Asianet Suvarna News Asianet Suvarna News

Daily Horoscope: ಕಟಕ ರಾಶಿಗಿಂದು ದಾಂಪತ್ಯ ಕಂಟಕ

24 ನವೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕ ರಾಶಿಗೆ ಧನ ನಷ್ಟ, ವೃಷಭ ರಾಶಿಯವರಿಗೆ ನೆಮ್ಮದಿ

Daily horoscope of November 24th 2021 in Kannada SKR
Author
Bangalore, First Published Nov 24, 2021, 5:03 AM IST
  • Facebook
  • Twitter
  • Whatsapp

ಮೇಷ(Aries): ಸಹೋದರರ ಸಹಕಾರ, ಸೇವಕರ ಸಹಾಯ ಇರಲಿದೆ.  ಆದರೂ ಅಸಮಾಧಾನ ತಪ್ಪಿದ್ದಲ್ಲ. ಈಶ್ವರ ಪ್ರಾರ್ಥನೆ ಮಾಡುವುದರಿಂದ ಮಧ್ಯಾಹ್ನದ ಹೊತ್ತಿಗೆ ಮನಸ್ಸಿಗೆ ಕೊಂಚ ನೆಮ್ಮದಿ ಲಭಿಸಲಿದೆ. ಮನೆ, ಭೂಮಿ, ಆಸ್ತಿಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳಲು ಶುಭದಿನ. ನಾಲ್ಕನೇ ಮನೆಯಲ್ಲಿರುವ ಚಂದ್ರನ ಸಹಕಾರದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ. ದಿನಾಂತ್ಯಕ್ಕೆ ಉಲ್ಲಾಸ.

ವೃಷಭ(Taurus): ಆಹಾರ ಸಮೃದ್ಧಿ, ಕುಟುಂಬ ಸೌಖ್ಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ. ಯಾತ್ರೆ, ಇನ್ನಿತರೆ ಪ್ರಮುಖ ಕಾರ್ಯಗಳ ಫಲಕ್ಕಾಗಿ ಪಿತೃದೇವತೆಗಳ ಆರಾಧನೆ ಮಾಡಿ. ವಿವಾಹಾಕಾಂಕ್ಷಿಗಳಿಗೆ ಉತ್ತಮ ಸಂಬಂಧ ಕೂಡಿಬರಲಿದೆ. ವಿವಾಹಿತರಿಗೆ ನೆಮ್ಮದಿ. ಗಣೇಶ ದೇವಸ್ಥಾನಕ್ಕೆ ಭೇಟಿ ಕೊಡಿ.

ಮಿಥುನ(Gemini): ಸಂಗಾತಿಯೊಂದಿಗೆ ಸಮಸ್ಯೆಗಳಿದ್ದಲ್ಲಿ ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಉತ್ತಮ ದಿನ. ವ್ಯಯ ಹೆಚ್ಚು, ವಸ್ತು ನಷ್ಟ ಸಾಧ್ಯತೆ. ಉದರಬಾಧೆ ಸಾಧ್ಯತೆ. ಸಾತ್ವಿಕ ಆಹಾರ ಸೇವನೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ. ಶುಭಫಲಕ್ಕಾಗಿ ಹಸುವಿಗೆ ಅಕ್ಕಿಬಾಳೆಹಣ್ಣು ತಿನ್ನಿಸಿ. ತಂದೆ ತಾಯಿಯೊಂದಿಗೆ ಉತ್ತಮ ಮಾತನ್ನಾಡುವುದರಿಂದ ಹಿರಿಯರ ಆಶೀರ್ವಾದ ಫಲ.

Name and Personality: S ಅಕ್ಷರದಿಂದ ಸ್ಟಾರ್ಟ್ ಆಗೋ ಹುಡ್ಗೀರು ಹೇಗೆ ಗೊತ್ತಾ..?

ಕಟಕ(Cancer): ದೇಹಾಯಾಸ. ದಾಂಪತ್ಯ-ವ್ಯವಹಾರಗಳಲ್ಲಿ ಕೊಂಚ ತೊಡಕಿನ ಫಲ. ಸಾಧ್ಯವಾದಷ್ಟು ಕಡಿಮೆ ಮಾತನಾಡಿ, ವಾದಗಳಿಂದ ದೂರ ಉಳಿಯಿರಿ. ಹಣಕಾಸಿನ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ನೆಮ್ಮದಿಗಾಗಿ ಕೃಷ್ಣನಿಗೆ ತುಳಸಿ ಸಮರ್ಪಣೆ ಮಾಡಿ ಪ್ರಾರ್ಥಿಸಿ. ದೂರ ಪ್ರಯಾಣದಿಂದ ದೂರ ಉಳಿಯಿರಿ.

ಸಿಂಹ(Leo): ಇಂದು ಸಿಂಹ ರಾಶಿಯವರಿಗೆ ಲಾಭದ ದಿನ. ಶೇರು, ವ್ಯಾಪಾರದಲ್ಲಿ ಅದೃಷ್ಟ ಪರಿಶೀಲಿಸಬಹುದು. ಪ್ರತಿಭಾ ಶಕ್ತಿಯಿಂದ ಕಾರ್ಯ ಸಾಧನೆ. ಆದರೆ ಆರೋಗ್ಯದ ಕಡೆ ಕೊಂಚ ಹೆಚ್ಚು ಗಮನ ಹರಿಸುವುದೊಳಿತು. ಮಕ್ಕಳಿಂದ ಅಸಮಾಧಾನ ಉಂಟಾಗುವ ಸಂಭವ ಇದ್ದು, ಋಣ ಮೋಚನ ಮಂಗಲ ಸ್ತೋತ್ರ ಪಠಿಸಿ.

Vaastu Tips: ಮದುವೆ ಲೇಟ್ ಆಗುತ್ತಿದ್ಯಾ? ಇಲ್ಲಿದೆ ಪರಿಹಾರ!

ಕನ್ಯಾ(Virgo): ಇಂದು ಕನ್ಯಾ ರಾಶಿಯವರ ಪಾಲಿಗೆ ಶುಭದಿನ. ಶಾಂತ ಚಿತ್ತದಿಂದ ದಿನ ಆರಂಭಿಸಿ. ಉದ್ಯೋಗ ಲಾಭ, ಸ್ಥಾನ ಮಾನಗಳ ಫಲವಿದೆ, ಶತ್ರುಗಳಿಂದ ಜಯ, ಸುಖ ಸಮೃದ್ಧಿ ಇದೆ. ಆದರೆ ಮಕ್ಕಳಿಂದ ಅಸಮಾಧಾನ ಉಂಟಾಗಬಹುದು. ತಾಳ್ಮೆ ಕಳೆದುಕೊಳ್ಳದಂತೆ ಎಚ್ಚರ ವಹಿಸಿ. 

ತುಲಾ(Libra): ದೇವತಾ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಹೆಚ್ಚು ಸಂತಸ, ನೀರಿನ ವಿಷಯದಲ್ಲಿ ಎಚ್ಚರವಾಗಿರಿ, ಮನೆಯಿಂದ ಹೊರಗೆ ಕಾಲಿಡುವ ಮುನ್ನ ಆಂಜನೇಯ ಪ್ರಾರ್ಥನೆ ಮಾಡುವುದರಿಂದ ಕಾರ್ಯಗಳ ಫಲಸಾಧನೆ ಹೆಚ್ಚು. ವಿದ್ಯಾರ್ಥಿಗಳಿಗೆ ಏಕಾಗ್ರತೆ, ವಿವಾಹಿತರಿಗೆ ನೆಮ್ಮದಿ.

ವೃಶ್ಚಿಕ(Scorpio): ಆರೋಗ್ಯದಲ್ಲಿ ಏರುಪೇರು. ನಷ್ಟ ಫಲವಿರಲಿದೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಜಾಗರೂಕತೆ ವಹಿಸಿ. ಸ್ತ್ರೀಯರೊಂದಿಗೆ ಕೊಂಚ ಕಲಹದ ವಾತಾವರಣ ಇರಲಿದೆ. ದೊಡ್ಡ ಕೆಲಸಗಳನ್ನು ಇಂದು ಆರಂಭಿಸಬೇಡಿ. ಬಹುಕಾಲದ ಹರಕೆ ತೀರಿಸುವತ್ತ ಗಮನ ಹರಿಸಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 

ಧನುಸ್ಸು(Sagittarius): ಧನು ರಾಶಿಯವರ ಆರೋಗ್ಯ ಸದೃಢವಾಗಲಿದೆ. ಆದರೆ ಸಂಗಾತಿಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸದಿಂದ ಆತಂಕ. ಮಹಾಲಕ್ಷ್ಮಿ ಅಷ್ಟೋತ್ತರ ಹೇಳಿಕೊಳ್ಳಿ. ಸಾಧ್ಯವಾದಷ್ಟು ಮಿತ  ಖರ್ಚು ಮಾಡಿ. ದೊಡ್ಡ ಖರ್ಚುಗಳಿಗಿಂದು ಶುಭಫಲವಿಲ್ಲ.

ಮಕರ(Capricorn): ವಾಗ್ಬಲ, ಹಣಬಲ ಇರಲಿದೆ. ಕೋರ್ಟಿನ ವ್ಯಾಜ್ಯಗಳ ಸಂಬಂಧ ಯಶಸ್ಸು. ವಾಹನ ಯೋಗ. ಆರೋಗ್ಯದ ವಿಷಯದಲ್ಲಿ ಹೆಚ್ಚು ಜಾಗರೂಕರಾಗುವುದು ಅವಶ್ಯಕ. ಸಂಗಾತಿಯಿಂದ ಮನಸ್ಸಿಗೆ ಸಂತಸ. ಬಹಳ ಕಾಲದಿಂದ ಅಂದುಕೊಂಡ ಕೆಲಸ ಈಡೇರಿ ಮನಸ್ಸು ಹಗುರಾಗುವುದು. 

ಕುಂಭ(Aquarius): ಪ್ರತಿಭಾಶಕ್ತಿ ಜಾಗೃತವಾಗಲಿದೆ, ಮಕ್ಕಳ ಸಹಕಾರ ಇರಲಿದೆ. ಉನ್ನತ ಶಿಕ್ಷಣದಲ್ಲಿ ಸಹಾಯ. ಕೃಷ್ಣನ ಪ್ರಾರ್ಥನೆ ಮಾಡಿ. ವಿವಾಹಾಕಾಂಕ್ಷಿಗಳಿಗೆ ಶುಭಸುದ್ದಿ. ಬಹಳ ಕಾಲದಿಂದ ಮುಂದೂಡಿಕೊಂಡು ಬಂದ ಪ್ರಮುಖ ಕಾರ್ಯಗಳನ್ನು ಕೈಗೊಳ್ಳಲು ಶುಭದಿನ.

ಮೀನ(Pisces): ಸಮಾಧಾನ ಇರಲಿದೆ, ಕೃಷಿಕರಿಗೆ ಅನುಕೂಲ, ವಾಹನಯೋಗ, ಪ್ರಯಾಣದಲ್ಲಿ ಸೌಖ್ಯ, ಮಕ್ಕಳಿಂದ ಸಂತಸ. ಆರೋಗ್ಯದ ಕಡೆ ಗಮನ ಕೊಡಿ, ಗಣಪತಿಗೆ ಕಡಲೆ ಧಾನ್ಯ ಅರ್ಪಿಸಿ. 

Follow Us:
Download App:
  • android
  • ios