Daily Horoscope: ಮಕರ ರಾಶಿಗೆ ಸಾಲದ ಹೊರೆ, ವೃಶ್ಚಿಕಕ್ಕೆ ವೈಮನಸ್ಯ
6 ಫೆಬ್ರವರಿ 2022, ಭಾನುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಈ ರಾಶಿಯವರ ಅಪರಾಧಿ ಚಟುವಟಿಕೆಗಳಿಗೆ ತಕ್ಕ ಶಾಸ್ತಿ
ಮೇಷ(Aries): ಮನರಂಜನೆಗಾಗಿ ಸಮಯ ವ್ಯಯ ಮಾಡುವಿರಿ. ನಿಮ್ಮನ್ನೇ ನಂಬಿ ಬಂದವರನ್ನು ಬರಿಗೈಲಿ ಕಳುಹಿಸಬೇಡಿ. ಕೈಲಾದ ಸಹಾಯ ಮಾಡಿ. ಅಪರಾಧಿ ಚಟುವಟಿಕೆಗಳಿಗೆ ಸರಿಯಾದ ಶಾಸ್ತಿ ಆಗಲಿದೆ. ನಿಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಸಂಚೂ ಬಯಲಾಗಲಿದೆ. ಸೂರ್ಯ ಪ್ರಾರ್ಥನೆ ಮಾಡಿ.
ವೃಷಭ(Taurus): ನಿಮ್ಮ ಬಹುದಿನಗಳ ಬೇಡಿಕೆ ಈಡೇರುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಿಗೆ ಜೊತೆಗಿರುವವರ ಬೆಂಬಲ ದೊರಕುವುದು. ಸತ್ಕಾರ್ಯಗಳಿಗೆ ಯಶಸ್ಸು ಇದ್ದೇ ಇದೆ. ಸಜ್ಜನರ ಸಂಗದಿಂದ ಮನಸ್ಸು ಪ್ರಫುಲ್ಲಿತವಾಗಿರಲಿದೆ. ಸರಸ್ವತಿ ಪೂಜೆ ನಡೆಸಿ.
ಮಿಥುನ(Gemini): ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳಲು ಪ್ರಯಾಸ ಪಡಬೇಕಾಗಬಹುದು. ಮಕ್ಕಳ ಮಾನಸಿಕ ತುಮುಲಗಳೇನು ವಿಚಾರಿಸಿ. ಸಲಹೆಗಳು ಸಾಕಷ್ಟು ಬರಬಹುದು. ನಿಮಗೆ ಯಾವುದು ಒಳ್ಳೆಯದು ಎಂದು ವಿಮರ್ಶಿಸಿ ಮುಂದುವರಿಯಿರಿ. ಆದಿತ್ಯ ಹೃದಯ ಪಠಿಸಿ.
ಕಟಕ(Cancer): ದೇಹಬಲ ಕುಗ್ಗುತ್ತದೆ, ಬುದ್ಧಿ ಮಂದವಾಗುತ್ತದೆ. ಉದಾಸೀನವಾಗಿ ದಿನ ಕಳೆಯುವಿರಿ. ಯುವಕರಿಗೆ ವಿದೇಶದಿಂದ ಸುವಾರ್ತೆ ಕೇಳಿ ಬರಲಿದೆ. ಶತ್ರುಗಳು ನಿಮ್ಮಿಂದ ದೂರಾಗಿ ಮನಸ್ಸಿಗೆ ಸಮಾಧಾನ. ಆರೋಗ್ಯ ಕಿರಿಕಿರಿ ಕಾಣಿಸಿಕೊಳ್ಳಬಹುದು. ಧನ್ವಂತರಿ ಸ್ಮರಣೆ ಮಾಡಿ.
ಸಿಂಹ(Leo): ಅಗ್ನಿ ಸಂಬಂಧಿ ವಿಷಯಗಳಲ್ಲಿ ಜಾಗೃತರಾಗಿರಿ. ವಿದೇಶ ಪ್ರಯಾಣದಲ್ಲಿ ವಿಳಂಬ ಸಾಧ್ಯತೆ. ಆಸ್ತಿ ವಿಚಾರಗಳನ್ನು ಇಂದು ಕೈಗೆತ್ತಿಕೊಳ್ಳಬೇಡಿ. ಮಕ್ಕಳ ಅನಾರೋಗ್ಯದಿಂದಾಗಿ ಮನಸ್ಸಿಗೆ ಕಸಿವಿಸಿಯಾಗಬಹುದು. ಬುದ್ಧಿಯಿಂದ ಕಾರ್ಯ ಸಾಧನೆ. ಸೂರ್ಯ ಪ್ರಾರ್ಥನೆ ಮಾಡಿ.
ಕನ್ಯಾ(Virgo): ಬಹುಕಾಲದ ಆರೋಗ್ಯ ಸಮಸ್ಯೆ ಇದ್ದರೆ ಸ್ವಲ್ಪ ಸುಧಾರಣೆ ಕಂಡು ಬರುವುದು. ಸದಾಚಾರ ಕಾರ್ಯಗಳಲ್ಲಿ ಉತ್ತಮ ಮನಸ್ಸಿನಿಂದ ತೊಡಗುವಿರಿ. ಮನೋಬಲ ಹೆಚ್ಚಿರುವುದರಿಂದ ಅಲ್ಪ ಶ್ರಮದಿಂದ ಕಾರ್ಯ ಸಾಧನೆಯಾಗುವುದು. ವಿಷ್ಣು ಸ್ಮರಣೆ ಮಾಡಿ.
ತುಲಾ(Libra): ಆಪ್ತರೊಂದಿಗೆ ಮಹತ್ತರ ವಿಚಾರಗಳ ಚರ್ಚೆ ನಡೆಸುವುದರಿಂದ ಕೆಲ ನಿರ್ಧಾರಗಳು ಬಲವಾಗುವುವು. ಅನಿರೀಕ್ಷಿತ ಧನ ವ್ಯಯವಾಗುವುದು. ಪತ್ನಿ- ಪುತ್ರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಪರಿಚಿತರಿಂದ ಉದ್ಯಮಕ್ಕೆ ಸಹಾಯ ದೊರೆಯುವುದು. ಹಕ್ಕಿಗಳಿಗೆ ನೀರು, ಕಾಳುಗಳನ್ನು ನೀಡಿ.
ನಿಮಗೆ ಟ್ರಾವೆಲಿಂಗ್ ಹುಚ್ಚಿದ್ಯಾ? ಈ ರಾಶಿಯವರ ಸ್ನೇಹ ಬೆಳೆಸಬಹುದು!
ವೃಶ್ಚಿಕ(Scorpio): ನೆರೆಹೊರೆಯವರ ಜೊತೆ ಜಗಳವಾಡುವ ಸಂಭವವಿದೆ. ಆದಷ್ಟು ಸೌಮ್ಯವಾಗಿ ಮಾತಾನಾಡುವುದರಿಂದ ಸಮಸ್ಯೆ ಬಗೆ ಹರಿವುದು. ಸಂಬಂಧಗಳ ನಡುವೆ ವೈಮನಸ್ಯ ಮೂಡುವ ಸಂದರ್ಭಗಳೆದುರಾಗಬಹುದು. ಯಾರದೋ ಬೆನ್ನ ಹಿಂದೆ ಮಾತಾಡಬೇಡಿ. ಬಡಬಗ್ಗರಿಗೆ ದಾನ ಮಾಡಿ.
ಧನುಸ್ಸು(Sagittarius): ಮಾಡಿದ ಹಳೆಯ ತಪ್ಪಿಗೆ ಇನ್ನೂ ಎಷ್ಟು ದಿನ ಕೊರಗುತ್ತೀರಿ? ಅದಕ್ಕೆ ಪರಿಹಾರ ಏನು ಯೋಚಿಸಿ ಇಲ್ಲವೇ ಸುಮ್ಮನಿದ್ದು ಬಿಡಿ. ಮಕ್ಕಳ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. ಮನೆದೇವರ ಪ್ರಾರ್ಥನೆ ಮಾಡಿ.
ಮಕರ(Capricorn): ಬೇಕೋ ಬೇಡವೋ ಯೋಚಿಸದೆ ಕೊಂಡುಕೊಂಡ ವಸ್ತುಗಳಿಂದ ಎದುರಾದ ಸಾಲದ ಹೊರೆ ಕಂಗೆಡಿಸುವುದು. ಹಣ ಕೈಲಿ ನಿಲ್ಲದೆ ಆತಂಕ ಕಾಡುವುದು. ಸಂಗಾತಿಯೊಂದಿಗೆ ಕೂಲಂಕುಶವಾಗಿ ಸಮಸ್ಯೆಗಳನ್ನು ಚರ್ಚಿಸಿ. ಲಕ್ಷ್ಮೀ ಪ್ರಾರ್ಥನೆ ಮಾಡಿ.
Lord Hanuman: ಸೂರ್ಯ ನಮಸ್ಕಾರ ಮೊದಲು ಕಂಡು ಹಿಡಿದದ್ದೇ ಆಂಜನೇಯ! ಈತನ ಕುರಿತ ಆಸಕ್ತಿಕರ ಸಂಗತಿಗಳಿಲ್ಲಿವೆ..
ಕುಂಭ(Aquarius): ಆಪ್ತರೊಡನೆ ಹರಟೆಯಲ್ಲಿ ಸಮಯ ಕಳೆಯುವಿರಿ. ಉದ್ಯೋಗದಲ್ಲಿ ಏರುಪೇರಿಲ್ಲ. ವ್ಯಾಪಾರ ವಹಿವಾಟಿನಲ್ಲಿ ಕೊಂಚ ಬಹಳ ಲಾಭ. ಸಾಕುಪ್ರಾಣಿಗಳಿಂದ ಮನಸ್ಸಿಗೆ ಸಮಾಧಾನ. ಪ್ರಯಾಣದಿಂದ ಕಾರ್ಯಸಿದ್ಧಿ. ಗಾಯತ್ರಿ ಜಪ ಮಾಡಿ.
ಮೀನ(Pisces): ಸಾಮಾಜಿಕವಾಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ನಿಮ್ಮ ಕೆಲಸ ಕಾರ್ಯಗಳಿಗೆ ಮೆಚ್ಚುಗೆ ದೊರೆಯಲಿದೆ. ರಾಜಕೀಯ ಕ್ಷೇತ್ರದಲ್ಲಿರುವವರು ಏಳ್ಗೆ ಕಾಣುವರು. ಎಣಿಸಿದ ಕಾರ್ಯ ವಿಧಾನಗಳಿಂದ ಹಣದ ಆದಾಯ ಹೆಚ್ಚಲಿದೆ. ಆದಿತ್ಯ ಹೃದಯ ಪಠಣ ಮಾಡಿ.