Asianet Suvarna News Asianet Suvarna News

Daily Horoscope: ಮಕರಕ್ಕೆ ಅದೃಷ್ಟದ ಸಹಕಾರ, ಕನ್ಯಾ ರಾಶಿಗೆ ಹೆಚ್ಚುವ ಅಡ್ಡಿ ಆತಂಕ

28 ಜನವರಿ 2022, ಶುಕ್ರವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಮೇಷ ರಾಶಿಗ ಆಲಸ್ಯದಿಂದ ಕಾರ್ಯ ಹಾನಿ

Daily horoscope of January 28th 2022 in Kannada SKR
Author
Bangalore, First Published Jan 28, 2022, 5:05 AM IST

ಮೇಷ(Aries): ಆಲಸ್ಯದಿಂದ ಕಾರ್ಯ ಹಾನಿಯಾಗುವುದು. ಆಸ್ತಿ ವ್ಯವಹಾರಗಳಲ್ಲಿ ತಜ್ಞರ ಸಹಾಯ ಪಡೆಯಿರಿ. ಸಂಸಾರ ಸುಖವಿದ್ದು, ಸಂತಾನ ನಿರೀಕ್ಷೆಯಲ್ಲಿರುವ ದಂಪತಿಗೆ ಸಿಹಿ ಸುದ್ದಿ ಸಿಗಲಿದೆ. ಹೊಸ ಸ್ನೇಹಿತರು ಆಗಬಹುದು. ಮನರಂಜನೆಗೆ ಸಮಯ ಕೊಡುವಿರಿ. ಮಹಾಲಕ್ಷ್ಮೀ ಆರಾಧನೆ ಮಾಡಿ. 

ವೃಷಭ(Taurus): ಗೃಹ ಕಲಹ ಇರಬಹುದು. ಆಪ್ತರೊಡನೆ ವಾದ ವಿವಾದ ಹೆಚ್ಚಿ ಮನಸ್ಸಿನ ನೆಮ್ಮದಿ ಕೆಡಲಿದೆ. ಉದ್ಯೋಗದಲ್ಲೂ ತಪ್ಪುಗಳಾಗಬಹುದು. ಯಾವ ವಿಚಾರಕ್ಕೂ ದುಡುಕಿನಲ್ಲಿ ನಿರ್ಧಾರ ತೆಗೆದುಕೊಳ್ಳಬೇಡಿ. ವಾತ ಸಮಸ್ಯೆಗಳು ಹೆಚ್ಚಲಿವೆ. ಮನೆ ಹಿರಿಯರ ಆಶೀರ್ವಾದ ಪಡೆಯಿರಿ. 

ಮಿಥುನ(Gemini): ಪಾಲುದಾರರೊಡನೆ ವ್ಯವಹಾರ ಸಂಬಂಧ ಚರ್ಚಿಸಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವಿರಿ. ಸಣ್ಣ ಪುಟ್ಟ ವ್ಯವಹಾರದಲ್ಲಿರುವವರಿಗೆ ಆರ್ಥಿಕ ಲಾಭ ಇರಲಿದೆ. ಹೊಸ ವ್ಯಕ್ತಿಗಳ ಪರಿಚಯ ಆರ್ಥಿಕವಾಗಿಯೂ ಲಾಭ ತರಲಿದೆ. ಲಕ್ಷ್ಮೀ ವೆಂಕಟೇಶ್ವರನಲ್ಲಿ ಪ್ರಾರ್ಥಿಸಿ. 

ಕಟಕ(Cancer): ಬ್ಯಾಂಕ್, ಕೋರ್ಟ್ ವ್ಯವಹಾರಗಳು ಮುಗಿಯಲಿವೆ. ವ್ಯಾಪಾರದಲ್ಲಿ ಮಿಶ್ರ ಫಲವಿರಲಿದೆ. ಸಂಬಂಧಿಕರ ಕಡೆಯಿಂದ ಸಿಹಿ ಸುದ್ದಿ ಕೇಳಲಿರುವಿರಿ. ಪ್ರಯಾಣಗಳು ಫಲ ಕೊಡುವುವು. ಅಗತ್ಯಕ್ಕಿಂತ ಹೆಚ್ಚಾಗಿ ಯಾರನ್ನೂ ನಂಬಲು ಹೋಗಬೇಡಿ. ಅಮ್ಮನವರ ದೇವಾಲಯಕ್ಕೆ ಭೇಟಿ ನೀಡಿ.

ಸಿಂಹ(Leo): ನಿಮ್ಮ ದೃಢ ಸಂಕಲ್ಪ, ಪರಿಶ್ರಮ, ತಾಳ್ಮೆ ಖಂಡಿತಾ ವ್ಯರ್ಥವಾಗದು. ನಿಮ್ಮ ಪಾಡಿಗೆ ಕೆಲಸ ಮಾಡುತ್ತಾ ಹೋಗಿ. ಫಲ ಸಿಕ್ಕೇ ಸಿಗುತ್ತದೆ. ಸಂಗಾತಿಯ ಬಗೆಗಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ. ಎಲ್ಲವನ್ನೂ ಅವರೇ ಅರ್ಥ ಮಾಡಿಕೊಳ್ಳಲಿ ಎಂದು ಬಯಸುವುದು ತಪ್ಪಾಗುತ್ತದೆ. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 

Key to Success: ಚಾಣಕ್ಯನ ಪ್ರಕಾರ ತಾಯಿ ಮಹಾಲಕ್ಷ್ಮೀಯನ್ನು ಒಲಿಸಲು ನಾವು ಮಾಡಬೇಕಾದ್ದಿಷ್ಟು..

ಕನ್ಯಾ(Virgo): ತೀರಾ ನಂಬಿದವರೇ ದ್ರೋಹ ಮಾಡಬಹುದು. ಹಣದ ವಿಚಾರದ ವಂಚನೆಗಳು ಬೆಳಕಿಗೆ ಬರುವುವು. ಮಕ್ಕಳ ಆರೋಗ್ಯದ ವಿಷಯವಾಗಿ ಚಿಂತಿತವಾಗುವಿರಿ. ಗುರಿ ಸಾಧನೆಗೆ ಹಲವು ಅಡ್ಡಿ ಆತಂಕಗಳು ಎದುರಾಗಬಹುದು. ಛಲ ಬಿಡಬೇಡಿ. ದುರ್ಗಾ ಅಷ್ಟೋತ್ತರ ಪಠಿಸಿ. 

ತುಲಾ(Libra): ವಾಹನದಲ್ಲಿ ಓಡಾಡುವಾಗ ಎಚ್ಚರಿಕೆ ಅಗತ್ಯ. ಅಪಘಾತ ಸಂಭವಗಳಿವೆ. ಅತಿಯಾದ ಸ್ವಾಭಿಮಾನ ಪಕ್ಕಕ್ಕಿಟ್ಟು ಹತ್ತಿರದವರೊಂದಿಗಿನ ಮುನಿಸನ್ನು ಮರೆತು ಮಾತನಾಡಿದರೆ ಅದರಿಂದ ಸಂತಸ ಹೆ್ಚ್ಚಲಿದೆ. ಕೌಟುಂಬಿಕ ಜವಾಬ್ದಾರಿಗಳು ಹೆಚ್ಚಲಿವೆ. ಶಾರದಾಂಬೆ ಸ್ಮರಣೆ ಮಾಡಿ. 

ವೃಶ್ಚಿಕ(Scorpio): ಕೆಲಸದಲ್ಲಿ ಹಿರಿಯ ಉದ್ಯೋಗಿಗಳಿಂದ ನಿಮ್ಮ ಮೇಲೆ ತಕರಾರು ಕೇಳಿ ಬರಲಿದೆ. ಇದರಿಂದ ಮನಸ್ಸು ಕೆಡಿಸಿಕೊಳ್ಳುವ ಬದಲು, ಕೆಲಸ ಸರಿ ಮಾಡುವತ್ತ ಗಮನ ಹರಿಸಿ. ಪಿತ್ತ ಕೆರಳಿ ಆಯಾಸವಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿಯಾಗಲಿದ್ದೀರಿ. ಮಹಾಲಕ್ಷ್ಮೀಯನ್ನು ಪೂಜಿಸಿ. 

Om benefits: ಪ್ರತಿದಿನ ಈ ರೀತಿ ಓಂಕಾರ ಜಪಿಸಿದರೆ ಸಿಗೋ ಲಾಭ ಒಂದೆರಡಲ್ಲ..

ಧನುಸ್ಸು(Sagittarius): ಆರೋಗ್ಯ ವಿಚಾರದಲ್ಲಿ ಉದಾಸೀನತೆ ಬೇಡ. ಯೋಗ, ಪ್ರಾಣಾಯಾಮ ಮತ್ತಿತರೆ ನಿರಂತರ ಆರೋಗ್ಯ ಹೆಚ್ಚಿಸುವ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಉದ್ಯಮದ ವಿಷಯವಾಗಿ ಅನುಭವಸ್ಥರ ಸಲಹೆಗಳು ನೆರವಾಗಲಿವೆ. ಹಣದ ಪ್ರಾಮುಖ್ಯತೆ ಅರಿವಿಗೆ ಬರಲಿದೆ. ತಾಯಿಯ ಆಶೀರ್ವಾದ ಪಡೆಯಿರಿ. 

ಮಕರ(Capricorn): ಈ ದಿನ ಬಹಳ ಚೆನ್ನಾಗಿರಲಿದೆ. ಹಳೆಯ ನೆನಪುಗಳಲ್ಲಿ ತೇಲಿ ಹೋಗುವಂಥ ಸಂದರ್ಭ ಎದುರಾಗಬಹುದು. ಆರ್ಥಿಕ ಪ್ರಗತಿ ಇರಲಿದೆ. ಮನೆಯ ಇತರ ಸದಸ್ಯರ ಮುಖಾಂತರ ಧನಾಗಮ ಹೆಚ್ಚಲಿದೆ. ಆಸ್ತಿ ಖರೀದಿ ಸಾಧ್ಯತೆ ಇದೆ. ಮಕ್ಕಳ ಪ್ರಗತಿ ಖುಷಿ ಹೆಚ್ಚಿಸಲಿದೆ. ಲಲಿತಾ ಸಹಸ್ರನಾಮ ಪಠಣ ಮಾಡಿ. 

ಕುಂಭ(Aquarius): ಉದರ, ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಂಧುಗಳು, ಆಪ್ತರಿಂದ ಹಣ ಮತ್ತಿತರೆ ಅಗತ್ಯ ಸಹಾಯಗಳು ದೊರಕುತ್ತವೆ. ಸಂಗಾತಿಯ ಬಳಿ ನಿಮ್ಮ ಮನಸ್ಸಿನ ತುಮುಲಗಳನ್ನು ಹಂಚಿಕೊಳ್ಳಿ. ಸರಸ್ವತಿ ಸ್ತ್ರೋತ್ರ ಹೇಳಿಕೊಳ್ಳಿ. 

ಮೀನ(Pisces): ಈ ದಿನವನ್ನು ಉದಾಸೀನವಾಗಿ ಕಳೆಯಲಿದ್ದೀರಿ. ಕೆಲಸ ಕಾರ್ಯಗಳಲ್ಲಿ ಏಕಾಗ್ರತೆ ಸಿದ್ಧಿಸದೆ ಒದ್ದಾಡುವಿರಿ. ವಿದ್ಯಾರ್ಥಿಗಳೂ ಚಂಚಲ ಚಿತ್ತರಾಗಿರುವರು. ಸ್ನೇಹತರ ಮಾತುಗಳು ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಬಹುದು. ಅಮ್ಮನವರಿಗೆ ಕುಂಕುಮಾರ್ಚನೆ ಮಾಡಿಸಿ. 
 

Follow Us:
Download App:
  • android
  • ios