Asianet Suvarna News Asianet Suvarna News

Daily Horoscope: ತುಲಾ ರಾಶಿಗಿಂದು ಮಾತು ಬುದ್ಧಿಯ ಹಿಡಿತದಲ್ಲಿದ್ದರೆ ಮಾತ್ರ ಮನ್ನಣೆ, ಉಳಿದ ರಾಶಿಗಳ ಫಲವೇನು?

15 ಡಿಸೆಂಬರ್ 2021, ಬುಧವಾರದ ಭವಿಷ್ಯ ಹೇಗಿದೆ?
ಯಾವ ರಾಶಿಗೆ ಶುಭ ಫಲವಿದೆ? ಯಾವ ರಾಶಿಗೆ ಜಾಗರೂಕತೆ ಅಗತ್ಯ?
ಮಿಥುನದ ಪ್ರತಿಭೆಗಳಿಗೆ ಸುದಿನ, ಕುಂಭಕ್ಕೂ ಶುಭ ಸುದ್ದಿ

Daily horoscope of December 15th 2021 in Kannada SKR
Author
Bangalore, First Published Dec 15, 2021, 5:10 AM IST
  • Facebook
  • Twitter
  • Whatsapp

ಮೇಷ(Aries): ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಕ್ಕಿ ಸಂತುಷ್ಟರಾಗುವಿರಿ. ವಿದ್ಯಾರ್ಥಿಗಳಲ್ಲಿ ಹೊಸ ಕಲಿಕೆಯಿಂದ ಉಲ್ಲಾಸ. ಅವಿವಾಹಿತರಿಗೆ ಸಂಬಂಧ ಅರಸಿ ಬರುವುದು. ವಿವಾಹಿತರ ನಡುವೆ ಹಿತಕರ ವಾತಾವರಣ. ಶೇರು ವ್ಯವಹಾರಗಳಲ್ಲಿ ಲಾಭ ನಿರೀಕ್ಷಿಸಬಹುದು. ಲಕ್ಷ್ಮೀ ಅಷ್ಟೋತ್ತರ ಪಠಿಸಿ. 

ವೃಷಭ(Taurus): ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿರಿ. ಒಳ್ಳೆಯ ಭೋಜನ ಸವಿಯುವ ಅವಕಾಶ. ನೆಂಟರಿಷ್ಟರ ಭೇಟಿಯಿಂದ ಸಂತಸ. ಯುವಕರಲ್ಲಿ ಕಾರ್ಯೋತ್ಸಾಹ. ಮಕ್ಕಳಿಗೆ ಹವಾಮಾನ ಕಾರಣದಿಂದ ಅನಾರೋಗ್ಯ ಕಾಡಬಹುದು. ಅಮ್ಮನವರಿಗೆ ಅರ್ಚನೆ ಮಾಡಿಸಿ. 

ಮಿಥುನ(Gemini): ಚಿತ್ರ ಕಲಾವಿದರು, ಗಾಯಕರು, ಕಲೆ ಸಂಬಂಧಿ ಪ್ರತಿಭಾ ರಂಗದಲ್ಲಿರುವವರಿಗೆ ಅವಕಾಶಗಳು ಅರಸಿ ಬರುವುವು. ಚೆನ್ನಾಗಿ ಬಳಸಿಕೊಳ್ಳಿ. ಉದ್ಯೋಗಿಗಳಿಗೆ ಕೆಲಸದಲ್ಲಿ ಸಾಮಾನ್ಯ ಉತ್ಸಾಹ. ವ್ಯಾಪಾರಗಳಲ್ಲಿ ಮಿಶ್ರಫಲ. ಕುಲದೇವರ ಸ್ಮರಣೆ ಮಾಡಿ.

ಕಟಕ(Cancer): ಕುಟುಂಬ ಜೀವನವನ್ನು ತಾಳ್ಮೆ, ಸಮಾಧಾನದಿಂದ ನಿಭಾಯಿಸಿ. ಪತಿ/ಪತ್ನಿಯೊಂದಿಗೆ ಸಿಡುಕುತನ ತೋರಬೇಡಿ. ಆಗ ಮಾತ್ರ ಮನೆಯಲ್ಲಿ ನೆಮ್ಮದಿ ನೆಲೆಸಲು ಸಾಧ್ಯ. ಎಲೆಕ್ಟ್ರಾನಿಕ್ ವಸ್ತುಗಳು ದುರಸ್ತಿಗೆ ಬರಬಹುದು. ರೈತರು, ವ್ಯಾಪಾರಸ್ಥರಿಗೆ ನಷ್ಟದ ದಿನ. ಲಕ್ಷ್ಮೀವೆಂಕಟೇಶ್ವರ ಪ್ರಾರ್ಥನೆ ಮಾಡಿ. 

Traits and Zodiac signs: ಶ್, ಮಾತಾಡುವಾಗದ ಜಾಗ್ರತೆ! ಈ ರಾಶಿಗಳ ಬಾಯಲ್ಲಿ ಗುಟ್ಟು ನಿಲ್ಲೋಲ್ಲ

ಸಿಂಹ(Leo): ನಿಮ್ಮ ಸಮರ್ಪಣೆ ಮತ್ತು ಪ್ರಾಮಾಣಿಕತೆ ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಹಾಗಿದ್ದೂ ಮಾತಿನ ಮೇಲೆ ನಿಗಾ ಅಗತ್ಯ. ಹಿರಿಯರಿಗೆ ಅಗೌರವ ತೋರುವುದು, ಅವರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡುವುದು ಮಾಡಬೇಡಿ. ಹಿರಿಯರ ಆಶೀರ್ವಾದವೇ ಬಲವಾಗುವುದು ಎಂದು ನೆನಪಿಡಿ. ಗಾಯಂತ್ರಿ ಮಂತ್ರ ಹೇಳಿಕೊಳ್ಳಿ. 

ಕನ್ಯಾ(Virgo): ಆರೋಗ್ಯವು ಸಾಮಾನ್ಯವಾಗಿರುತ್ತದೆ. ಬದಲಾಗುತ್ತಿರುವ ಋತುವಿನಲ್ಲಿ ಅಜಾಗರೂಕತೆ ಬೇಡ. ಆದಷ್ಟು ಸಾತ್ವಿಕ ಆಹಾರ, ಕಷಾಯಗಳನ್ನೇ ಸೇವಿಸಿ. ಅವಿವಾಹಿತರಿಗೆ ಸುದಿನ. ಉದ್ಯೋಗಸ್ಥರಿಗೆ ಧನಲಾಭವಿದೆ. ಮೇಲಧಿಕಾರಿಯಿಂದ ಪ್ರಶಂಸೆಯೂ ಇರಲಿದೆ. ಕೃಷ್ಣನಿಗೆ ತುಳಸಿ ಅರ್ಪಿಸಿ. 

ತುಲಾ(Libra): ನಿಮ್ಮ ಮಾತಿನ ಮೇಲೆ ಹಿಡಿತವಿರಲಿ, ಯಾರಿಗೆ ಏನೇ ಹೇಳುವ ಮೊದಲು ಯೋಚಿಸಿ. ನಾಲಿಗೆ ಕುಲ ಹೇಳುವುದು ಎಂದು ಮರೆಯದಿರಿ. ಗೌರವ ಕೊಟ್ಟರೆ ಗೌರವ ತಾನಾಗೇ ಪ್ರಾಪ್ತಿಯಾಗುವುದು. ಆಸ್ತಿ ವ್ಯವಹಾರಗಳಲ್ಲಿ ಮಿಶ್ರಫಲವಿದೆ. ಗಣಪತಿಗೆ ದೂರ್ವೆ ಸಮರ್ಪಿಸಿ. 

Remedies For Peace At Home: ಮನೆಯಲ್ಲಿ ಸಂತೋಷವಿಲ್ಲವೇ? ಹೀಗ್ ಮಾಡಿ..

ವೃಶ್ಚಿಕ(Scorpio): ಹೊಸ ತಂತ್ರಜ್ಞಾನ ಮತ್ತು ಜ್ಞಾನವನ್ನು ಪಡೆಯುವ ಬಯಕೆ ಇರುತ್ತದೆ.  ಜೀವನ ಸಂಗಾತಿಯಿಂದ ಪ್ರೀತಿ ಮತ್ತು ಸಹಕಾರದ ವಿಷಯದಲ್ಲಿ ದಿನವು ಅದ್ಭುತವಾಗಿದೆ. ಮಹಿಳೆಯರಿಗೆ ಅನಾರೋಗ್ಯ ಕಾಡಬಹುದು. ಸಾಮಾಜಿಕ ಮನ್ನಣೆ ಸಿಗಲಿದೆ. ಸರಸ್ವತಿ ಶ್ಲೋಕ ಹೇಳಿಕೊಳ್ಳಿ.

ಧನುಸ್ಸು(Sagittarius): ನಿಮ್ಮ ಆದಾಯವನ್ನು ಗಮನದಲ್ಲಿಟ್ಟು ಖರ್ಚು ಮಾಡಿ. ಸೇವಿಂಗ್ಸ್ ಎಂಬುದು ಇರಲೇಬೇಕು ಎಂದು ಮರೆಯದಿರಿ. ಮಕ್ಕಳ ವಿಷಯದಲ್ಲಿ ಕೆಲ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಿರಿ. ವೈದ್ಯ ವೃತ್ತಿಯಲ್ಲಿರುವವರಿಗೆ ದೇಹಾಯಾಸ. ಗಣಪತಿಗೆ ಕಡಲೆ ನೈವೇದ್ಯ ಮಾಡಿ. 

ಮಕರ(Capricorn): ಉದ್ಯೋಗ ವ್ಯವಹಾರದಲ್ಲಿ ಅನೇಕ ರೀತಿಯ ಕೆಲಸಗಳ ಜವಾಬ್ದಾರಿ ನಿಮ್ಮ ಮೇಲೆ ಬೀಳಬಹುದು. ಹೊರೆ ಎಂದುಕೊಳ್ಳದೆ ನಿಮ್ಮ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ ಎಂದು ಪರಿಗಣಿಸಿ. ನಡೆಯುವಾಗ ಜಾಗ್ರತೆ. ಸಂಗಾತಿಯ ಸಹಕಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಲಾಭ. ನವಗ್ರಹ ಸ್ಮರಿಸಿ. 

ಕುಂಭ(Aquarius): ಬಹುಕಾಲದ ಕನಸು ಈಡೇರಲಿದೆ. ನಿರೀಕ್ಷಿಸುತ್ತಿರುವ ದಂಪತಿಗಳಿಗೆ ಸಂತಾನ ವಿಷಯದಲ್ಲಿ ಶುಭಸುದ್ದಿ ಸಿಗಬಹುದು. ನಿರುದ್ಯೋಗಿಗಳಿಗೆ ಒಳ್ಳೆಯ ಕೆಲಸ ಸಿಗಲಿದೆ. ಅವಿವಾಹಿತರಿಗೂ ಸಂಬಂಧ ಕೂಡಿ ಬರಲಿದೆ. ಶಿವಪಾರ್ವತಿಯ ಧ್ಯಾನ ಮಾಡಿ. ಸಾಧ್ಯವಾದರೆ ದೇವಾಲಯಕ್ಕೆ ಭೇಟಿ ನೀಡಿ.

ಮೀನ(Pisces): ವಾಹನಗಳಲ್ಲಿ ಓಡಾಡುವಾಗ ಹೆಚ್ಚಿನ ಜಾಗ್ರತೆ ಅಗತ್ಯ. ಅನಾರೋಗ್ಯದಿಂದ ಅಸ್ಪತ್ರೆಗಳಿಗೆ ಅಲೆದಾಡಬೇಕಾಗಿ ಬರಬಹುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಹಿನ್ನಡೆ. ಪ್ರಮುಖ ನಿರ್ಧಾರಗಳಿಗೆ ಸೂಕ್ತ ದಿನವಲ್ಲ. ಮಕ್ಕಳ ಕಡೆಯಿಂದ ನೆರವು ಸಿಕ್ಕಿ ಸಮಾಧಾನ. ಲಲಿತ ಸಹಸ್ರನಾಮ ಪಠಣ ಮಾಡಿ.
 

Follow Us:
Download App:
  • android
  • ios