Daily Horoscope: ಮಿಥುನಕ್ಕೆ ಶುಭ ದಿನ, ಕುಂಭಕ್ಕೆ ಗೊಂದಲ

27 ಮಾರ್ಚ್ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಶ್ಚಿಕಕ್ಕೆ ಸಂತಸದ ದಿನ

Daily horoscope of March 27th 2022 in Kannada SKR

ಮೇಷ(Aries): ಅನಾರೋಗ್ಯದ ಕಾರಣದಿಂದ ಇಡೀ ದಿನ ವಿಶ್ರಾಂತಿಯಲ್ಲಿ ಕಳೆಯುವಿರಿ. ಓದುವುದು, ಬರೆಯುವುದು ಮುಂತಾದ ಹವ್ಯಾಸಗಳಲ್ಲಿ ತೊಡಗಿಸಿಕೊಂಡರೆ ನೆಮ್ಮದಿ. ನಿಮ್ಮ ಉದ್ವೇಗ, ಮಾತಿನ ಮೇಲೆ ಹತೋಟಿ ಸಾಧಿಸಲಾಗದೇ ಹೋದರೆ ಮನಃಶಾಂತಿ ಹಾಳಾಗುವುದು. ಸೂರ್ಯನಿಗೆ ಅರ್ಘ್ಯ ಬಿಡಿ.

ವೃಷಭ(Taurus): ಆಹಾರ ಸಮೃದ್ಧಿ ಇರಲಿದೆ. ಗೆಳೆಯರೊಡನೆ ಮನೋರಂಜನೆಯ ಚಟುವಟಿಕೆಗಳಲ್ಲಿ ತೊಡಗುವಿರಿ. ಹೊಸ ಅನುಭವಗಳಿಂದ ಉಲ್ಲಸಿತರಾಗುವಿರಿ. ಚುರುಕಿನಿಂದ ಕೆಲಸಗಳು ಸಾಗುತ್ತಾ ಹೋಗುತ್ತವೆ. ಅಹಂಕಾರ ಪ್ರದರ್ಶನ ಸಲ್ಲದು. ನವಗ್ರಹ ಉಪಾಸನೆ ಮಾಡಿ. 

ಮಿಥುನ(Gemini): ಬದುಕಿನಲ್ಲಿ ಕಂಡುಕೊಂಡಿರುವ ಹೊಸ ಹವ್ಯಾಸವು ಮನಸ್ಸಿಗೆ ಸಂತೋಷ ತರುವುದು. ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದರಿಂದ ಜನಮನ್ನಣೆ ಸಿಗಲಿದೆ. ಮಾನಸಿಕವಾಗಿ ಒತ್ತಡದಿಂದ ಮುಕ್ತರಾಗಿರುತ್ತೀರಿ ಮತ್ತು ನೀವು ವೈಯಕ್ತಿಕ ಜೀವನದಲ್ಲಿಯೂ ಸಂತೋಷವಾಗಿರುತ್ತೀರಿ. ಆದಿತ್ಯ ಹೃದಯ ಪಠಿಸಿ.

ಕಟಕ(Cancer): ಯಾರೋ ನಿಮ್ಮವರ ಬಗ್ಗೆ ಸಲ್ಲದ ಮಾತುಗಳನ್ನಾಡಬಹುದು. ಪರಾಂಬರಿಸಿ ನೋಡದೆ ನಂಬಿ ಕೆಡಬೇಡಿ. ಸಣ್ಣಪುಟ್ಟ ತಿರುಗಾಟಗಳು ಮುದ ನೀಡಲಿವೆ. ಸ್ವಂತ ಉದ್ಯೋಗದಿಂದ ಧನಲಾಭ ಪಡೆಯುತ್ತೀರಿ. ಆತುರದ ನಿರ್ಧಾರ ಬೇಡ. ಅಶ್ವತ್ಥ ಮರಕ್ಕೆ ದೀಪ ಹಚ್ಚಿ.

ಸಿಂಹ(Leo): ಕ್ರೀಡಾ ಚಟುವಟಿಕೆಗಳಲ್ಲಿ ಕಾಲಿಗೆ ಪೆಟ್ಟಾಗುವ ಸಾಧ್ಯತೆ. ನೋವು ಬಾಧಿಸುವುದು. ಹಳೆಯ ಸಾಲವನ್ನು ನೀವು ಮರುಪಾವತಿ ಮಾಡಲಿದ್ದೀರಿ. ತಂದೆಯಿಂದ ಅನುಕೂಲಗಳು ಸಿಗಬಹುದು. ಸ್ವಂತ ಉದ್ಯೋಗ ಮಾಡುವವರಿಗೆ ಅತ್ಯುತ್ತಮ ಲಾಭ ಪಡೆಯುವಿರಿ. ಹತ್ತಿರದ ದೇವಾಲಯಕ್ಕೆ ಭೇಟಿ ನೀಡಿ. 

ಕನ್ಯಾ(Virgo): ಸಂಗಾತಿಯ ನಿರೀಕ್ಷೆಗಳನ್ನು ಈಡೇರಿಸುವ ಪ್ರಯತ್ನ ನುಜ್ಜುಗುಜ್ಜಾಗಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಯಶಸ್ಸನ್ನು ಪಡೆಯುತ್ತಾರೆ. ಕಾಲು ನೋವು, ನರಗಳ ಸೆಳೆತ ಇತ್ಯಾದಿ ಸಮಸ್ಯೆಗಳಿಗೆ ಸಿಲುಕುವಿರಿ. ವಿಷ್ಣು ಸಹಸ್ರನಾಮ ಪಠಣ ಮಾಡಿ.

ತುಲಾ(Libra): ವಿದ್ಯಾರ್ಥಿಗಳು ಉದಾಸೀನವಾಗಿ ದಿನ ಕಳೆಯುವರು. ಮನರಂಜನೆಗಾಗಿ ವ್ಯಯ ಹೆಚ್ಚುವುದು. ಅನಗತ್ಯ ವಾದದಿಂದ ಸಂಗಾತಿಯೊಂದಿಗೆ ಸಂಬಂಧ ಅಹಿತಕರವಾಗಿರಲಿದೆ. ಆರೋಗ್ಯ ಚೆನ್ನಾಗಿರುವುದು. ಲಕ್ಷ್ಮೀ ವೆಂಕಟೇಶ್ವರ ಸ್ಮರಣೆ ಮಾಡಿ. 

ಏಪ್ರಿಲ್‌ನಲ್ಲಿ ನಡೆಯಲಿದೆ 'ಮಹಾಗೋಚಾರ', ಈ ಐದು ರಾಶಿಗಳಿಗೆ ಶುಭ ವಿಚಾರ

ವೃಶ್ಚಿಕ(Scorpio): ಅವಿವಾಹಿತರಿಗೆ ಉತ್ತಮ ಸಂಬಂಧ ಕೂಡಿ ಬರಲಿದೆ. ದಿನಾಂತ್ಯದಲ್ಲಿ ಸಂತೋಷ ತುಂಬಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆದು ಮನಸ್ಸು ಪ್ರಫುಲ್ಲವಾಗಿರುವುದು. ಭವಿಷ್ಯದ ಬಗ್ಗೆ ಸಕಾರಾತ್ಮಕ ಧೋರಣೆ ಮೂಡುವುದು. ಆದಿತ್ಯ ಹೃದಯ ಪಠಣ ಮಾಡಿ. 

ಧನುಸ್ಸು(Sagittarius): ಹೊಸ ಪರಿಚಯಗಳಾಗಲಿದೆ. ಯಾರನ್ನೂ ನೋಡಿದೊಡನೆ ಜಜ್ ಮಾಡಬೇಡಿ. ಸಮಯ ಕೊಟ್ಟು ನೋಡಿ, ಅವರು ನಿಮಗೆ ಉತ್ತಮ ಸ್ನೇಹಿತರಾಗಲಿದ್ದಾರೆ. ಅಂದುಕೊಂಡ ಕೆಲಸಗಳು ವೇಗ ಗತಿಯಲ್ಲಿ ನಡೆಯುತ್ತದೆ. ಗೋವಿಗೆ ಹಸಿರು ಪದಾರ್ಥಗಳನ್ನು ತಿನ್ನಿಸಿ. 

ಮಕರ(Capricorn): ಮಾತಿನಲ್ಲಿ ಯಾರನ್ನೋ ಅವರ ರೂಪ, ವಿದ್ಯೆ, ಸ್ಥಿತಿವಂತಿಕೆಯ ಕಾರಣಕ್ಕೆ ವ್ಯಂಗ್ಯ ಮಾಡಲು ಹೋಗಬೇಡಿ. ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರುತ್ತದೆ. ಮನೆಕೆಲಸಗಳಲ್ಲಿ ತೊಡಗಿಸಿಕೊಳ್ಳುವಿರಿ. ಬಿಳಿ ಧಾನ್ಯಗಳನ್ನು ದಾನ ಮಾಡಿ. 

ಕುಂಭ(Aquarius): ಮಕ್ಕಳ  ವಿಷಯದಲ್ಲಿ ಹಲವು ಗೊಂದಲಗಳು ಕಾಡುವುವು. ಅವರ ಭವಿಷ್ಯದ ಬಗ್ಗೆ ಚಿಂತಿತರಾಗುವಿರಿ. ಯಾವುದೇ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮುನ್ನ ಸಾಕಷ್ಟು ಯೋಚಿಸಿ. ನುರಿತರ ಸಲಹೆ ಪಡೆಯಿರಿ. ತಂದೆ ತಾಯಿಯ ಆಶೀರ್ವಾದ ಪಡೆಯಿರಿ. 

Venus Transit: ಶುಕ್ರ ಗೋಚಾರದಿಂದ ನಿಮ್ಮ ಲವ್ ಲೈಫ್‌ನಲ್ಲಾಗಲಿದೆ ಈ ಬದಲಾವಣೆ

ಮೀನ(Pisces): ಕಾಲ್ಪನಿಕ ಲೋಕಕ್ಕೂ ವಾಸ್ತವಕ್ಕೂ ಅಜಗಜಾಂತರವಿದೆ ಎಂಬುದನ್ನು ಒಪ್ಪಿಕೊಳ್ಳದೇ ಹೋದಲ್ಲಿ ಸಾಕಷ್ಟು ನೋವು, ನಿರಾಶೆ ಅನುಭವಿಸಬೇಕಾಗಲಿದೆ. ನಿಮ್ಮ ಕೋಪ ಮತ್ತು ಹಠಮಾರಿತನದ ವರ್ತನೆಯು ಕೆಲಸಗಳಲ್ಲಿ ಅಡೆತಡೆಗಳನ್ನು ತರಬಹುದು. ಗುರುಹಿರಿಯರನ್ನು ಸ್ಮರಿಸಿಕೊಳ್ಳಿ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios