Daily Horoscope: ಹೋಳಿಯ ಈ ದಿನ ಯಾರಿಗೆಲ್ಲ ಹಬ್ಬದ ಸಂಭ್ರಮ?

18 ಮಾರ್ಚ್ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕಟಕಕ್ಕೆ ನಿರಾಶೆ, ಮಕರಕ್ಕೆ ಹೆಚ್ಚುವ ಲಾಭ

Daily horoscope of March 18th 2022 in Kannada SKR

ಮೇಷ (Aries): ಹಳೆ ಸ್ನೇಹಿತರ ಭೇಟಿಯಿಂದ ಮನೋಲ್ಲಾಸ. ಸಂಭ್ರಮದಿಂದ ಹೋಳಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುವಿರಿ. ಮನೆಯಲ್ಲಿ ಶುಭ ಕಾರ್ಯ ನಡೆಯುವುದು. ವಿಪರೀತ ಧನ ವ್ಯಯದಿಂದ ಕಂಗಾಲಾಗುವಿರಿ. ಆರೋಗ್ಯ ಚೆನ್ನಾಗಿರುವುದು. ಕೃಷ್ಣರಾಧೆಯನ್ನು ನೆನೆಸಿಕೊಳ್ಳಿ.

ವೃಷಭ (Taurus): ಬಹಳ ದಿನಗಳ ನಂತರ ಸ್ವಂತಕ್ಕಾಗಿ ಸಮಯ ಮೀಸಲಿಡುವುದರಿಂದ ಸಂಜೆಯ ಹೊತ್ತಿಗೆ ಸಂತೋಷದಲ್ಲಿರುವಿರಿ. ಪ್ರೀತಿಪಾತ್ರರೊಂದಿಗೆ ಮಾತನಾಡುವುದರಿಂದ ದುಗುಡ ಕಳೆಯುವುದು. ಹೊರಗೆ ಸುತ್ತಾಟದಿಂದ ಸಂತೋಷ ಹೆಚ್ಚುವುದು. ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. 

ಮಿಥುನ (Gemini): ಹಿರಿಯರ  ಸಹಾಯದಿಂದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುವು. ನೆಂಟರಿಷ್ಟರ ಮನೆಗೆ ಭೇಟಿ ನೀಡುವಿರಿ. ಬಹಳ ದಿನಗಳಿಂದ ಮುಂದೂಡಿಕೊಂಡು ಬಂದ ಗೃಹಕೃತ್ಯಗಳೆಲ್ಲ ಮುಗಿಸಿ ನಿರಾಳವಾಗುವಿರಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. 

ಕಟಕ (Cancer): ಬಹು ನಿರೀಕ್ಷೆಯಿಂದ ಕಾಯುತ್ತಿರುವ ಸಂಗತಿಯಲ್ಲಿ ನಿರಾಶೆ ಅನುಭವಿಸುವಿರಿ. ವಿನಾ ಕಾರಣ ಹಳೆ ನೆನಪುಗಳನ್ನು ಮೆಲುಕು ಹಾಕುತ್ತಾ ಕೊರಗುವಿರಿ. ಇದರಿಂದ ಮನಸ್ಸು ಕ್ಲೇಶಕ್ಕೊಳಗಾಗುವುದು. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಸಿಂಹ (Leo): ನಿರುದ್ಯೋಗಿಗಳಿಗೆ ಪರಿಚಯದವರಿಂದಲೇ ಅವಕಾಶಗಳು ಅರಸಿ ಬರುವುವು. ಮನೆ ಸದಸ್ಯರ ಸಮಸ್ಯೆಗಳನ್ನೆಲ್ಲ ನಿಮ್ಮ ಮೈ ಮೇಲೆ ಅತಿಯಾಗಿ ಎಳೆದುಕೊಳ್ಳಬೇಡಿ. ಎಲ್ಲವೂ ಇತಿ ಮಿತಿಯಲ್ಲಿದ್ದರಷ್ಟೇ ನೆಮ್ಮದಿ. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ. 

ಕನ್ಯಾ (Virgo): ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ನಿಮ್ಮ ಮನಸ್ಸಿನ ಕೊರಗನ್ನು ಹತ್ತಿರದವರೊಂದಿಗೆ ಹಂಚಿಕೊಳ್ಳಿ. ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮನೆ ದೇವರ ಪ್ರಾರ್ಥನೆ ಮಾಡಿ. 

ಸಂಗಾತಿಯ ತಪ್ಪು ಹುಡುಕೋದ್ರಲ್ಲಿ ನಿಸ್ಸೀಮರು ಈ 4 ರಾಶಿಯವರು!

ತುಲಾ (Libra): ಎಷ್ಟೇ ಹತ್ತಿರದವರಾದರೂ ಸಾಲ ನೀಡಬೇಡಿ. ಮುಂದೆ ಅದೇ ಕಾರಣಕ್ಕೆ ವೈಮನಸ್ಸುಗಳು ಸೃಷ್ಟಿಯಾಗುತ್ತವೆ.  ಮತ್ತೊಬ್ಬರ ಗುಟ್ಟುಗಳನ್ನು ಬಿಟ್ಟು ಕೊಡಬೇಡಿ. ಮನೆ ಗೆಲಸದಿಂದ ದೇಹಾಯಾಸ ಹೆಚ್ಚುವುದು. ಆರೋಗ್ಯ ಸಮಸ್ಯೆಗಳು ಬಾಧಿಸುವುವು. ವೈದ್ಯರ ಭೇಟಿ ಮಾಡಿ. ನರಸಿಂಹ ಪ್ರಾರ್ಥನೆ ಮಾಡಿ. 

ವೃಶ್ಚಿಕ (Scorpio): ವಾಹನದ ವಿಷಯದಲ್ಲಿ ಜಗಳ, ವಾಗ್ವಾದಗಳಾಗಬಹುದು. ನೆರೆ ಹೊರೆಯವರ ಜೊತೆ ಜಗಳವಾಡುವ ಸಂಭವವಿದೆ. ಎಚ್ಚರಿಕೆಯಿಂದಿರಿ. ಆದಷ್ಟು ನಾಲಿಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವಾಯುವಿಹಾರ ಹೋಗಿ ಬನ್ನಿ. ಲಲಿತಾ ಸಹಸ್ರನಾಮ ಪಠಣ ಮಾಡಿ.

ಧನುಸ್ಸು (Sagittarius): ವಾಹನಗಳಲ್ಲಿ ಹೋಗುವಾಗ ಹೆಚ್ಚಿನ ಜಾಗರೂಕತೆ ಅಗತ್ಯ. ಸ್ತ್ರೀಯರಿಗೆ ಶುಭ ದಿನ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಆರೋಗ್ಯ ಸ್ಥಿರವಾಗಿರುವುದು. ಯಾರಿಗೂ ಸಾಲ ಕೊಡಬೇಡಿ. ಲಲಿತ ಸಹಸ್ರನಾಮ ಪಠಣ ಮಾಡಿ. 

ಅಯ್ಯಪ್ಪಾ, ಡೇಂಜರ್! ಹೆಚ್ಚಿನ Serial killers ಈ ರಾಶಿಯವರು!

ಮಕರ (Capricorn): ದಿನಸಿ, ವಸ್ತ್ರ, ಒಡವೆ, ವಾಹನ, ಹೋಟೆಲ್ ವ್ಯಾಪಾರದಲ್ಲಿ ಲಾಭ ಹೆಚ್ಚಲಿದೆ. ಮಕ್ಕಳ ಬದುಕಿನ ಸಮಸ್ಯೆಗಳು ತೀರುವುದರಿಂದ ಮನಸ್ಸು ಹಗುರಾಗುವುದು. ಸಂಗಾತಿಯ ಸಹಕಾರದಿಂದ ಕೆಲಸಗಳು ಸುಗಮ. ನವಗ್ರಹ ಸ್ಮರಣೆ ಮಾಡಿ. 

ಕುಂಭ (Aquarius): ವಾಹನ ಖರೀದಿ ಮಾಡುನ ಸಂಭವಗಳಿವೆ. ಹರಟೆ, ಸವಿ ಭೋಜನದಿಂದ ಉಲ್ಲಾಸ ಹೆಚ್ಚಲಿದೆ. ಬಹಳ ದಿನದಿಂದ ಬಿಡಬೇಕೆಂದಿರುವ ಕೆಟ್ಟ ಚಟವೊಂದಕ್ಕೆ ಇಂದು ತಿಲಾಂಜಲಿ ಇಡುವಿರಿ. ಆರೋಗ್ಯದಲ್ಲಿ ಸಕಾರಾತ್ಮಕ ಬದಲಾವಣೆಯಾಗುವುದು. ಲಲಿತಾ ಪರಮೇಶ್ವರಿಯ ಸ್ಮರಣೆ ಮಾಡಿ. 

ಮೀನ (Pisces): ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಮಕ್ಕಳಿಂದ ಚೈತನ್ಯ ಹೆಚ್ಚಲಿದೆ. ಕುಟುಂಬ ಸದಸ್ಯರ ನಡುವೆ ಇರುವ ವೈಮನಸ್ಸು ಶಮನವಾಗುವುದು. ನೆಂಟರಿಷ್ಟರ ಜೊತೆ ಮಾತುಕತೆ. ಉದ್ಯೋಗದಲ್ಲಿ ಪ್ರಗತಿ. ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios