Asianet Suvarna News Asianet Suvarna News

Daily Horoscope: ಸಿಂಹಕ್ಕೆ ದುಡುಕಿನ ಕೆಲಸದಿಂದ ನೆಮ್ಮದಿ ಹಾಳು, ನಿಮ್ಮ ರಾಶಿಯ ಫಲವೇನಿದೆ ನೋಡಿ..

23 ಡಿಸೆಂಬರ್ 2021, ಗುರುವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಗ್ರಹಚಾರವಿದೆ?
ಹೃದಯ ಕಾಯಿಲೆಗಳ ವಿಷಯದಲ್ಲಿ ತುಲಾ ರಾಶಿ ಎಚ್ಚರಿಕೆ ವಹಿಸುವುದು ಅಗತ್ಯ.

Daily horoscope of December 23rd 2021 in Kannada SKR
Author
Bangalore, First Published Dec 23, 2021, 5:02 AM IST
  • Facebook
  • Twitter
  • Whatsapp

ಮೇಷ(Aries): ಕೆಲಸದಲ್ಲಿ ಹಿರಿಯರಿಂದ ಒತ್ತಡ ಹೆಚ್ಚುವುದು. ಕಷ್ಟ ಪಟ್ಟು ದುಡಿಯುತ್ತಿದ್ದರೂ ಮನೆಯಲ್ಲಿ ಮಾತು ಕೇಳಬೇಕಾಗಿ ಬಂದು ಮನಸ್ಸು ಹಾಳಾಗುವುದು. ಮದುವೆ ಮತ್ತಿತರೆ ಶುಭ ಸಮಾರಂಭಗಳಲ್ಲಿ ಭಾಗಿ ಸಾಧ್ಯತೆ. ವಿಷ್ಣುವಿನ ಪ್ರಾರ್ಥನೆ ಮಾಡಿ. 

ವೃಷಭ(Taurus): ಬಹುಕಾಲದ ಕನಸಿಂದು ನನಸಾಗುವುದು. ದೂರ ಪ್ರವಾಸದಿಂದ ಮನಸ್ಸು ಚೇತೋಹಾರಿಯಾಗುವುದು. ಸ್ನೇಹಿತರ ಭೇಟಿಯಿಂದ ಉಲ್ಲಾಸ. ಬಿಡುವಿಲ್ಲದ ದುಡಿಮೆಗೆ ಕೊಂಚ ವಿಶ್ರಾಂತಿ. ವ್ಯಾಪಾರಿಗಳಿಗೆ ಲಾಭ. ಗುರು ರಾಘವೇಂದ್ರರ ಸ್ಮರಣೆ ಮಾಡಿ. 

ಮಿಥುನ(Gemini): ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಮನಸ್ಸಿಗೆ ಸಮಾಧಾನವೆನಿಸುವುದು. ಕೋರ್ಟ್ ವ್ಯಾಜ್ಯಗಳಲ್ಲಿ ಜಯ ನಿಮ್ಮದಾಗುವುದು. ಕುಟುಂಬದೊಂದಿಗೆ ಪ್ರವಾಸ ಯೋಜನೆಗಳನ್ನು ಮಾಡಲಿರುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ. ಗುರು ಬೃಹಸ್ಪತಿಯ ಸ್ಮರಣೆ ಮಾಡಿ. 

ಕಟಕ(Cancer): ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮನಸ್ಸಿಗೆ ಉಲ್ಲಾಸ. ಸಹೋದ್ಯೋಗಿಗಳ ಸಹಕಾರದಿಂದ ಸುಲಭದಲ್ಲಿ ಕೆಲಸಗಳ ಸಾಧನೆ, ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ. ನೆಂಟರಿಷ್ಟರ ಭೇಟಿ. ಲಕ್ಷ್ಮೀ ವೆಂಕಟೇಶ್ವರ ಪ್ರಾರ್ಥನೆ ಮಾಡಿ. 

Strong spirits: ಈ ರಾಶಿಯವರು ಗಟ್ಟಿ ಮನೋಬಲದ ಜಗಜಟ್ಟಿಗಳು ..

ಸಿಂಹ(Leo): ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳಾಗುವುದು. ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ಹೆಚ್ಚು ಕಾಳಜಿ ವಹಿಸಿ. ನಾನಾ ಕಡೆಗಳಿಂದ, ನಾನಾ ರೀತಿಯಲ್ಲಿ ಖರ್ಚು ವೆಚ್ಚ ಕಂಡುಬಂದು ಚಿಂತೆಗೀಡಾಗುವಿರಿ. ಕೃಷ್ಣನಿಗೆ ತುಳಸಿ ಸಮರ್ಪಿಸಿ.

ಕನ್ಯಾ(Virgo): ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿದ್ದರೆ ಉತ್ತಮ. ಹಣದ ಸ್ಥಿತಿ ಉತ್ತಮವಾಗಿರುತ್ತದೆ. ಸಾಮಾಜಿಕವಾಗಿ ಗೌರವ ದೊರಕುವುದು. ಹಣವನ್ನು ಯೋಚಿಸದೇ ಪೋಲು ಮಾಡಬೇಡಿ. ವಿಷ್ಣು ಸಹಸ್ರನಾಮ ಪಠಣ ಮಾಡಿ. 

ತುಲಾ(Libra): ಕೌಟುಂಬಿಕ ಸೌಕರ್ಯಗಳ ವಿಷಯಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಬಹುದು. ನಿಮಗೆ ಹೃದಯ ಸಂಬಂಧಿ ಕಾಯಿಲೆ ಇದ್ದರೆ, ಈ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಿ. ಸಂಗಾತಿಯ ವಿಷಯದಲ್ಲಿ ಹಟದ ಧೋರಣೆಯಿಂದ ಇಬ್ಬರಿಗೂ ಒಳಿತಾಗುವುದಿಲ್ಲ. ಸರ್ಕಾರಿ ವಲಯದ ಕೆಲಸಗಳಲ್ಲಿ ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ತಾಯಿಯ ಆಶೀರ್ವಾದ ಪಡೆಯಿರಿ. 

Chakras in our body: ದೇಹದ ಏಳು ಚಕ್ರಗಳ ಕೆಲಸವೇನ್ ಗೊತ್ತಾ?

ವೃಶ್ಚಿಕ(Scorpio): ಯಾರೊಂದಿಗಾದರೂ ಏನನ್ನಾದರೂ ಹೇಳುವ ಮೊದಲು ಯೋಚಿಸಿ. ಚರ್ಮ ಸಂಬಂಧಿ ಕಿರಿಕಿರಿಗಳು ಹೆಚ್ಚಲಿವೆ. ತಾಯಿಯ ಸಹಕಾರದಿಂದ ಗೃಹಕೃತ್ಯಗಳು ಸಲೀಸು. ಅತಿಯಾಗಿ ಯೋಚಿಸಿ ನಿರ್ಧಾರಗಳನ್ನೇ ತೆಗೆದುಕೊಳ್ಳದೆ ಉಳಿಯುವುದರಿಂದ ಯಾವ ಪ್ರಯೋಜನವೂ ಇಲ್ಲ. ಬದುಕಿನ ಗತಿ ನಿಮ್ಮ ನಿರ್ಧಾರದ ಮೇಲೆ ನಿಂತಿದೆ. ವಿಷ್ಣು ಸಹಸ್ರನಾಮ ಹೇಳಿ.

ಧನುಸ್ಸು(Sagittarius): ಉದ್ಯೋಗದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ತಾಯಿಯ ಆರೋಗ್ಯಕ್ಕಾಗಿ ವೈದ್ಯರಲ್ಲಿ ಅಲೆದಾಟ. ವಿರೋಧಿಗಳ ಬಗ್ಗೆ ಉದ್ವೇಗಕ್ಕೆ ಒಳಗಾಗಬೇಡಿ. ಹಿರಿಯರ ಮಾರ್ಗದರ್ಶನದಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವಿರಿ. ರಾಮ ಭಜನೆ ಮಾಡಿ. 

ಮಕರ(Capricorn): ಆರೋಗ್ಯದ ವಿಷಯದಲ್ಲಿ ಪರಾವಲಂಬನೆ ಹೆಚ್ಚಾಗಿ ಮನಸ್ಸಿಗೆ ಕ್ಷೇಶ ಆವರಿಸುವುದು. ಹೊಸ ವಸ್ತುಗಳ ಖರೀದಿಯಿಂದ ವೃಥಾ ಖರ್ಚಿನ ಪಶ್ಚಾತ್ತಾಪ ಹೆಚ್ಚುವುದು. ಉದ್ಯೋಗದಲ್ಲಿ ನಷ್ಟ. ದೂರ ಪ್ರಯಾಣದಿಂದ ಆಯಾಸ. ಸಂತಾನ ವಿಷಯದಲ್ಲಿ ಸಕಾರಾತ್ಮಕ ಸುದ್ದಿ ಕೇಳಿ ಬರಲಿದೆ. ಹಸುವಿಗೆ ಹುಲ್ಲು ತಿನ್ನಿಸಿ. 

ಕುಂಭ(Aquarius): ದೂರದ ಊರಿನಿಂದ ನೆಂಟರ ಆಗಮನ. ಮನಸ್ಸಲ್ಲಿ ಗೊಂದಲಗಳು ಹೆಚ್ಚುವುವು. ಮನಸ್ಸನ್ನು ಹದಗೆಡಿಸಿದ್ದ ಸಮಸ್ಯೆಗೆ ಪರಿಹಾರ. ಮಕ್ಕಳ ಅಭಿವೃದ್ಧಿಯಿಂದ ಸಂತಸ. ಮಕ್ಕಳ ವಿಷಯದಲ್ಲಿ ಮತ್ತೊಬ್ಬರು ಅತಿಯಾಗಿ ಮೂಗು ಲತೂರಿಸಲು ಬಿಡಬೇಡಿ. ವಿದ್ಯಾಭ್ಯಾಸದಲ್ಲಿ ಪ್ರಗತಿ. ರಾಘವೇಂದ್ರ ಸ್ವಾಮಿಗಳ ಪ್ರಾರ್ಥನೆ ಮಾಡಿ. 

ಮೀನ(Pisces): ಆರೋಗ್ಯ ಸಂಬಂಧಿ ವಿಷಯಗಳಿಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬರುವುದು. ಮಕ್ಕಳ ಸಹಕಾರದಿಂದ ಕೆಲಸ ಸುಲಭ. ಉದ್ಯೋಗದಲ್ಲಿ ಪ್ರಶಂಸೆ. ಪ್ರಾಮಾಣಿಕತೆಗೆ ಬೆಲೆ ಸಿಗುವುದು. ಆಸ್ತಿ ವಿಚಾರಗಳಲ್ಲಿ ಹಿನ್ನಡೆಯಾಗಿ ಕಸಿವಿಸಿ. ಗಣಪತಿ ಪೂಜೆ ಮಾಡಿ. 
 

Follow Us:
Download App:
  • android
  • ios