Asianet Suvarna News Asianet Suvarna News

Daily Horoscope: ಈ ರಾಶಿಯವರಿಗೆ ಸಾಂಕ್ರಾಮಿಕ ರೋಗ ಅಪಾಯ

13 ಜನವರಿ 2022, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ತುಲಾ ರಾಶಿಗೆ ದೊಡ್ಡ ಯೋಜನೆಗಳು ಸಿಗಲಿವೆ, ವೃಶ್ಚಿಕಕ್ಕೆ ಆಸ್ತಿ ಗಲಭೆ ಶಮನ

Daily horoscope of January 13th 2022 in Kannada SKR
Author
Bangalore, First Published Jan 13, 2022, 5:00 AM IST
  • Facebook
  • Twitter
  • Whatsapp

ಮೇಷ(Aries): ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಯ ಹೊಸ ಮಾರ್ಗಗಳು ಕಾಣಿಸಬಹುದು. ಅವನ್ನು ಸದ್ಬಳಕೆ ಮಾಡುವತ್ತ ಶಕ್ತಿ ವ್ಯಯಿಸಿ. ಮನರಂಜನೆಗಾಗಿ ಸಮಯ ವ್ಯಯಿಸುವಿರಿ. ವಿದ್ಯಾರ್ಥಿಗಳಿಗೆ ಮಾನಸಿಕ ತುಮುಲಗಳು ಕಾಡಬಹುದು. ಪೋಷಕರ ಸಹಕಾರ ಪಡೆಯಿರಿ. ಗುರು ರಾಯರ ಸ್ಮರಣೆ ಮಾಡಿ. 

ವೃಷಭ(Taurus): ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಎಲ್ಲೋ ಎಡವಿರುವ ಬಗ್ಗೆ ತಿಳಿಯಬಹುದು. ಸಣ್ಣಪುಟ್ಟ ತಿರುಗಾಟದಿಂದ ಸಂತಸ. ಶೇರು ವ್ಯವಹಾರದಲ್ಲಿ ಲಾಭ. ತುಳಸಿಗೆ ಪೂಜೆ ಮಾಡಿ. 

ಮಿಥುನ(Gemini): ಆಧ್ಯಾತ್ಮಿಕ ವಿಷಯಗಳತ್ತ ಒಲವು ಹೆಚ್ಚಲಿದೆ. ಹವ್ಯಾಸಗಳಿಗೆ ಸಮಯ ಹೊಂದಿಸಿಕೊಳ್ಳುವಿರಿ. ಕೈ ಹಾಕಿದ ದೊಡ್ಡ ಯೋಜನೆಯಿಂದ ಹಿಂದೆ ಕಾಲಿಡುವ ಸಾಧ್ಯತೆ ಇದೆ. ಸಹೋದರರ ಸಹಕಾರದಿಂದ ಶುಭ ಕಾರ್ಯಗಳು ಸಾಂಗವಾಗಿ ಜರುಗುವುವು. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಕಟಕ(Cancer): ಸಾಂಕ್ರಾಮಿಕ ರೋಗ ಮನೆ ಮಂದಿಯನ್ನೆಲ್ಲ ಕಾಡಬಹುದು. ವಾತಾವರಣ ಸಂಬಂಧಿ ಗಂಟಲು, ಮೂಗಿನ ಕಿರಿಕಿರಿಗಳೂ ಕಾಣಿಸಬಹುದು. ರೈತರು, ವ್ಯಾಪಾರಸ್ಥರು, ಸಣ್ಣ ಉದ್ಯಮಗಳನ್ನು ಹೊಂದಿರುವವರಿಗೆ ಲಾಭ ಚೆನ್ನಾಗಿರಲಿದೆ. ರಾಮ ನಾಮ ಸ್ಮರಣೆ ಮಾಡಿ. 

ಸಿಂಹ(Leo): ಸಂಗಾತಿಯ ಸಲಹೆ ಪಾಲಿಸಿ ಹೊರಗೆ ತಿರುಗಾಡುವುದನ್ನು ಕಡಿಮೆ ಮಾಡುವಿರಿ. ಮಕ್ಕಳನ್ನು ಹೆಚ್ಚು ಜಾಗರೂಕರಾಗಿ ನೋಡಿಕೊಳ್ಳುವ ಅಗತ್ಯವಿದೆ. ಪರ ನಿಂದನೆಯಲ್ಲಿ ತೊಡಗುವುದರಿಂದ ಯಾವ ಪ್ರಯೋಜನವೂ ಇಲ್ಲ. ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡಿ. 

ಪುತ್ರ ಶನಿಯೊಂದಿಗೆ ಸೂರ್ಯ ಮುನಿಸು ಮರೆತ ದಿನವೇ ಸಂಕ್ರಾಂತಿ

ಕನ್ಯಾ(Virgo): ಆಪ್ತರ ಮಾತು ಪ್ರೇರಣೆಯಾಗಿ ಬದಲಾಗಬಹುದು. ಸಾಲ ಕೊಟ್ಟು ಕೈ ಸುಟ್ಟುಕೊಳ್ಳಬೇಡಿ. ಸಹಾಯ ಬೇಡಿ ಬಂದವರಿಗೆ ಹಣದ ಹೊರತಾಗಿ ಉಳಿದೆಲ್ಲ ರೀತಿಯ ನೆರವು ನೀಡುವುದು ಉತ್ತಮ. ಮನೆಗೆ ನೆಂಟರಿಷ್ಟರು ಬರಬಹುದು. ಬಡವರಿಗೆ ದವಸ ಧಾನ್ಯ ನೀಡಿ. 

ತುಲಾ(Libra): ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ಬಾಕಿ ಕೆಲಸಗಳನ್ನು ಮುಗಿಸುವಿರಿ. ಉದ್ಯಮರಂಗದಲ್ಲಿರುವವರಿಗೆ ದೊಡ್ಡ ಪ್ರಾಜೆಕ್ಟ್ ಕೈಗೆ ಸಿಗಬಹುದು. ಬರುವುದೇ ಇಲ್ಲ ಎಂದುಕೊಂಡ ಹಣ ಅನಿರೀಕ್ಷಿತವಾಗಿ ಹಿಂದಿರುಗುವ ಸಾಧ್ಯತೆ ಇದೆ. ಮನೆಯಲ್ಲಿ ತುಳಸಿ, ತುಂಬೆ ಮತ್ತಿತರೆ ಉತ್ತಮವಾದ ಗಿಡ ನೆಡಿ.

Donate And Get: ಸಂಕ್ರಾಂತಿ ದಿನ ಇವನ್ನು ದಾನ ಮಾಡಿದ್ರೆ ವರ್ಷವಿಡೀ ದುಡ್ಡಿಗೆ ಎಂದೂ ಬರವಿರೋಲ್ಲ!

ವೃಶ್ಚಿಕ(Scorpio): ಸಾಮಾಜಿಕವಾದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಹೆಸರು ಸಿಗುವುದು. ಆಸ್ತಿ ವಿಚಾರದ ಗಲಭೆಗಳು ತಾತ್ಕಾಲಿಕವಾಗಿ ತಣ್ಣಗಾಗುವವು. ಮನೆಯಲ್ಲಿ ಮದುವೆ, ಮುಂಜಿ ಮತ್ತಿತರೆ ಶುಭ ಸಮಾರಂಭಕ್ಕೆ ನಾಂದಿ ಹಾಡುವಿರಿ. ಧನ ಲಾಭವಿರಲಿದೆ. ಲಕ್ಷ್ಮೀ ಪ್ರಾರ್ಥನೆ ಮಾಡಿ.

ಧನುಸ್ಸು(Sagittarius): ಕುಟುಂಬದೊಂದಿಗಿನ ಮುನಿಸು ಮಾತುಕತೆಯ ಬಳಿಕ ಶಮನವಾಗುವುದು. ಆಹಾರದಲ್ಲಿ ಪಥ್ಯ ಅಗತ್ಯ. ಇಲ್ಲದಿದ್ದಲ್ಲಿ ಅನಾರೋಗ್ಯ ಕಾಡಬಹುದು. ಚರ್ಮ ಸಂಬಂಧಿ ಸಮಸ್ಯೆಗಳು ಹೆಚ್ಚುವುವು. ವಾಹನ ಯೋಗವಿದೆ. ನಿಮ್ಮ ಗುರುಹಿರಿಯರ ಸ್ಮರಣೆ ಮಾಡಿ ಆಶೀರ್ವಾದ ಪಡೆಯಿರಿ. 

ಮಕರ(Capricorn): ಕೈ ಕಾಲು ನೋವುಗಳು ಕಡಿಮೆಯಾಗುವುವು. ದೂರ ಪ್ರಯಾಣ ಫಲಕಾರಿಯಲ್ಲ. ವ್ಯಾಪಾರಿಗಳಿಗೆ ಲಾಭದ ದಿನ. ವಿದೇಶದಿಂದ ಸಿಹಿಸುದ್ದಿ ಬರಲಿದೆ. ಶೇರು ವ್ಯವಹಾರಗಳು ಲಾಭಕಾರಿಯಾಗಲಿವೆ. ಸಾಲ ಪಡೆವ ಬದಲು ಆದಾಯ ಮೂಲ ಹೆಚ್ಚಿಸುವ ಬಗ್ಗೆ ಯೋಚಿಸಿ. ಗೋ ಗ್ರಾಸ ನೀಡಿ. 

ಕುಂಭ(Aquarius): ಮೂರನೆಯವರ ಜೀವನದ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸಿದರೆ ಅವಮಾನ, ನೋವು ಅನುಭವಿಸಬೇಕಾಗುತ್ತದೆ. ಮತ್ತೊಬ್ಬರ ಸಂಸಾರದ ಬಗ್ಗೆ ಅತಿ ಕುತೂಹಲ ಬೇಡ. ಉದ್ಯೋಗದಲ್ಲಿ ಆಸಕ್ತಿ ಇರಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತೆ ಹೆಚ್ಚಲಿದೆ. ವಿಷ್ಣು ಸಹಸ್ರನಾಮ ಹೇಳಿಕೊಳ್ಳಿ. 

ಮೀನ(Pisces): ಪತಿಯ ಸಹಕಾರ, ಪ್ರೀತಿ ಮನಸ್ಸನ್ನು ಆವರಿಸುವುದು. ವೈವಾಹಿಕವಾಗಿ ಉತ್ತಮ ದಿನವಿರಲಿದೆ. ಮಕ್ಕಳ ಕಷ್ಟಗಳು ಕೊಂಚ ನೆಮ್ಮದಿ ಭಂಗ ತರಬಹುದು. ಅದನ್ನು ಅವರೇ ಬಗೆ ಹರಿಸಿಕೊಳ್ಳಲು ಶಕ್ತರಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳಿ. ಗುರು ರಾಯರ ಭಜನೆ ಮಾಡಿ. 

Follow Us:
Download App:
  • android
  • ios