Asianet Suvarna News Asianet Suvarna News

Daily Horoscope:ಈ ರಾಶಿಗೆ ಇಂದು ಪ್ರಯಾಣದಿಂದ ತೊಂದರೆ

26 ಡಿಸೆಂಬರ್ 2022, ಸೋಮವಾರ, ಸಿಂಹ ರಾಶಿ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ; ಮಕರಕ್ಕೆ ಸಾಲ ನೀಡಿದ್ರೆ ತೊಂದರೆ

Daily Horoscope of  December 26th 2022 in Kannada
Author
First Published Dec 26, 2022, 5:00 AM IST

ಮೇಷ(Aries):ಇಂದು ನೀವು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ವಿವಾಹಿತರಿಗೆ ಅತ್ತೆ -ಮಾವನ ಜೊತೆಗೆ ವೈಮನಸ್ಸು ಉಂಟಾಗುವ ಸಾಧ್ಯತೆ. ಹೀಗಾಗಿ ಆದಷ್ಟು ತಾಳ್ಮೆಯಿಂದ ಇರಲು ಪ್ರಯತ್ನಿಸಿ. ಸ್ಥಳ ಬದಲಾವಣೆಯಿಂದ ಕಿರಿಕಿರಿ ಅನುಭವಿಸುವ ಸಾಧ್ಯತೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ದೊರೆತು ಯಶಸ್ಸು ಸಿಗಲಿದೆ. ಸಮಯದ ಅಭಾವದಿಂದ ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗೋದಿಲ್ಲ.

ವೃಷಭ(Taurus): ಕೆಲವು ಜನರು ನಿಮ್ಮ ಭಾವನೆಗಳ ಜೊತೆಗೆ ಆಟವಾಡುವ ಸಾಧ್ಯತೆಯಿದ್ದು, ಎಚ್ಚರದಿಂದ ಇರಿ. ಮಕ್ಕಳ ಶಿಕ್ಷಣ ಹಾಗೂ ವೃತ್ತಿಗೆ ಸಂಬಂಧಿಸಿದ ಕಾರ್ಯಗಳಿಂದ ವೆಚ್ಚ ಹೆಚ್ಚುವ ಸಾಧ್ಯತೆ. ನಕಾರಾತ್ಮಕ ಯೋಚನೆಗಳು ಮನಸ್ಸಿನಲ್ಲಿ ಮೂಡದಂತೆ ಎಚ್ಚರ ವಹಿಸಿ. ಆತ್ಮವಿಶ್ವಾಸದಿಂದ ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು. ಬೇರೆಯವರ ಮಾತುಗಳಿಗೆ ತಲೆಕೆಡಿಸಿಕೊಳ್ಳದೆ ಮುಂದೆ ಸಾಗಿ. 

ಮಿಥುನ(Gemini): ನಕಾರಾತ್ಮಕ ಮನೋಭಾವ ಹೊಂದಿರುವ ಜನರು ನಿಮ್ಮ ಕೆಲಸಗಳಿಗೆ ವಿಘ್ನ ಉಂಟು ಮಾಡಲಿದ್ದಾರೆ. ಹೀಗಾಗಿ ಇಂಥ ಜನರಿಂದ ಆದಷ್ಟು ದೂರವಿರಿ. ಹೊಸ ಕೆಲಸಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಿ. ತಪ್ಪು ಕಲ್ಪನೆಗಳಿಂದ ವೈವಾಹಿಕ ಸಂಬಂಧದಲ್ಲಿ ವೈಮನಸ್ಸು ಮೂಡುವ ಸಾಧ್ಯತೆ. ರಫ್ತು-ಆಮದಿಗೆ ಸಂಬಂಧಿಸಿದ ಉದ್ಯಮಗಳಲ್ಲಿ ಲಾಭ. ಆರೋಗ್ಯ ಉತ್ತಮ.

ಕಟಕ(Cancer): ಇಂದು ಪ್ರಯಾಣದಿಂದ ತೊಂದರೆ ಎದುರಾಗುವ ಸಾಧ್ಯತೆ. ಇನ್ನೊಬ್ಬರ ವಿಚಾರದಲ್ಲಿ ತಲೆ ಹಾಕದೆ ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ.  ಉದ್ಯಮಕ್ಕೆ ಸಂಬಂಧಿಸಿದ ಕೆಲಸಗಳು ಇಂದು ಹೆಚ್ಚಿರುತ್ತವೆ. ಸಕಾರಾತ್ಮಕ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಯಶಸ್ಸು ಸಿಗಲಿದೆ. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಹೊಂದಿರೋರಿಗೆ ಆರೋಗ್ಯ ಸಮಸ್ಯೆ ಕಾಡಬಹುದು. 

ಜಾತಕದಲ್ಲಿ ಕಾಳ ಸರ್ಪ ದೋಷವಿದ್ಧರೆ ಡಿವೋರ್ಸ್ ಆಗುತ್ತಾ?

ಸಿಂಹ(Leo): ವಿದ್ಯಾರ್ಥಿಗಳಿಗೆ ಅವರು ಬಯಸಿದಂತೆ ಉತ್ತಮ ಫಲಿತಾಂಶ ಸಿಗಲಿದೆ. ದ್ವೇಷ ಅಥವಾ ಭಾವನೆಗಳಿಗೆ ಕಟ್ಟುಬಿದ್ದು ಯಾವುದೇ ನಿರ್ಧಾರ ಕೈಗೊಳ್ಳಬೇಡಿ. ವಾಹನ ಅಥವಾ ಇನ್ಯಾವುದೋ ದುಬಾರಿ ವಸ್ತು ಕೆಟ್ಟುಹೋಗಿ ದೊಡ್ಡ ಪ್ರಮಾಣದ ಖರ್ಚು ಎದುರಾಗಬಹುದು. ಸ್ನೇಹಿತರು ಹಾಗೂ ಬಂಧುಗಳ ವಿಷಯದಲ್ಲಿ ತಲೆ ಹಾಕಬೇಡಿ. ಉದ್ಯಮ ಕೆಲಸಗಳು ಸ್ವಲ್ಪ ನಿಧಾನವಾಗಿ ನಡೆಯಲಿವೆ.

ಕನ್ಯಾ(Virgo):ಕೈಗೆತ್ತಿಕೊಂಡ ಕೆಲಸ ಕಾರ್ಯಗಳ ಮೇಲೆ ಪೂರ್ಣ ಗಮನ ಕೇಂದ್ರೀಕರಿಸಿದ್ರೆ ಯಶಸ್ಸು ಸಿಗಲಿದೆ. ಗುರಿ ಮುಟ್ಟುವ ಕಾರ್ಯದಲ್ಲಿ ಸಹೋದರರು ಬೆಂಬಲ ನೀಡಲಿದ್ದಾರೆ. ಹಣಕಾಸಿನ ಪರಿಸ್ಥಿತಿ ಹದಗೆಟ್ಟು ಮನಸ್ಸಿಗೆ ಬೇಸರ ಮೂಡುವ ಸಾಧ್ಯತೆ. ಉದ್ಯಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಕೆಲವು ಬದಲಾವಣೆಗಳಾಗಲಿವೆ. ಪತಿ ಹಾಗೂ ಪತ್ನಿ ನಡುವೆ ಉತ್ತಮ ಬಾಂಧವ್ಯ.

ತುಲಾ(Libra): ಕೆಲಸದೊತ್ತಡದಿಂದ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗೋದಿಲ್ಲ. ಯಾವುದೇ ಸಮಸ್ಯೆ ಎದುರಾದರೂ ಶಾಂತವಾಗಿ ಬಗೆಹರಿಸಿ, ಇದರಿಂದ ಯಶಸ್ಸು ಸಿಗಲಿದೆ. ಪತಿ ಹಾಗೂ ಪತ್ನಿ ನಡುವೆ ಉತ್ತಮ ಹೊಂದಾಣಿಕೆಯಿಂದ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರಲಿದೆ. ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಮಯ ಸೂಕ್ತವಾಗಿದೆ. 

ವೃಶ್ಚಿಕ(Scorpio): ನಕಾರಾತ್ಮಕ ಚಟುವಟಿಕೆಗಳ ಕಡೆಗೆ ಕೆಲವೊಮ್ಮೆ ಮನಸ್ಸು ವಾಲುವ ಸಾಧ್ಯತೆ. ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಅಗತ್ಯ. ಉದ್ಯೋಗಕ್ಕೆ ಸಂಬಂಧಿಸಿ ನೀವು ಕೈಗೊಳ್ಳುವ ನಿರ್ಧಾರ ಇಂದು ತಪ್ಪು ಎಂದು ಸಾಬೀತಾಗುವ ಸಾಧ್ಯತೆ ಹೆಚ್ಚಿದೆ. ಸಂಗಾತಿಯೊಂದಿಗೆ ಮಧುರ ಸಂಬಂಧ ನಿರ್ವಹಣೆ ಮಾಡುತ್ತೀರಿ. ನಕಾರಾತ್ಮಕ ಭಾವನೆಗಳು ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ.

ಧನುಸ್ಸು(Sagittarius): ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳು ಹೆಚ್ಚಿನ ಗಮನ ನೀಡಬೇಕಾದ ಅಗತ್ಯವಿದೆ. ಕಲೆ, ಸೌಂದರ್ಯ ಮುಂತಾದ ಸೃಜನಶೀಲತೆಗೆ ಸಂಬಂಧಿಸಿದ ಉದ್ಯಮಗಳಲ್ಲಿ ಯಶಸ್ಸು ಸಿಗಲಿದೆ. ಪತಿ ಹಾಗೂ ಪತ್ನಿ ನಡುವೆ ಉತ್ತಮ ಸಂಬಂಧ. ಉದರ ಸಂಬಂಧಿ ಆರೋಗ್ಯ ಸಮಸ್ಯೆ ಕಾಡಬಹುದು.

ಮಕರ(Capricorn): ಯಾರಿಗೂ ಸಾಲ ನೀಡಬೇಡಿ. ಇದರಿಂದ ನಿಮಗೆ ಹಣ ಹಿಂತಿರುಗಿ ಬರುವುದಿಲ್ಲ. ಸಣ್ಣಪುಟ್ಟ ವಿಚಾರಗಳು ನಿಮ್ಮ ಮನಸ್ಸಿನ ನೆಮ್ಮದಿ ಕೆಡಿಸಬಹುದು. ಮನಸ್ಸನ್ನು ನಿಯಂತ್ರಿಸಿ. ಅರ್ಧಕ್ಕೆ ನಿಂತಿರುವ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಯೋಗ ಹಾಗೂ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ. ಕುಟುಂಬ ಸದಸ್ಯರಿಗೆ ಹೆಚ್ಚಿನ ಸಮಯ ನೀಡುತ್ತೀರಿ. 

Vastu colour: ಮನೆಯ ಹೊರ ಗೋಡೆಗೆ ಯಾವ ಬಣ್ಣ ಬಳಸಿದ್ರೆ ಬೆಸ್ಟ್?

ಕುಂಭ(Aquarius): ಮಕ್ಕಳ ಸಮಸ್ಯೆಗಳನ್ನು ಶಾಂತ ರೀತಿಯಿಂದ ಪರಿಹರಿಸಿ. ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿ. ಕೌಟುಂಬಿಕ ಜೀವನ ಖುಷಿಯಿಂದ ಕೂಡಿರುತ್ತದೆ. ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ. ಇನ್ನೊಬ್ಬರ ಭಾವನೆಗಳಿಗೆ ಬೆಲೆ ನೀಡಿ. ಕುಟುಂಬ ಸದಸ್ಯರೊಂದಿಗೆ ಖುಷಿಯಿಂದ ಸಮಯ ಕಳೆಯುತ್ತಿರಿ. 

ಮೀನ(Pisces): ನಿಮ್ಮ ಕೋಪ ಹಾಗೂ ಅಸಹನಯಿಂದ ಸಮಸ್ಯೆಗಳು ಎದುರಾಗುವ ಸಾಧ್ಯತೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹಿರಿಯರು ಹಾಗೂ ಅನುಭವಿ ವ್ಯಕ್ತಿಗಳ ಸಲಹೆಗಳನ್ನು ಪಡೆಯಿರಿ. ಎಲ್ಲರೊಂದಿಗೆ ಖುಷಿಯಿಂದ ಸಮಯ ಕಳೆಯುತ್ತಿರಿ. ಯಾವುದೇ ಕೆಲಸ ಕೈಗೊಂಡರೂ ಅದರಲ್ಲಿ ಯಶಸ್ಸು ಸಿಗಲಿದೆ. ಇನ್ನೊಬ್ಬರ ಕಷ್ಟದಲ್ಲಿ ನೆರವಾಗುತ್ತೀರಿ. 
 

Follow Us:
Download App:
  • android
  • ios