4 ಮಾರ್ಚ್ 2022, ಶುಕ್ರವಾರದ ಭವಿಷ್ಯ ಹೇಗಿದೆ?ಯಾವ ರಾಶಿಗೆ ಶುಭ ಫಲವಿದೆ?ಕೆಟ್ಟ ಸಹವಾಸದ ಕೆಟ್ಟ ಪರಿಣಾಮಗಳನ್ನೆದುರಿಸುವ ಕನ್ಯಾ

ಮೇಷ(Aries): ಸಣ್ಣಪುಟ್ಟ ಆಸೆಗಳನ್ನು ಗಂಟಿಕ್ಕಿಕೊಂಡರೆ ದೊಡ್ಡ ಯೋಜನೆಗೆ ಕೈ ಹಾಕಬಹುದು. ಒಂದು ಬೇಕೆಂದರೆ ಮತ್ತೊಂದನ್ನು ಬಿಡಬೇಕಾಗುತ್ತದೆ ಎಂಬ ಅರಿವಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಿ. ಮನೆಯ ಸದಸ್ಯರ ನಡುವೆ ಸಮನ್ವಯ ಕೊರತೆ ಮುಂದುವರಿಯುವುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೃಷಭ(Taurus): ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಕೆಲಸಗಳು ಆಗಿ ಸಮಾಧಾನ ತರಬಹುದು. ನಿಮಗಾಗಿ ಕೊಂಚ ಸಮಯ ಮಾಡಿಕೊಳ್ಳುವತ್ತ ಗಮನ ಹರಿಸಿ. ಮಕ್ಕಳ ಶಾಲಾ ಚಟುವಟಿಕೆಗಳಿಗೆ ನಿಮ್ಮ ಸಹಾಯ ಬೇಕಾಗಬಹುದು. ಕಾಲು ನೋವು ಕಂಗೆಡಿಸಬಹುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

ಮಿಥುನ(Gemini): ಮನೆಯ ಸ್ವಚ್ಛತೆ ಕಡೆ ಗಮನ ವಹಿಸಿ. ಅಸ್ತವ್ಯಸ್ತ ಸರಕುಗಳಿಂದಾಗಿ ಮನಸ್ಸಿಗೆ ಗೊಂದಲ ಉಂಟಾಗಬಹುದು. ತಂದೆತಾಯಿಯ ಮನಸ್ಸಿಗೆ ನೋವುಂಟು ಮಾಡುವಂತೆ ಮಾತಾಡಬೇಡಿ. ನಿಮ್ಮ ವ್ಯಸನಗಳನ್ನು ದೂರವಿಡದೆ ಸಾಮಾಜಿಕ ಗೌರವಗಳನ್ನು ನಿರೀಕ್ಷಿಸಬೇಡಿ. ಗೋ ಗ್ರಾಸ ನೀಡಿ. 

ಕಟಕ(Cancer): ನಿಮ್ಮನ್ನು ಹೈರಾಣು ಮಾಡಿರುವ ನ್ಯಾಯಾಲಯದ ಕೆಲಸದಿಂದ ಮುಕ್ತರಾಗಬಹುದು. ನಿಮ್ಮ ತ್ಯಾಗದಿಂದ ಆಪ್ತರ ಬದುಕು ಸರಿ ಹೋಗಬಹುದು. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಿ. ಧೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ತಪಾಸಣೆ ಮಾಡಿಸಿ. ಆಹಾರದ ಕುರಿತ ಎಚ್ಚರಿಕೆ ಅಗತ್ಯ. ತಾಯಿಯ ಆಶೀರ್ವಾದ ಪಡೆಯಿರಿ. 

ಸಿಂಹ(Leo): ಪ್ರೇಮ ವ್ಯವಹಾರಗಳಲ್ಲಿ ದುಃಖ ಹೆಚ್ಚಬಹುದು. ಮಕ್ಕಳ ಮಾನಸಿಕ ಆರೋಗ್ಯದ ವಿಷಯಕ್ಕಾಗಿ ಹೆಚ್ಚು ಗಮನ ಹರಿಸಬೇಕಾದ ಅಗತ್ಯವಿದೆ. ಕೋಪದಿಂದ ಕೆಲಸ ಕೆಡುತ್ತದೆ ಎಂಬ ಎಚ್ಚರಿಕೆ ಇರಲಿ. ದೂರ ಪ್ರಯಾಣ ಕೈಗೊಳ್ಳಬೇಕಾಗಬಹುದು. ದುರ್ಗಾ ಅಷ್ಟೋತ್ತರ ಪಠಣ ಮಾಡಿ. 

Gemstones For Luck: ಈ ಎರಡು ಹರಳಿಂದ ಬದಲಾಗುತ್ತೆ ನಿಮ್ಮ ಅದೃಷ್ಟ!

ಕನ್ಯಾ(Virgo): ಎಷ್ಟೇ ನಂಬಿಕೆಯ ಜನರಾದರೂ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಸ್ನೇಹಿತರ ಸಹವಾಸದಿಂದ ವ್ಯಕ್ತಿತ್ವಕ್ಕೆ ಕುಂದು ಬರುತ್ತಿದ್ದರೆ ಅಂಥ ಸ್ನೇಹದಿಂದ ದೂರ ಉಳಿಯುವುದೇ ಒಳ್ಳೆಯದು. ಕೆಲಸ ಸಂಬಂಧ ಪ್ರಯಾಣ ಇರಲಿದೆ. ಚರ್ಮ ಸಮಸ್ಯೆಗಳು ಕಾಡಬಹುದು. ಕುಲದೇವತಾ ಸ್ಮರಣೆ ಮಾಡಿ. 

ತುಲಾ(Libra): ಮನೆಯಲ್ಲಿ ಧಾರ್ಮಿಕ ಕಾರ್ಯಗಳು ಜರುಗಬಹುದು. ಪತಿ ಪತ್ನಿಯರ ನಡುವೆ ಸಮನ್ವಯ ಚೆನ್ನಾಗಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅಧಿಕಾರಿಗಳೊಂದಿಗೆ ಹೆಚ್ಚು ಸೌಜನ್ಯವನ್ನು ಕಾಪಾಡಿಕೊಳ್ಳಿ. ಕಚೇರಿ ಕೆಲಸಗಳನ್ನು ಸಮಾಧಾನವಾಗಿ ನಿರ್ವಹಿಸಿ. ಶಾರದಾಂಬೆ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಬ್ಯಾಂಕ್, ಕೋರ್ಟ್ ಕೆಲಸಗಳು ಸರಾಗವಾಗಿ ನಡೆದು ನೆಮ್ಮದಿ ಸಿಗಲಿದೆ. ತಲೆನೋವು, ಬೆನ್ನುನೋವಿನ ಸಮಸ್ಯೆಗಳು ಎದುರಾಗಬಹುದು. ದೇವರ ವಿಚಾರಗಳಲ್ಲಿ ಆಸಕ್ತಿ ಹೆಚ್ಚುವುದು. ನೆರೆ ಹೊರೆಯವರಿಗೆ ನೆರವು ನೀಡುವಿರಿ. ಕಚೇರಿ ಕೆಲಸಗಳು ಸುಲಭ ಸಾಧನೆಯಾಗುವುವು. ಮಹಾಲಕ್ಷ್ಮೀ ಆರಾಧನೆ ಮಾಡಿ. 

Temples Of India: ದೋಸೆ, ಚಾಕ್ಲೇಟ್, ನೂಡಲ್ಸ್... ಇವೇ ಇಲ್ಲಿ ದೇವರಿಗೆ ನೈವೇದ್ಯ, ಭಕ್ತರಿಗೆ ಪ್ರಸಾದ! ಎಲ್ಲಿ ಅಂದ್ರಾ?

ಧನುಸ್ಸು(Sagittarius): ನಿಮ್ಮ ಮನೋಭಾವಕ್ಕೆ ಕುಟುಂಬವರ್ಗದಿಂದ ವಿರೋಧಗಳು ಕೇಳಿಬರಬಹುದು. ಕೆಲಸದಲ್ಲಿ ಪ್ರತಿಭೆಯನ್ನು ತೋರಿಸುವ ಅಗತ್ಯವಿದೆ. ಅದಕ್ಕಾಗಿ ಹೆಚ್ಚಿನ ಏಕಾಗ್ರತೆಯಿಂದ ಶ್ರಮ ಹಾಕಿ. ಪ್ರೇಮ ವ್ಯವಹಾರಗಳಲ್ಲಿ ತೊಡಕುಗಳು ಹೆಚ್ಚಬಹುದು. ಹತ್ತಿರದ ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ಸ್ನೇಹಿತರು, ಪರಿಚಿತ ಹಿರಿಯರ ಭೇಟಿಯಿಂದ ಸಂತಸ. ಗೃಹಬಳಕೆಯ ವಸ್ತುಗಳು ಹಾಗೂ ವಸ್ತ್ರಕ್ಕಾಗೆ ಖರ್ಚು ಮಾಡುವಿರಿ. ನಿರುದ್ಯೋಗಿಗಳಿಗೆ ಅವಕಾಶಗಳು ಬರಬಹುದು. ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗುವ ಸಂಭವ. ಶ್ರದ್ಧೆಯಿಂದ ಲಲಿತಾ ಸಹಸ್ರನಾಮ ಪಠಿಸಿ. 

ಕುಂಭ(Aquarius): ಉದ್ಯೋಗ, ವ್ಯಾಪಾರದ ಕಡೆ ಹೆಚ್ಚಿನ ಸಮಯ, ಶ್ರಮ ಅಗತ್ಯ. ಆಸ್ತಿ ಸಂಬಂಧ ಸಂಘರ್ಷಗಳಿಂದ ಮನಸ್ಸಿಗೆ ಕಸಿವಿಸಿ. ಸುಖಾಸುಮ್ಮನೆ ಬೇಡದ ವಿವಾದಗಳಲ್ಲಿ ಸಿಕ್ಕಿ ಬೀಳುವಿರಿ. ಅಸಮಾಧಾನದ ದಿನ. ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಲಲಿತಾ ಸಹಸ್ರನಾಮ ಪಠಿಸಿ. 

ಮೀನ(Pisces): ಹಿಂದೆ ಆಡಿದ ತಪ್ಪು ಮಾತುಗಳು ಈಗ ತಿರುಗುಬಾಣವಾಗಿ ಕಾಡಬಹುದು. ಸಾಮಾಜಿಕವಾಗಿ, ಧಾರ್ಮಿಕವಾಗಿ, ದಾನ-ಧರ್ಮಾದಿ ಸದ್ವಿನಿಯೋಗದಿಂದ ಹೆಚ್ಚುವ ನೆಮ್ಮದಿ. ಸಂಗಾತಿಯ ಸಹಕಾರದಿಂದ ಕೆಲಸಕಾರ್ಯಗಳು ಯಶಸ್ವಿಯಾಗಲಿವೆ. ಆರೋಗ್ಯ ಚೆನ್ನಾಗಿರಲಿದೆ. ನವಗ್ರಹ ಆರಾಧನೆ ಮಾಡಿ.