Asianet Suvarna News Asianet Suvarna News

Daily Horoscope: ಕನ್ಯಾ ರಾಶಿಯವರು ತಾಳ್ಮೆಗೆಟ್ಟರೆ ಕೆಲಸ ಕೆಟ್ಟೀತು ಎಚ್ಚರ

1  ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ?
ಕುಂಭ ರಾಶಿಗಿಂದು ಸುದಿನ, ಉಳಿದ ರಾಶಿಗಳ ಭವಿಷ್ಯವೇನು?

Daily horoscope of December 1st 2021 in Kannada SKR
Author
Bangalore, First Published Dec 1, 2021, 5:12 AM IST
  • Facebook
  • Twitter
  • Whatsapp

ಮೇಷ(Aries): ಲಾಭ ಸಮೃದ್ಧಿ ಇದೆ. ಸಂಗಾತಿಯ ಸಹಕಾರದಿಂದ ನೆಮ್ಮದಿ, ಪ್ರೀತಿ ವಿಶ್ವಾಸದಿಂದ ಕಾರ್ಯ ಸಾಧನೆ, ಸ್ತ್ರೀಯರ ಮಾರ್ಗದರ್ಶನದಿಂದ ಸರಿಯಾದ ನಿರ್ಧಾರ, ಪ್ರೀತಿಪಾತ್ರರ ಸಮಾಗಮದಿಂದ ಉತ್ಸಾಹ ಹೆಚ್ಚುವುದು. ಹಿಂದಿನ ಕೆಲಸಕಾರ್ಯಗಳ ಬಗ್ಗೆ ಸಿಂಹಾವಲೋಕನ ಅಗತ್ಯವಿದೆ.  ಆಹಾರದಲ್ಲಿ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ. ಅನ್ನಪೂಣೇಶ್ವರಿ ಪ್ರಾರ್ಥನೆ ಮಾಡಿ.

ವೃಷಭ(Taurus): ಉದ್ಯೋಗಿಗಳು ಜಾಗೃತರಾಗಿರಿ, ಸಹೋದ್ಯೋಗಿಗಳಿಂದ ತೊಡಕುಗಳುಂಟಾಗಬಹುದು. ಆದಷ್ಟು ಅವರನ್ನು ಚೆನ್ನಾಗಿ ನಡೆಸಿಕೊಳ್ಳಿ. ತಾಳ್ಮೆ ಕಳೆದುಕೊಳ್ಳಬೇಡಿ. ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ. ಸರಿಯಾದ ಆಹಾರ ಸೇವಿಸಿ. ವ್ಯಾಪಾರಿಗಳಿಗೆ ಸಾಮಾನ್ಯ ಲಾಭ. ದುರ್ಗಾ ಕವಚ ಪಠಿಣದಿಂದ ಒಳಿತಾಗಲಿದೆ.

ಮಿಥುನ(Gemini): ಬುದ್ಧಿವಂತಿಕೆಯಿಂದ ಕಾರ್ಯ ಸಾಧನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲವಿದೆ. ಉನ್ನತ ವ್ಯಾಸಂಗಕ್ಕೆ ಹಲವಾರು ಅವಕಾಶಗಳು ಕಂಡುಬರುತ್ತದೆ. ತಂದೆ-ಮಕ್ಕಳಲ್ಲಿ ವಿರೋಧ. ಇಬ್ಬರೂ ಪರಸ್ಪರ ಮಾತಿನಿಂದ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರೆ ಮಾತ್ರ ನೆಮ್ಮದಿ. ಮನಸ್ಸು ಚಂಚಲವಾಗುತ್ತದೆ. ಈಶ್ವರ ಪ್ರಾರ್ಥನೆ ಮಾಡಿ.

Luck is on the way: ಸಧ್ಯದಲ್ಲೇ ಶ್ರೀಮಂತರಾಗೋ ಅದೃಷ್ಟ ಈ ರಾಶಿಗಳವರದು

ಕಟಕ(Cancer): ಬಲದ ದಿನ, ಹೊಸ ವ್ಯಕ್ತಿಗಳ ಪರಿಚಯದಿಂದ ಸಂತಸ. ಕ್ರೀಡಾಪಟುಗಳಿಗೆ ಹೆಚ್ಚಿನ ಉತ್ಸಾಹ, ಗೌರವ, ಮನ್ನಣೆ. ಹಾಲು-ಹೈನು-ಹೂವಿನ ವ್ಯಾಪಾರಿಗಳಿಗೆ ಅನುಕೂಲ, ವಸ್ತು ನಷ್ಟವೂ ಇದೆ. ಅನಿರೀಕ್ಷಿತ ಶುಭದಿಂದ ಸಂತಸ. ವಿವಾಹಾಕಾಂಕ್ಷಿಗಳಿಗೆ ಮುನ್ನಡೆ. ಗುರು ಪ್ರಾರ್ಥನೆ ಮಾಡಿ ದಿನ ಆರಂಭಿಸಿ. 

ಸಿಂಹ(Leo): ಸಹೋದರರ ಸಹಕಾರವಿದ್ದರೂ ಸಂಗಾತಿಯ ಸಹಕಾರ ಸಿಗದೆ ಮನಸ್ಸು ಕ್ಲೇಶಕ್ಕೊಳಗಾಗಬಹುದು. ವ್ಯಾಪಾರಿಗಳಿಗೆ ಲಾಭ ಕಡಿಮೆ. ಕೆಲವೊಂದು ದುಡುಕಿನ ಕೆಲಸಗಳಿಂದ ನೆಮ್ಮದಿ ಹಾಳು. ದೊಡ್ಡ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬಿಡುವಿಲ್ಲದ ದುಡಿಮೆಯಿಂದ ದೇಹಾಯಾಸ. ಉದ್ಯೋಗಾಕಾಂಕ್ಷಿಗಳಿಗೆ ನಿರಾಸೆ. ಸೂರ್ಯ ಪ್ರಾರ್ಥನೆ ಮಾಡಿ.

ಕನ್ಯಾ(Virgo): ಆಹಾರದಲ್ಲಿ ಸಮೃದ್ಧಿ. ಆರೋಗ್ಯ ಬಲವೂ ಇದೆ. ಆದರೆ, ಧನ ಬಲ ಕಡಿಮೆ ಇರಲಿದೆ. ಶತ್ರುಗಳ ಭಯದಿಂದ ವ್ಯಾಕುಲತೆ. ಕೌಟುಂಬಿಕವಾಗಿ ಸಣ್ಣ ಸಣ್ಣ ವಿಚಾರಗಳು ಮನಸ್ಸಿನ ನೆಮ್ಮದಿಗೆಡಿಸಲಿವೆ.  ತಾಳ್ಮೆ- ಸಂಯಮದಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ತುಸು ಹಿನ್ನೆಡೆ. ಸುದರ್ಶನ ಚಕ್ರ ಪೂಜಿಸಿ.

Vastu for Health: ಆರೋಗ್ಯಕ್ಕಾಗಿ ಈ ದಿಕ್ಕಿನಲ್ಲಿ ತಲೆ ಇಟ್ಟು ಮಲಗಿ

ತುಲಾ(Libra): ಉದ್ಯೋಗಿಗಳಿಗೆ ಬಲ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ಫಲ. ಶೇರಿನಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗುತ್ತದೆ. ಮಕ್ಕಳ ವಿಚಾರದಲ್ಲಿ ಅಸಮಾಧಾನ. ಅವರಿಗೆ  ತಾಳ್ಮೆಯಿಂದ ತಿಳಿ ಹೇಳಿ.  ಅವಿವಾಹಿತರಿಗೆ ಮಾಂಗಲ್ಯಭಾಗ್ಯಕ್ಕೆ ಸಮಯ ಒದಗಿ ಬರುವುದು. ಈಶ್ವರ ಆರಾಧನೆ ಮಾಡಿ.

ವೃಶ್ಚಿಕ(Scorpio): ಪ್ರಯಾಣದಲ್ಲಿ ತೊಡಕು, ಸಾಧ್ಯವಾದಲ್ಲಿ ಪ್ರಯಾಣ ಮುಂದೆ ಹಾಕುವುದು ಉತ್ತಮ. ಹಳ್ಳಿಗಳಲ್ಲಿರುವವರು ಹಾವು, ನೀರಿನ ವಿಷಯದಲ್ಲಿ ಎಚ್ಚರವಾಗಿರಿ. ಕುಟುಂಬದಲ್ಲಿ ಸಹಕಾರ, ಹಲವು ಶುಭ ಕಾರ್ಯಗಳಿಗೆ ಧನ ವಿನಿಯೋಗ. ಮಿಶ್ರಫಲ. ವಿವಾಹಿತರಿಗೆ ಸಂತೋಷದ ದಿನ. ಗ್ರಾಮ ದೇವತೆ ದರ್ಶನ ಮಾಡಿ.

ಧನುಸ್ಸು(Sagittarius): ಕುಟುಂಬ ವರ್ಗದಲ್ಲಿ ವಿಚಾರ ವಿನಿಮಯದಿಂದ ಕಾರ್ಯಸಿದ್ದಿ, ವಾತದಿಂದ ದೇಹಾಯಾಸ. ಋಣದ ಚಿಂತೆ ಬಾಧಿಸಲಿದೆ. ಸ್ತ್ರೀಯರಿಗೆ ಬಹುಕಾಲದ ಕನಸು ಈಡೇರಲಿದೆ. ವ್ಯಾಪಾರಿಗಳಿಗೆ ಲಾಭದ ಅನುಕೂಲ, ಸಂಗಾತಿಯ ಸಹಕಾರದಿಂದ ಕಾರ್ಯಗಳು ಸುಗಮ. ವಿಷ್ಣು ಸಹಸ್ರನಾಮ ಪಠಿಸಿ.

ಮಕರ(Capricorn): ಉದ್ಯೋಗಿಗಳಿಗೆ ಬಲ, ರೈತರಿಗೆ ಕಾರ್ಯಸಿದ್ಧಿ.  ದೂರ ಪ್ರಯಾಣದಿಂದ ಕಾರ್ಯಾನುಕೂಲ. ಅವಿವಾಹಿತರಿಗೆ ಸಿಹಿಸುದ್ದಿ. ಹಣ - ಪ್ರಶಂಸೆ ಸಿಗಲಿದೆ. ಬೆಟ್ಟದಂತೆ ಬಂದ ಕಷ್ಟ ಬೆಣ್ಣೆಯಂತೆ ಕರಗಿ ಹೋಗುವುದು. ಹಾಗಂಥ ಆ ಕಷ್ಟ ಕಲಿಸಿದ ಪಾಠ ಮರೆಯದಿರಿ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.

ಕುಂಭ(Aquarius): ದೇವತಾ ಕಾರ್ಯಗಳಲ್ಲಿ ಭಾಗಿ, ತಂದೆ-ಮಕ್ಕಳಲ್ಲಿ ಪ್ರೀತಿ. ಸಂಗಾತಿಯೊಂದಿಗೆ ಮಾತನಾಡುವಾಗ ಅನ್ಯಮನಸ್ಕರಾಗದಿರಿ. ವಾಹನಯೋಗ. ಮಗುವಿನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಿರಿ. ಮನೆಯ ಬಹುದಿನದ ಅಗತ್ಯಕ್ಕಾಗಿ ಧನ ವಿನಿಯೋಗ. ಶಿವ ಕವಚ ಪಠಿಸಿ, ಉತ್ತಮ ದಿನ.

ಮೀನ(Pisces): ಪರರಿಂದ ವಂಚನೆ, ಮಾನ-ಮನಸ್ಸಿಗೆ ಭಂಗವುಂಟಾಗುವುದು. ಕೋರ್ಟು ಕಚೇರಿ ಕೆಲಸಗಳಲ್ಲಿ ಹಿನ್ನಡೆ. ಹೊಸ ಹೂಡಿಕೆ ಫಲಕಾರಿಯಾಗದು. ಅಧಿಕ ವ್ಯಯ, ನಷ್ಟದ ದಿನ, ವ್ಯವಹಾರದಲ್ಲಿ ಏರುಪೇರು. ಕೌಟುಂಬಿಕವಾಗಿ ಸಮಾಧಾನ. ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ.
 

Follow Us:
Download App:
  • android
  • ios