Asianet Suvarna News Asianet Suvarna News

Daily Horoscope: ಸಂಗಾತಿಯ ಜೊತೆ ತುಲಾ ಕಲಹ, ವೃಷಭಕ್ಕೆ ಹೆಚ್ಚುವ ಕೆಲಸ

25 ಜನವರಿ 2022, ಮಂಗಳವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭಕ್ಕೆ ಮನೆಯಲ್ಲಿ ಶುಭ ಕಾರ್ಯ, ನಿಮ್ಮ ರಾಶಿಯ ಫಲವೇನಿದೆ ನೋಡಿ..

Daily horoscope of January 25th 2022 in Kannada SKR
Author
Bangalore, First Published Jan 25, 2022, 5:13 AM IST

ಮೇಷ(Aries): ಕೌಟುಂಬಿಕ ಜೀವನದಲ್ಲಿ ಉದ್ವಿಗ್ನ ವಾತಾವರಣ ಮುಂದುವರಿಯಲಿದೆ.  ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಉದ್ಯೋಗದಲ್ಲಿ ಏರುಪೇರಿಲ್ಲ. ಗಣಪತಿಯ ಸ್ಮರಣೆ ಮಾಡಿ. 

ವೃಷಭ(Taurus): ಕಚೇರಿಯಲ್ಲಿ ಕೆಲಸ ವಿಪರೀತವಾಗಿ ಆಯಾಸವಾಗುವುದು. ಕಚೇರಿಯ ಕೆಲಸಗಳನ್ನು ಮನೆಗೆ ತಂದು ರಂಪ ಮಾಡಿಕೊಳ್ಳಬೇಡಿ. ಮನೆಯಲ್ಲಿ ಮಾನಸಿಕವಾಗಿಯೂ ಮನೆಯವರ ಜೊತೆಯೇ ಇರಲು ಪ್ರಯತ್ನಿಸಿ. ಕೆಂಪು ಬಟ್ಟೆ ದಾನ ಮಾಡಿ.

ಮಿಥುನ(Gemini): ದೈನಂದಿನ ಕೆಲಸದಿಂದ ಕೊಂಚ ಬಿಡುವು. ಸಂಬಂಧಿಕರ ನೆರವಿನಿಂದ ಬಹುಕಾಲದ ಆತಂಕ ನಿವಾರಣೆಯಾಗುವುದು. ಹಲವು ಕೆಲಸಗಳು ಬಾಕಿ ಉಳಿದು ಕಿರಿಕಿರಿ ಹೆಚ್ಚಾಗಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಒಳ್ಳೆ ನಿರ್ಧಾರ ತೆಗೆದುಕೊಳ್ಳುವರು. ಕೆಂಪು ಧಾನ್ಯಗಳನ್ನು ದಾನ ಮಾಡಿ. 

ಕಟಕ(Cancer): ನಿರಾಳದ ದಿನ. ಮನೆಯಲ್ಲಿ ಪತ್ನಿ ಮಕ್ಕಳ ಸಹಕಾರದಿಂದ ಬಹಳಷ್ಟು ನೆಮ್ಮದಿ ಸಿಗುವುದು. ಇನ್ನೊಬ್ಬರನ್ನು ಮೆಚ್ಚಿಸುವ ಸಲುವಾಗಿ ನೀವು ಖರ್ಚು ಮಾಡಬೇಕಿಲ್ಲ. ಅಗತ್ಯವೋ ಅಲ್ಲವೋ ನೋಡಿಯೇ ಖರ್ಚು ಮಾಡಿ. ಉಳಿತಾಯದ ಮಹತ್ವ ಸಧ್ಯದಲ್ಲೇ ಗೊತ್ತಾಗಲಿದೆ. ಗಣಪತಿ ಶತನಾಮಾವಳಿ ಹೇಳಿ. 

ಸಿಂಹ(Leo): ಬಹುಕಾಲದಿಂದ ಮುಂದೂಡಿಕೊಂಡು ಬಂದ ಬ್ಯಾಂಕ್ ಕೆಲಸಗಳು ಸರಾಗ. ಧನ ಸಮೃದ್ಧಿಯಿಂದ ಸಂತೋಷ. ವಾಗ್ಬಲ ಇರಲಿದೆ, ಮಾತಿನಿಂದ ಸಾಧನೆ. ವಕೀಲ ವೃತ್ತಿ ಸೇರಿದಂತೆ ಮಾತೇ ಆಯುಧವಾಗಿರುವ ವೃತ್ತಿಯಲ್ಲಿರುವವರಿಗೆ ಗೆಲುವು. ಸಿಹಿ ಸುದ್ದಿ ಕಿವಿಗೆ ಬೀಳಲಿದೆ. ಆಂಜನೇಯನ ದೇವಾಲಯಕ್ಕೆ ಭೇಟಿ ನೀಡಿ.

ಕನ್ಯಾ(Virgo): ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ನೀರಿನ ಸಮೀಪದಲ್ಲಿ ಎಚ್ಚರವಾಗಿರಿ. ರೈತರು, ವ್ಯಾಪಾರಿಗಳು,  ಮನಸ್ಸಿನ ಕೊರಗು ಕೊಂಚ ಕಡಿಮೆಯಾಗಲಿದೆ. ಮಕ್ಕಳ ವಿಷಯದಲ್ಲಿ ಹೆಚ್ಚಿನ ಎಚ್ಚರ ಅಗತ್ಯ. ಆರೋಗ್ಯದ ಬಗ್ಗೆ ಜಾಗೃತರಾಗಿರಿ. ಹನುಮಾನ್ ಚಾಳೀಸ್ ಹೇಳಿಕೊಳ್ಳಿ. 

ತುಲಾ(Libra): ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಮಾತಿಗೆ ಮಾತು ಬೆಳೆಯಬಹುದು. ಸಂಗಾತಿಯ ಜೊತೆ ರಾಜಿಯಾಗಲು ನೀವೇ ಮುಂದೆ ಹೆಜ್ಜೆ ಇಡಬೇಕು. ಅವರ ಸಮಸ್ಯೆಗಳನ್ನು ಆಲಿಸಿ, ಮಧ್ಯೆ ವಾದಿಸುವುದು ಬಿಟ್ಟು ಪರಿಹಾರದತ್ತ ದೃಷ್ಟಿ ಹಾಯಿಸಿ. ಲಕ್ಷ್ಮೀ ಅಷ್ಟೋತ್ತರ ಪಠಿಸಿ. 

ವೃಶ್ಚಿಕ(Scorpio): ನಿಮ್ಮ ಕಠಿಣ ಪರಿಶ್ರಮಕ್ಕೆ ಉತ್ತಮ ಫಲಿತಾಂಶಗಳನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ದೂರದ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂತಸ ಹೆಚ್ಚುವುದು. ಶೇರು ವ್ಯವಹಾರಗಳಲ್ಲಿ ಲಾಭವಿದೆ. ಲಲಿತಾ ಸಹಸ್ರನಾಮ ಪಠಣ ಮಾಡಿ. 

Weekly Horoscope: ಈ ರಾಶಿಗೆ ಆಸ್ತಿ ವಿಚಾರದಲ್ಲಿ ಮಹತ್ತರ ಸುದ್ದಿ ಸಿಗಲಿದೆ..

ಧನುಸ್ಸು(Sagittarius): ಯಾವ ಕೆಲಸಕ್ಕೂ ಮನೋಬಲ ಕಡಿಮೆ, ಉದಾಸೀನವಾಗಿ ದಿನ ಕಳೆಯುವಿರಿ. ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡಿ ದಿನಾಂತ್ಯದಲ್ಲಿ ಕೊರಗುವರು. ಆಹಾರಕ್ಕಾಗಿ ಖರ್ಚು ಮಾಡುಬಹುದು. ಆರೋಗ್ಯದಲ್ಲಿ ಏರುಪೇರಿಲ್ಲ. ಗಣೇಶನ ದೇವಾಲಯಕ್ಕೆ ಭೇಟಿ ನೀಡಿ. 

ಮಕರ(Capricorn): ರೈತರು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಪ್ರಶಂಸೆ. ಆಹಾರದಲ್ಲಿ ವ್ಯತ್ಯಾಸವಾಗಿ ಉದರ ಸಮಸ್ಯೆಗಳು ಎದುರಾಗಬಹುದು.  ಬಹುಕಾಲದಿಂದ ಪದೇ ಪದೆ ಕಾಣಿಸಿಕೊಳ್ಳುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ. ಬಂಧುಮಿತ್ರರ ಮನೆಗೆ ಭೇಟಿ. ಕುಲ ದೇವರ ಸ್ಮರಣೆ ಮಾಡಿ. 

Healing Temple: ಸರ್ವ ರೋಗ ನಿವಾರಕ, ವೈದ್ಯರಿಗೇ ವೈದ್ಯ ಈ ವೈದ್ಯನಾಥೇಶ್ವರ

ಕುಂಭ(Aquarius): ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಆಧ್ಯಾತ್ಮಿಕವಾಗಿ, ಧಾರ್ಮಿಕವಾಗಿ ತೊಡಗಿಕೊಳ್ಳುವಿರಿ. ಪ್ರಭಾವಿ ಜನರ ಭೇಟಿಯಿಂದ ಬಹು ದಿನಗಳಿಂದ ಹಿಂದೆ ಬಿದ್ದಿದ್ದ ಕೆಲಸ ಮುಂದೆ ಸಾಗಿ ನಿರಾಳವಾಗುವಿರಿ. ಸಾಮಾಜಿಕ ಮನ್ನಣೆಗಳು ಸಿಗಲಿವೆ. ಆಂಜನೇಯನ ಸ್ಮರಣೆ ಮಾಡಿ. 

ಮೀನ(Pisces): ನಿರುದ್ಯೋಗಿಗಳು ಸ್ವಂತ ವ್ಯಾಪಾರ ಆರಂಭಿಸಲು ಶುಭ ದಿನ. ಅಗತ್ಯ ಇರುವವರಿಗೆ ಹಣ, ವಸ್ತ್ರ ದಾನ ಮಾಡಿ. ಮಕ್ಕಳೊಂದಿಗೆ ಸಮಯ ಕಳೆಯುವುದರಿಂದ ಸಂತೋಷ. ಉದ್ಯೋಗದಲ್ಲಿ ಭಡ್ತಿ ಸಿಗಬಹುದು. ಅಲ್ಪ ಶ್ರಮದಿಂದ ಹೆಚ್ಚಿನ ಲಾಭ ಸಿಗಲಿದೆ. ಮನೆದೇವರನ್ನು ಪ್ರಾರ್ಥನೆ ಮಾಡಿ. 

Follow Us:
Download App:
  • android
  • ios