ್ಮಕ ವಿಚಾರಗಳು ಇಂದಿನ ನಿಮ್ಮ ದಿನವನ್ನು ಹೆಚ್ಚು ಉತ್ಸಾಹಭರಿತವಾಗಿರಿಸಲಿವೆ. ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಹಾನಿ. ಆಸ್ತಿ ಹಾಗೂ ಜಮೀನಿಗೆ ಸಂಬಂಧಿಸಿ ಹಣ ವರ್ಗಾವಣೆ ಮಾಡುವಾಗ ಹೆಚ್ಚಿನ ಎಚ್ಚರ ವಹಿಸಿ. 

ಕನ್ಯಾ ರಾಶಿ (Virgo): ವಿಶೇಷ ವ್ಯಕ್ತಿಯೊಬ್ಬರಿಂದ ಇಂದು ನಿಮಗೆ ಲಾಭವಾಗಲಿದೆ. ದೀರ್ಘ ಸಮಯದಿಂದ ಕಾಡುತ್ತಿದ್ದ ಸಮಸ್ಯೆ ಇಂದು ಬಗೆಹರಿಯಲಿದೆ. ನಿಮ್ಮ ಯೋಚನೆ ಹಾಗೂ ದೈನಂದಿನ ಜೀವನದಲ್ಲಿನ ಬದಲಾವಣೆಗಳು ಯಶಸ್ಸಿಗೆ ಕಾರಣವಾಗಲಿವೆ. ಸಂಗಾತಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. 

ತುಲಾ ರಾಶಿ (Libra): ಅನೇಕ ಸಮಯದಿಂದ ಬಾಕಿ ಉಳಿದಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಇದರಿಂದ ಒತ್ತಡ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಯಾವುದೇ ಹೊಸ ಕೆಲಸಕ್ಕೆ ಕೈಹಾಕುವ ಮುನ್ನ ಪ್ರತಿ ಹಂತದ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ. ನಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವ ಜನರಿಂದ ಅಂತರ ಕಾಯ್ದುಕೊಳ್ಳಿ. 

ವೃಶ್ಚಿಕ ರಾಶಿ (Scorpio): ಎಷ್ಟೇ ಕೆಲಸದ ಒತ್ತಡವಿದ್ದರೂ ಸಂಬಂಧಿಗಳು ಹಾಗೂ ಸ್ನೇಹಿತರ ಜೊತೆ ಸಂಪರ್ಕದಲ್ಲಿರಿ. ಕಳೆದ ಕೆಲವು ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಚಿಂತೆಗಳು ಇಂದು ದೂರವಾಗಲಿವೆ. ಹಣದ ವಿಷಯವಾಗಿ ಜಗಳವಾಗುವ ಸಾಧ್ಯತೆಯಿದೆ. ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಇದರಿಂದ ಪ್ರಮುಖ ಕೆಲಸವೊಂದನ್ನು ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. 

ಧನು ರಾಶಿ (Sagittarius): ಇಂದು ಯಾವುದೇ ಕೆಲಸವನ್ನು ಮಾಡೋದಾದರೂ ಯೋಚಿಸಿ ಮಾಡಿ. ಹಾಗೆಯೇ ಶಾಂತ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ. ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರುವ ಸಾಧ್ಯತೆಯಿದೆ. ಇನ್ನೊಬ್ಬರ ವಿಷಯದಲ್ಲಿ ಅತೀಯಾಗಿ ಮೂಗು ತೂರಿಸಲು ಹೋಗಬೇಡಿ. ಇದರಿಂದ ನಿಮಗೇ ತೊಂದರೆ. 

ರಾಧಾ-ಕೃಷ್ಣನ ವಿಗ್ರಹವನ್ನು ಇಡುತ್ತಿದ್ದರೆ, ಈ ವಾಸ್ತು ನಿಯಮಗಳನ್ನು ಅನುಸರಿಸಿ

ಮಕರ ರಾಶಿ (Capricorn): ಇಂದಿನ ನಿಮ್ಮ ಬಹುತೇಕ ಸಮಯವನ್ನು ಸಾಮಾಜಿಕ ಕಾರ್ಯಗಳಲ್ಲಿ ಕಳೆಯುತ್ತೀರಿ. ನಿಮ್ಮ ವ್ಯಕ್ತಿತ್ವ ಕೂಡ ಹೆಚ್ಚು ವಿಕಸನಗೊಳ್ಳಲು ಇದು ನೆರವು ನೀಡುತ್ತದೆ. ಹಲವು ದಿನಗಳಿಂದ ಬಾಕಿ ಉಳಿದಿರುವ ಕೆಲಸವೊಂದು ಇಂದು ಪೂರ್ಣವಾಗಲಿದೆ. ಇಂದು ನಿಮ್ಮ ಸಂಗಾತಿಯು ಎಲ್ಲ ಕೆಲಸಗಳಲ್ಲೂ ನಿಮಗೆ ಬೆಂಬಲ ನೀಡಲಿದ್ದಾರೆ. 

ಕುಂಭ ರಾಶಿ (Aquarius): ಆತ್ಮೀಯ ಸ್ನೇಹಿತನ ದಿಢೀರ್ ಭೇಟಿ ಮನಸ್ಸಿಗೆ ಖುಷಿ ನೀಡಲಿದೆ. ಆಸ್ತಿಗೆ ಸಂಬಂಧಿಸಿದ ಕೆಲಸದಲ್ಲಿ ಇಂದು ಪ್ರಗತಿ. ವಾಹನ ಖರೀದಿಗೆ ಒಳ್ಳೆಯ ದಿನ. ಮಾತನಾಡುವಾಗ ನೀವು ಬಳಸುವ ಪದಗಳ ಬಗ್ಗೆ ಎಚ್ಚರ ವಹಿಸಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಕಾಣಿಸಿಕೊಳ್ಳುವ ಸಾಧ್ಯತೆ. ಹಿರಿಯ ಸಹಕಾರದಿಂದ ಕೆಲಸಗಳಲ್ಲಿ ಪ್ರಗತಿ ಸಾಧಿಸುತ್ತೀರಿ. 

ಮೀನ ರಾಶಿ  (Pisces): ಮನೆಗೆ ವಿಶೇಷ ಅತಿಥಿಗಳ ಆಗಮನವಾಗಲಿದೆ. ಉಡುಗೊರೆಗಳ ವಿನಿಮಯದಿಂದ ಸಂತಸದ ವಾತಾವರಣ ಮನೆ ಮಾಡಲಿದೆ. ಉದ್ಯೋಗದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ಪತಿ-ಪತ್ನಿ ಸಂಬಂಧ ಸುಮಧುರವಾಗಿರಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಅನಗತ್ಯ ವಿಚಾರಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. 


 

Follow Us:
Download App:
  • android
  • ios