Asianet Suvarna News Asianet Suvarna News

Daily Horoscope: ಧನಸ್ಸಿಗಿಂದು ಅದೃಷ್ಟದ ಬೆಂಬಲ, ತುಲಾ ರಾಶಿಗೆ ಎಚ್ಚರವಾಗಿರಬೇಕಾದ ಕಾಲ..

25 ಡಿಸೆಂಬರ್ 2021, ಶನಿವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ವೃಷಭ ರಾಶಿಯ ಮನಸ್ಸಿಗೆ ಕ್ಲೇಶ, ಕಟಕಕ್ಕೆ ಧನಲಾಭ

Daily horoscope of December 25th 2021 in Kannada SKR
Author
Bangalore, First Published Dec 25, 2021, 5:04 AM IST
  • Facebook
  • Twitter
  • Whatsapp

ಮೇಷ(Aries): ಬರೀ ಮಾತಿನಿಂದ ಮನೆ ಕಟ್ಟಿದರೆ ಉಪಯೋಗವಿಲ್ಲ. ಕೃತಿಯೇ ಮುಖ್ಯ. ಪ್ರಾಮಾಣಿಕ ಪ್ರಯತ್ನಕ್ಕೆ ಎಂದಿಗೂ ಸೋಲಿರುವುದಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ವ್ಯವಹಾರದಲ್ಲಿ ಏರುಪೇರು, ಅಪಘಾತ ಸಾಧ್ಯತೆ ಇದ್ದು, ಜಾಗರೂಕತೆ ಅಗತ್ಯ. ಮನೆದೇವರನ್ನು ಸ್ಮರಿಸಿ. 

ವೃಷಭ(Taurus): ನಿಮ್ಮ ಕೆಲಸ ಕಾರ್ಯಗಳ ಬಗ್ಗೆ ಟೀಕೆ ಕೇಳಬೇಕಾಗುವುದು. ಇದಕ್ಕಾಗಿ ಮನಸ್ಸು ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿಮ್ಮ ಪಾಡಿಗೆ ನೀವು ಸರಿಯಾದದ್ದನ್ನು ಮಾಡಿಕೊಂಡು ಹೋದರೆ ಇಂದು ಟೀಕಿಸಿದವರೇ ಮುಂದೆ ಹೊಗಳುವರು. ಬುದ್ಧಿ ಬಲವಿದೆ. ಘಟನೆಯ ಬಗ್ಗೆ ಪರಾಮರ್ಶಿಸಿ ತಪ್ಪನ್ನು ಬೊಟ್ಟು ಮಾಡದೆ ಮಾತುಕತೆ ನಡೆಸಿ. ಗಣಪತಿಗೆ ದೂರ್ವೆ ಅರ್ಪಿಸಿ.

ಮಿಥುನ(Gemini): ಹೊಸ ವ್ಯಕ್ತಿಗಳ ಪರಿಚಯವಾಗಿ ಮನಸ್ಸು ಮುದಗೊಳ್ಳುವುದು. ನಿಮ್ಮ ಯೋಜನೆ ರೂಪಿಸುವ ಕೌಶಲ್ಯಕ್ಕೆ ಎಲ್ಲರೂ ತಲೆ ತೂಗುವರು. ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಕಾಯ್ದುಕೊಳ್ಳುವಿರಿ. ಬಾಹ್ಯ ಓಡಾಟದಿಂದ ಸಂತಸ. ನವಗ್ರಹ ಶ್ಲೋಕ ಹೇಳಿಕೊಳ್ಳಿ. 

ಕಟಕ(Cancer): ಪ್ರತಿಭೆಗೆ ಅವಕಾಶ ದೊರೆಯುವುದು. ಸದ್ಬಳಕೆ ಮಾಡಿಕೊಳ್ಳಿ. ಮನೆ ಹಿರಿಯರ ಮಾತಿಗೆ ಬೆಲೆ ಕೊಡಿ. ಧನ ಲಾಭವಾಗುವುದು. ವ್ಯಾಪಾರ ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭದಿಂದ ಉತ್ಸಾಹ ಹೆಚ್ಚುವುದು. ಮಕ್ಕಳ ಬಹು ದಿನದ ಬೇಡಿಕೆ ಈಡೇರಿಸುವಿರಿ. ಗಣಪತಿ ಪ್ರಾರ್ಥನೆ ಮಾಡಿ.

Chakras in our body: ದೇಹದ ಏಳು ಚಕ್ರಗಳ ಕೆಲಸವೇನ್ ಗೊತ್ತಾ?

ಸಿಂಹ(Leo): ಹಣದ ಖರ್ಚು ಬಹಳಷ್ಟು ಹೆಚ್ಚುವುದು. ಅನಿರೀಕ್ಷಿತವಾಗಿ ಸ್ನೇಹಿತರ ಭೇಟಿ. ಸಕಾರಾತ್ಮಕ ಧೋರಣೆಯಿಂದ ಜನರ ಮನಸ್ಸನ್ನು ಗೆಲ್ಲುವಿರಿ. ವ್ಯಾಪಾರಿಗಳಿಗೆ ಉತ್ತಮ ಲಾಭ. ಮಕ್ಕಳು, ಮನೆಯವರೊಂದಿಗೆ ಹೆಚ್ಚಿನ ಸಮಯ ಕಳೆದು ಕೆಲ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಿರಿ. ಗಾಯತ್ರಿ ಮಂತ್ರ ಹೇಳಿಕೊಳ್ಳಿ. 

ಕನ್ಯಾ(Virgo): ನಿಧಾನಗತಿಯ ಕೆಲಸಕ್ಕಾಗಿ ಬೈಸಿಕೊಳ್ಳುವಿರಿ. ಅಪರಿಚಿತರೊಡನೆ ಜಗಳ ಮಾಡುವ ಪ್ರಮೇಯ ಎದುರಾಗಬಹುದು. ವಾಹನಗಳಲ್ಲಿ ಹೋಗುವಾಗ ಜಾಗ್ರತೆ ಅಗತ್ಯ. ಕೈಗೊಂಡ ಕಾರ್ಯಗಳಿಗೆ ವಿಘ್ನಗಳು ಎದುರಾಗಬಹುದು. ಕುಟುಂಬದವರೊಡನೆ ತಾಳ್ಮೆಯಿಂದ ವರ್ತಿಸಿ. ಅಗತ್ಯವಿರುವವರಿಗೆ ವಸ್ತ್ರ, ಹಣ ದಾನ ಮಾಡಿ. 

ತುಲಾ(Libra): ಹೊಸ ವ್ಯವಹಾರ ಪ್ರಸ್ತಾಪವನ್ನು ಇಂದು ಒಪ್ಪಿಕೊಳ್ಳದಿರುವುದೇ ಕ್ಷೇಮ. ಪಾಲುದಾರಿಕೆ ಕೆಲಸಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಚಿಂತೆಯೊಂದಕ್ಕೆ ಇಡೀ ದಿನ ವ್ಯಯವಾಗಬಹುದು. ಆದಷ್ಟು ಮನಸ್ಸನ್ನು ಸಕಾರಾತ್ಮಕ ವಿಷಯಗಳ ಹರಿಸಲು ಪ್ರಯತ್ನಿಸಿ. ಶನಿ ಸ್ಮರಣೆ ಮಾಡಿ. 

Pet adoption: ನಿಮ್ಮ ರಾಶಿಗೆ ಯಾವ ಪ್ರಾಣಿ ಸಾಕಿದರೆ ಒಳ್ಳೇದು ನೋಡಿ..

ವೃಶ್ಚಿಕ(Scorpio): ಸಣ್ಣಪುಟ್ಟ ವಿಷಯಗಳಿಗೆ ಸಂಗಾತಿಯೊಂದಿಗೆ ವಾದ, ಮುನಿಸುಗಳು ಎದುರಾಗಬಹುದು. ಸಾಲ ಮಾಡಲು ಹೋಗಬೇಡಿ. ನಿರುದ್ಯೋಗಿಗಳಿಗೆ ಮಾತುಗಳನ್ನು ಕೇಳಬೇಕಾಗಿ ಬಂದು ಬೇಸರ. ಅವಿವಾಹಿತರಿಗೆ ಗೊಂದಲ. ಶಿವ ಪಾರ್ವತಿಯ ಧ್ಯಾನ ಮಾಡಿ. 

ಧನುಸ್ಸು(Sagittarius): ಇಂದು ಅದೃಷ್ಟದ ಬೆಂಬಲ ಸಂಪೂರ್ಣ ನಿಮ್ಮದಾಗಿರುವುದು. ಪ್ರಮುಖ ಜವಾಬ್ದಾರಿಗಳ ಅದ್ಭುತ ನಿರ್ವಹಣೆಗಾಗಿ ಶ್ಲಾಘನೆ ಗಳಿಸುವಿರಿ. ಮನೆಯ ಸದಸ್ಯರೆಲ್ಲರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿನ ಸಂತೋಷ ಹೆಚ್ಚುತ್ತದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ಮಕರ(Capricorn): ವೈವಾಹಿಕ ಜೀವನದಲ್ಲಿ ಸ್ಥಿರತೆ. ಪ್ರೇಮ ವ್ಯವಹಾರಗಳಲ್ಲಿ ಸಂತಸ. ನೆಂಟರಿಷ್ಟರ ಆಗಮನದಿಂದ ಸಂತಸ. ಆಹಾರ ಸಮೃದ್ಧಿ. ಹೊಸ ಹೂಡಿಕೆಯಿಂದ ಫಲವಿದೆ. ಆಸ್ತಿ ಖರೀದಿ ವ್ಯವಹಾರ ಮಾಡಬಹುದು. ಮಾತು ನಯವಾಗಿರಲಿ. ತಾಯಿಯ ಆಶೀರ್ವಾದ ಪಡೆಯಿರಿ. 

ಕುಂಭ(Aquarius): ದೂರ ಪ್ರಯಾಣದಿಂದ ಉಲ್ಲಾಸ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯಲಿದೆ. ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಆರೋಗ್ಯ ಭಾಗ್ಯ ಸುಧಾರಿಸಿ ತೃಪ್ತಿ ಎನಿಸುವುದು. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ. 

ಮೀನ(Pisces): ತಂದೆಯ ಕಡೆಯಿಂದ ಹಣಕಾಸಿನ ಸಹಾಯ. ಆರೋಗ್ಯ ಕಾರಣಗಳಿಗಾಗಿ ಹೆಚ್ಚಿನ ವಿಶ್ರಾಂತಿ ತೆಗೆದುಕೊಳ್ಳಿ. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ. ಪ್ರಗತಿಯ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಅವನ್ನು ತೆರೆದ ಕೈಯಿಂದ ಸ್ವಾಗತಿಸಿ, ಸದ್ಬಳಕೆ ಮಾಡಿಕೊಳ್ಳಿ. ಮನೆ ದೇವರನ್ನು ಪ್ರಾರ್ಥಿಸಿ. 

Follow Us:
Download App:
  • android
  • ios