ದಿನ ಭವಿಷ್ಯ: ಮೇಷಕ್ಕೆ ಕ್ಷೀಣಿಸುವ ಸ್ನೇಹ, ಮಕರಕ್ಕೆ ಶ್ರಮಕ್ಕೆ ತಕ್ಕ ಫಲಿತಾಂಶ
14 ಜೂನ್ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ನಿಮ್ಮ ರಾಶಿಯ ಫಲ ಈ ದಿನ ಏನಿದೆ?
ಮೇಷ(Aries): ನಿಮ್ಮ ಕೌಶಲ್ಯದ ಸಹಾಯದಿಂದ ಅನೇಕ ಕಾರ್ಯಗಳನ್ನು ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ. ಯಾವುದೇ ನಿರ್ಧಾರವನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳಿ. ವ್ಯಾಪಾರ ವೇಗವಾಗಿ ಬೆಳೆಯಲು ಆರಂಭಿಸುವುದು. ವದಂತಿಗಳಿಗೆ ಸ್ವಲ್ಪವೂ ಗಮನ ಕೊಡಬೇಡಿ. ತಪ್ಪುಗ್ರಹಿಕೆಯು ನಿಮ್ಮ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಆಪ್ತ ಸ್ನೇಹಿತನೊಂದಿಗಿನ ಸಂಬಂಧ ಕ್ಷೀಣಿಸುತ್ತಿದೆ. ಕೋಪ ನಿಯಂತ್ರಿಸಿ. ಎದೆಯಲ್ಲಿ ಸೋಂಕು ಮತ್ತು ಉರಿಯೂತದಂಥ ಸಮಸ್ಯೆಗಳಿರಬಹುದು.
ವೃಷಭ(Taurus): ಕುಟುಂಬ ಮತ್ತು ಹಣಕಾಸಿನ ಕುರಿತ ಪ್ರಮುಖ ನಿರ್ಧಾರಗಳು ಸಕಾರಾತ್ಮಕ ಫಲಿತಾಂಶಗಳಿಗೆ ಕಾರಣವಾಗಬಹುದು. ಆಸಕ್ತಿಯಿರುವ ಕಾರ್ಯಗಳಿಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳಿ. ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಕಳೆಯಬೇಡಿ, ಇದರಿಂದ ಯಶಸ್ಸು ನಿಮ್ಮ ಕೈಯಿಂದ ಜಾರುತ್ತದೆ. ಮಾತು ಮತ್ತು ಹಠಮಾರಿ ಸ್ವಭಾವ ನಿಯಂತ್ರಿಸಿ. ವ್ಯಾಪಾರ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಸಮಯ ಅನುಕೂಲಕರವಾಗಿಲ್ಲ. ವ್ಯರ್ಥ ಪ್ರೇಮ ಮತ್ತು ಮನರಂಜನೆಗಳಲ್ಲಿ ಸಮಯ ವ್ಯರ್ಥ ಮಾಡಬೇಡಿ. ಕೀಲು ನೋವು ಮತ್ತು ಅಧಿಕ ರಕ್ತದೊತ್ತಡ ಸಮಸ್ಯೆಯಾಗಬಹುದು.
ಮಿಥುನ(Gemini): ಕೆಲವು ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಇಂದು ನೀವು ಪ್ರಮುಖ ವ್ಯಕ್ತಿಯನ್ನು ಭೇಟಿಯಾಗುತ್ತೀರಿ, ಇದರಿಂದ ನಿಮ್ಮೊಳಗೆ ಹೊಸ ಚೈತನ್ಯ ಅನುಭವಿಸುವಿರಿ. ನಿಮ್ಮ ವಸ್ತುಗಳು ಕಳೆದು ಹೋಗಬಹುದು ಅಥವಾ ಕಳ್ಳತನವಾಗಬಹುದು. ನಿರ್ಧಾರ ತೆಗೆದುಕೊಳ್ಳಲು ಮಕ್ಕಳಿಗೆ ನಿಮ್ಮ ಸಹಾಯದ ಅಗತ್ಯವಿದೆ. ವ್ಯಾಪಾರ ಚಟುವಟಿಕೆಗಳಲ್ಲಿ ನಿರ್ಲಕ್ಷ್ಯ ಬೇಡ. ಸಂಗಾತಿಯ ಭಾವನಾತ್ಮಕ ಬೆಂಬಲವು ಶಕ್ತಿ ನೀಡುತ್ತದೆ. ಕೆಮ್ಮಿನಂತಹ ಸೌಮ್ಯ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ.
ಉದ್ಯೋಗ ಸಿಗ್ತಿಲ್ವಾ? ವೃತ್ತಿಯಲ್ಲಿ ನೆಮ್ಮದಿ ಇಲ್ವಾ? ಈ ಜ್ಯೋತಿಷ್ಯ ಪರಿಹಾರ ಟ್ರೈ ಮಾಡಿ
ಕಟಕ(Cancer): ಗ್ರಹಗಳು ನಿಮಗೆ ಶುಭ ಅವಕಾಶಗಳನ್ನು ಸೃಷ್ಟಿಸುತ್ತಿವೆ. ವೆಚ್ಚ ಹೆಚ್ಚಾಗಬಹುದು. ನಿಮ್ಮ ಕುಟುಂಬ ಮತ್ತು ವ್ಯವಹಾರದಲ್ಲಿ ಯಾವುದೇ ಹೊರಗಿನವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಉದ್ಯೋಗಿಗಳೊಂದಿಗಿನ ಸಂಬಂಧ ಹಾಳು ಮಾಡಿಕೊಳ್ಳಬೇಡಿ. ಅವರ ಸಹಕಾರ ನಿಮಗೆ ಅತ್ಯಗತ್ಯ. ವ್ಯಾಪಾರ ಸ್ಥಳದಲ್ಲಿ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲಿತಾಂಶ ಸಿಗದ ಕಾರಣ ಮನಸ್ಸಿನಲ್ಲಿ ಸ್ವಲ್ಪ ಚಿಂತೆ ಇರುತ್ತದೆ. ಪ್ರೇಮ ವ್ಯವಹಾರಗಳಿಂದ ದೂರವಿರುವುದು ಉತ್ತಮ.
ಸಿಂಹ(Leo): ಹಣಕಾಸಿನ ವಿಷಯಗಳಲ್ಲಿ ಯಶಸ್ಸು. ಫೋನ್ ಮತ್ತು ಸ್ನೇಹಿತರ ಜೊತೆ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಕೆಲವೊಮ್ಮೆ ನಿಮ್ಮ ಇಚ್ಛೆ ಮತ್ತು ಅತಿಯಾದ ಆತ್ಮವಿಶ್ವಾಸ ನಿಮಗೆ ದ್ರೋಹ ಮಾಡಬಹುದು. ಅಳಿಯಂದಿರೊಂದಿಗೆ ಸೌಹಾರ್ದಯುತ ಸಂಬಂಧ ಕಾಪಾಡಿಕೊಳ್ಳಿ. ಪ್ರಸ್ತುತ ವ್ಯಾಪಾರ ಚಟುವಟಿಕೆಗಳಲ್ಲಿ ಸುಧಾರಣೆಯ ಸಾಧ್ಯತೆಯಿದೆ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಕನ್ಯಾ(Virgo): ಯಾವುದೇ ಸ್ಪರ್ಧೆಗೆ ಸಂಬಂಧಿಸಿದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸರಿಯಾದ ಫಲಿತಾಂಶ ಪಡೆಯುತ್ತಾರೆ. ಇಂದು ಒಂದು ಕನಸು ನನಸಾಗಲಿದೆ. ಕಷ್ಟಪಟ್ಟು ಕೆಲಸ ಮಾಡಿ. ಈ ಸಮಯದಲ್ಲಿ ಗ್ರಹಗಳ ಸ್ಥಿತಿಯು ನಿಮಗೆ ಅನೇಕ ಮಂಗಳಕರ ಅವಕಾಶಗಳನ್ನು ತರುತ್ತಿದೆ. ಯಾವುದೇ ಕಾರಣಕ್ಕೂ ಇಂದು ಕೆಲಸ ತಪ್ಪಿಸಲು ಪ್ರಯತ್ನಿಸಬೇಡಿ. ಇದರಿಂದ ಹಲವು ಕೆಲಸಗಳಲ್ಲಿ ವಿಳಂಬವಾಗಬಹುದು. ಮಾತಿನಲ್ಲಿ ಕೆಟ್ಟ ಪದಗಳನ್ನು ಬಳಸುವುದು ಹತಾಶೆಗೆ ಕಾರಣವಾಗಬಹುದು.
ತುಲಾ(Libra): ಹಿರಿಯರ ಆಶೀರ್ವಾದ ಮತ್ತು ಸಹಕಾರ ನಿಮ್ಮ ಮೇಲಿರುತ್ತದೆ. ಅವರನ್ನು ಗೌರವಿಸಿ. ವೈಯಕ್ತಿಕ ಕಾರ್ಯಗಳ ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ನಿಮ್ಮ ಕೋಪ ಮತ್ತು ಆತುರವು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ತೊಂದರೆ ಉಂಟುಮಾಡಬಹುದು. ನಿಮ್ಮ ನ್ಯೂನತೆಗಳನ್ನು ನಿಯಂತ್ರಿಸಿ. ವೆಚ್ಚಗಳು ಅಧಿಕವಾಗಬಹುದು. ಆದ್ದರಿಂದ ನಿಮ್ಮ ಬಜೆಟ್ ಅನ್ನು ನೆನಪಿನಲ್ಲಿಡಿ.
ಮಗುಗೆ ಓದಿನಲ್ಲಿ ಆಸಕ್ತಿ ಇಲ್ವಾ? ಸ್ಟಡಿ ರೂಂ ವಾಸ್ತು ಬದಲಿಸಿ..
ವೃಶ್ಚಿಕ(Scorpio): ನಿಮ್ಮ ಗಮನ ಸಂಪೂರ್ಣವಾಗಿ ಕೆಲಸದ ಮೇಲೆ ಗಮನವಿರಲಿ. ಕಳ್ಳತನ ಅಥವಾ ಯಾವುದೇ ರೀತಿಯ ಹಾನಿಯಾಗುವ ಅಪಾಯವಿರುವುದರಿಂದ ಯಾವುದೇ ಕೆಲಸವನ್ನು ಮಾಡುವಾಗ ನಿರ್ಲಕ್ಷ್ಯ ಮಾಡಬೇಡಿ. ಇತರ ಜನರಿಗಿಂತ ನಿಮ್ಮ ನಿರ್ಧಾರಕ್ಕೆ ಆದ್ಯತೆ ನೀಡಿ. ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಇರಬಹುದು. ಒತ್ತಡವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಧನುಸ್ಸು(Sagittarius): ನಿಮ್ಮ ಕೆಲಸವನ್ನು ಯೋಜಿತ ರೀತಿಯಲ್ಲಿ ಮಾಡಿ. ಆಸ್ತಿ ಸಂಬಂಧಿತ ಕೆಲಸಗಳಲ್ಲಿ ಲಾಭದಾಯಕ ವ್ಯವಹಾರಗಳನ್ನು ಮಾಡಬಹುದು. ಸೋಮಾರಿತನವು ನಿಮ್ಮನ್ನು ಆಳಲು ಬಿಡಬೇಡಿ. ಇದರಿಂದ ಸ್ವಲ್ಪ ಮಟ್ಟಿನ ಯಶಸ್ಸು ಕೈ ತಪ್ಪಬಹುದು. ಕೆಲವು ಹಳೆಯ ನಕಾರಾತ್ಮಕ ವಿಷಯಗಳು ನಿಕಟ ಸಂಬಂಧಿಗಳಲ್ಲಿ ಕಹಿಯನ್ನು ಉಂಟುಮಾಡಬಹುದು. ಪ್ರೀತಿಯ ಸಂದರ್ಭಗಳಲ್ಲಿ ಭಾವನಾತ್ಮಕ ಅಂತರ ಹೆಚ್ಚಾಗಬಹುದು.
ಮಕರ(Capricorn): ಕಳೆದ ಕೆಲವು ದಿನಗಳಿಂದ ನೀವು ಮಾಡಲು ಪ್ರಯತ್ನಿಸುತ್ತಿರುವ ಕಾರ್ಯಗಳನ್ನು ಪೂರ್ಣಗೊಳಿಸುವ ಸಮಯ. ನಿಮ್ಮ ಶ್ರಮಕ್ಕೆ ತಕ್ಕ ಫಲಿತಾಂಶ ಸಿಗಲಿದೆ. ಯಾವುದೇ ಪಾವತಿ ಸಂಬಂಧಿತ ಕಾರ್ಯಗಳು ಮತ್ತು ಸಂಪರ್ಕಗಳನ್ನು ಬಲಪಡಿಸುವಲ್ಲಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಹೊರಗಿನ ಮೂಲದಿಂದ ದೊಡ್ಡ ಆರ್ಡರ್ ಪಡೆಯುವ ಸಾಧ್ಯತೆ ಇದೆ. ಪತಿ-ಪತ್ನಿ ಇಬ್ಬರೂ ತಮ್ಮ ಬಿಡುವಿಲ್ಲದ ಕಾರಣ ಒಬ್ಬರಿಗೊಬ್ಬರು ಸಮಯವನ್ನು ನೀಡಲು ಸಾಧ್ಯವಿಲ್ಲ.
ಕುಂಭ(Aquarius): ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕಾರ್ಯಗಳಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ನಿಮ್ಮ ಶಕ್ತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ. ಮಧ್ಯಾಹ್ನದ ವೇಳೆಗೆ ಗೆಲುವಿನ ವಾತಾವರಣ ಹೆಚ್ಚುತ್ತದೆ. ಈ ಸಮಯದಲ್ಲಿ ಮಾಡಿದ ಕಠಿಣ ಪರಿಶ್ರಮವು ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಚರ್ಚೆಗೆ ಹೆಚ್ಚು ಸಮಯ ಕಳೆಯಬೇಡಿ. ನಿಮ್ಮ ಯೋಜನೆಗಳನ್ನು ಈಗಿನಿಂದಲೇ ಪ್ರಾರಂಭಿಸಿ. ಆದಾಯ ಮತ್ತು ವೆಚ್ಚ ಅಧಿಕವಾಗಲಿದೆ. ಪ್ರೇಮ ಸಂಬಂಧಗಳು ಹತ್ತಿರವಾಗಬಹುದು. ರಕ್ತನಾಳದಲ್ಲಿ ನೋವಿನ ಸಮಸ್ಯೆ ಇರಬಹುದು.
ಪ್ರೀತಿಯನ್ನು ಆಕರ್ಷಿಸುವುದು ಹೇಗೆ? ಫೆಂಗ್ ಶುಯ್‌ನಲ್ಲಿ ಟ್ರಿಕ್ಸ್ ಇವೆ!
ಮೀನ(Pisces): ದಿನದ ಆರಂಭದಲ್ಲಿ ನಿಮ್ಮ ಪ್ರಮುಖ ಕೆಲಸಗಳಿಗೆ ಯೋಜನೆ ರೂಪಿಸಿ. ಮಧ್ಯಾಹ್ನದ ಸಮಯದಲ್ಲಿ ಪರಿಸ್ಥಿತಿಗಳು ತುಂಬಾ ಅನುಕೂಲಕರವಾಗಿವೆ. ಭಾವನೆಗಳು ಮತ್ತು ಸೋಮಾರಿತನ ನಿಮ್ಮನ್ನು ಆಳಲು ಬಿಡಬೇಡಿ. ಇದು ಕೆಲವು ಯಶಸ್ಸು ಕೈ ತಪ್ಪಲು ಕಾರಣವಾಗಬಹುದು. ಮನೆಯ ಹಿರಿಯರಿಗೂ ನಿಮ್ಮ ಮೇಲ್ವಿಚಾರಣೆಯ ಅಗತ್ಯವಿದೆ. ಕೆಲಸದ ಪ್ರದೇಶದಲ್ಲಿ ಸರಕುಗಳಿಗೆ ಸಂಬಂಧಿಸಿದಂತೆ ನಷ್ಟವಾಗಬಹುದು.