Asianet Suvarna News Asianet Suvarna News

Daily Horoscope: ಇಂದು ಯಾವ ರಾಶಿಗೆ ಸಿಗಲಿದೆ ಶುಭ ಸುದ್ದಿ..?

ಕುಂಭ ರಾಶಿಯವರ ಖ್ಯಾತಿ ಇಂದು ಹೆಚ್ಚಾಗಲಿದೆ. ವೃಶ್ಚಿಕ ರಾಶಿಯವರಿಗೆ ಬಿಡುವಿಲ್ಲದ ಕೆಲಸ. ಮಾನಸಿಕ ತೊಳಲಾಟದಲ್ಲಿ ತುಲಾ ರಾಶಿಯವರಿದ್ರೆ, ಹಣಕಾಸಿನ ವಿಷ್ಯದಲ್ಲಿ ಎಚ್ಚರಿಕೆ ಧನು ರಾಶಿಯವರಿಗೆ ಅಗತ್ಯ.
 

Daily Horoscope Of August 9th 2022 In Kannada know how you be having
Author
Bangalore, First Published Aug 9, 2022, 5:00 AM IST

ಮೇಷ (Aries) : ಮೇಷ ರಾಶಿಯವರಿಗೆ ಇಂದಿನ ದಿನ ಮಿಶ್ರಫಲ ಸಿಗಲಿದೆ. ಆತ್ಮವಿಶ್ವಾಸವಿದ್ದರೆ ಎಲ್ಲ ಸಮಸ್ಯೆ ಪರಿಹಾರವಾಗಲಿದೆ. ದಿನದ ಆರಂಭದಲ್ಲಿ ಕೆಲವು ತೊಂದರೆಗಳು ಎದುರಾಗುತ್ತವೆ. ಉತ್ತಮ ನಿರ್ಣಯ ನಿಮ್ಮ ಕೈ ಹಿಡಿಯಲಿದೆ. ಸ್ನೇಹಿತರು ಅಥವಾ ಸಹವರ್ತಿಗಳ ಜೊತೆ ನಡೆಸುವ ಮಾತುಕತೆ ಪ್ರಯೋಜನಕಾರಿಯಾಗಲಿದೆ. ಯಾವುದೇ ಸಮಸ್ಯೆ ಇದ್ದಕ್ಕಿದ್ದಂತೆ ಉದ್ಭವಿಸಬಹುದು.  ಕುಟುಂಬದ  ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಪತಿ-ಪತ್ನಿಯರ ನಡುವೆ ಭಾವನಾತ್ಮಕ ಸಂಬಂಧ ಗಟ್ಟಿಯಾಗಲಿದೆ. 

ವೃಷಭ (Taurus) : ಈ ದಿನ ವೃಷಭ ರಾಶಿಯವರಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಈ ದಿನ ನಿಮಗೆ ಗ್ರಹಗಳ ಸಂಚಾರವು ತುಂಬಾ ಅನುಕೂಲಕರವಾಗಿದೆ. ಕೆಲಸದ ಮೇಲಿನ ಉತ್ಸಾಹ  ನಿಮಗೆ ಯಶಸ್ಸು ನೀಡುತ್ತದೆ. ಇಂದು ಕುಟುಂಬದೊಂದಿಗೆ ಅಮೂಲ್ಯವಾದದ್ದನ್ನು ಖರೀದಿಸುವ ಸಾಧ್ಯತೆಯಿದೆ. ಯಾವುದೇ ತಪ್ಪು ನಿರ್ಧಾರವನ್ನು ತರಾತುರಿಯಲ್ಲಿ ತೆಗೆದುಕೊಳ್ಳುವುದು ತೊಂದರೆಗೆ ಕಾರಣವಾಗಬಹುದು. ಯುವಕರಿಗೆ ಹೊಸ ಉದ್ಯೋಗಾವಕಾಶ ಲಭಿಸಲಿದೆ. ಸಣ್ಣ ತಪ್ಪು ತಿಳುವಳಿಕೆಗಳು ಪತಿ-ಪತ್ನಿ ಸಂಬಂಧದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಬಹುದು.

ಮಿಥುನ (Gemini): ಇಂದು ಆರೋಗ್ಯದಲ್ಲಿ ಚೇತರಿಕೆ ಕಾಣಲಿದೆ. ಹೊಸ ಕೆಲಸ ಪ್ರಾರಂಭಿಸಲು ಒಳ್ಳೆ ಸಮಯ. ಸಾಮಾಜಿಕ ಮತ್ತು ವೃತ್ತಿಪರ ಸ್ಥಳಗಳಲ್ಲಿ ಪ್ರಾಬಲ್ಯವಿರಲಿದೆ. ಆಪ್ತರೊಂದಿಗೆ ಸಭೆ ನಡೆಯಲಿದೆ. ಆಸ್ತಿ ಖರೀದಿಗೆ ಒಳ್ಳೆಯ ಸಮಯ ಇದಲ್ಲ. ವ್ಯವಹಾರದಲ್ಲಿ ಹೊಸ ಪ್ರಯೋಗ ಮಾಡಿ. 

ಕಟಕ (Cancer) : ಇಂದು ಮಿಶ್ರ ಫಲ ಲಭಿಸಲಿದೆ. ಶಾಂತಿಯಿಂದ ಸಮಸ್ಯೆ ಪರಿಹರಿಸಿಕೊಂಡ್ರೆ ಒಳ್ಳೆಯದು. ಪ್ರಮುಖ ವ್ಯಕ್ತಿ ಭೇಟಿ ಹಾಗೂ ಮಾರ್ಗದರ್ಶನದಿಂದ ತೊಂದರೆ ಪರಿಹಾರವಾಗಲಿದೆ. ಆತ್ಮೀಯ ವ್ಯಕ್ತಿಯ ಆರೋಗ್ಯ ಏರುಪೇರು ನಿಮ್ಮನ್ನು ನಿರಾಶೆಗೊಳಿಸಬಹುದು. ಸಾಲಕ್ಕೆ ಕೈ ಹಾಕ್ಬೇಡಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. 

ಮೇಲಿಂದ ಕೆಳಗೆ ಬೀಳ್ತಿರೋ ಕನಸು ಪದೆ ಪದೇ ಕಾಣ್ತಿದೆಯಾ?

ಸಿಂಹ (Leo):  ಇಂದು ಭಾವನೆಗಿಂತ ಬುದ್ಧಿವಂತಿಕೆಗೆ ಬೆಲೆ ನೀಡಿ. ವಿಚೇಚನೆಯಿಂದ ವರ್ತಿಸಿದ್ರೆ ಕೆಲಸ ಸಾಧ್ಯ. ವ್ಯಕ್ತಿತ್ವ ಮತ್ತು ಜಾಣ್ಮೆಯೇ ಇಂದು ಆಕರ್ಷಣೆಯಾಗಲಿದೆ. ನಿಮ್ಮ ಕೆಲಸವನ್ನು ಇಂದು ಪೂರ್ಣಗೊಳಿಸಿ. ಯೋಜನೆ ಶುರು ಮಾಡುವ ಮೊದಲು ಕುಟುಂಬದ ಸಲಹೆ ಪಡೆಯಿರಿ. ಹಣದ ವ್ಯವಹಾರದಲ್ಲಿ ವಂಚನೆಗೊಳಗಾಗುವ ಸಾಧ್ಯತೆಯಿದೆ.  

ಕನ್ಯಾ(Virgo):  ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ. ಕೆಲವು ಪ್ರಮುಖ ಕೌಟುಂಬಿಕ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. ಭೂಮಿಗೆ ಸಂಬಂಧಿಸಿದ ಕೆಲಸಗಳಲ್ಲಿ ಹೂಡಿಕೆ ಮಾಡಲು ಸೂಕ್ತ ಸಮಯ. ನಿಮ್ಮ ನಕಾರಾತ್ಮಕ ವಿಷ್ಯ ಕುಟುಂಬಕ್ಕೆ ತೊಂದರೆ ತರಬಹುದು. ಯುವಕರು ತಪ್ಪು ಚಟುವಟಿಕೆಗಳಲ್ಲಿ ಸಮಯ ವ್ಯರ್ಥ ಮಾಡಬಾರದು.  

ತುಲಾ (Libra): ಇಂದು ವೈಯಕ್ತಿಕ ಕೆಲಸಗಳಿಗೆ ಗಮನ ಕೊಡಿ. ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಸಾಮಾಜಿಕ ಚಟುವಟಿಕೆಗಳಲ್ಲಿ  ವಿಶೇಷ ಕೊಡುಗೆ ನೀಡುವ ಸಾಧ್ಯತೆಯಿದೆ. ಗೌರವ ಸಿಗಲಿದೆ. ನೆರೆಹೊರೆಯವರೊಂದಿಗೆ ಯಾವುದೇ ವಾದಕ್ಕೆ ಇಳಿಯಬೇಡಿ.  ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವವುಂಟಾಗಬಹುದು. ಸಣ್ಣ ವಿಷಯಗಳಿಗೆ ಕೋಪಗೊಳ್ಳುವ ಬದಲು ತಾಳ್ಮೆ ಮತ್ತು ಸಂಯಮವನ್ನು ಕಾಪಾಡಿಕೊಳ್ಳಿ. 

Zodiac Signs: ಸಂಗಾತಿಗೆ ಸುಳ್ಳು ಹೇಳೋದ್ರಲ್ಲಿ ಈ ರಾಶಿಯವರು ನಿಸ್ಸೀಮರು

ವೃಶ್ಚಿಕ (Scorpio):  ಬಿಡುವಿಲ್ಲದ ದಿನಚರಿ ಇಂದು ನಿಮ್ಮದಾಗಲಿದೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಸ್ವಲ್ಪ ಸಮಯವನ್ನು ಕಳೆಯುವುದರಿಂದ ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿ ಸಿಗುತ್ತದೆ. ಇತರರ ತೊಂದರೆಗಳಲ್ಲಿ ಹಸ್ತಕ್ಷೇಪ ಮಾಡಬೇಡಿ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ. ಒತ್ತಡದ ಸಂದರ್ಭಗಳಿಂದ ನಿಮ್ಮನ್ನು ದೂರವಿಡಿ.

ಧನುಸ್ಸು(Sagittarius) :  ಇಂದು ಒಳ್ಳೆಯ ಸುದ್ದಿ ಕಿವಿಗೆ ಬೀಳುವ ಸಾಧ್ಯತೆಯಿದೆ. ಹೊಸ ಯೋಜನೆ ಪ್ರಾರಂಭಿಸಲು ಸರಿಯಾದ ಸಮಯ. ವಿದ್ಯಾರ್ಥಿಗಳು  ಯೋಜನೆಗಳಲ್ಲಿ ಯಶಸ್ಸನ್ನು ಸಾಧಿಸುವ ಸಮಯ. ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಿ. ಅತಿಯಾದ ಕೆಲಸವು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.  

ಮಕರ (Capricorn):  ಮನಸ್ಸಿನ ಭಾವನೆಗೆ ಇಂದು ಹೆಚ್ಚು ಮಹತ್ವ ನೀಡಿ. ಆಸ್ತಿ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಇಂದು ಬಗೆಹರಿಸಿಕೊಳ್ಳಿ. ಮಕ್ಕಳು ಅಥವಾ ಕುಟುಂಬದ ಸದಸ್ಯರ ನಕಾರಾತ್ಮಕ ಚಟುವಟಿಕೆ  ಆತಂಕ ಉಂಟುಮಾಡುತ್ತದೆ. ಸಮಸ್ಯೆಯನ್ನು ಶಾಂತವಾಗಿ ಪರಿಹರಿಸಲು ಪ್ರಯತ್ನಿಸಿ.  ಕೆಲಸದ ಕ್ಷೇತ್ರದಲ್ಲಿ ನಿಮ್ಮ ಉಪಸ್ಥಿತಿಯು ತುಂಬಾ ಅವಶ್ಯಕವಾಗಿದೆ.

ಕುಂಭ (Aquarius) : ಇಂದು ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಮನಸ್ಸಿನಲ್ಲಿ ಇದ್ದ ಸಂದಿಗ್ಧತೆ ದೂರವಾಗುತ್ತದೆ. ಸಣ್ಣ ಮತ್ತು ದೊಡ್ಡ ನಕಾರಾತ್ಮಕ ವಿಷಯಗಳಿಗೆ ಗಮನ ಕೊಡಬೇಡಿ. ಇಂದು ಪ್ರಯಾಣಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮವನ್ನು ಮಾಡಬೇಡಿ.

ಮೀನ (Pisces) : ಈ ದಿನವು ಆಹ್ಲಾದಕರ ಘಟನೆಯೊಂದಿಗೆ ಪ್ರಾರಂಭವಾಗಲಿದೆ. ಇಡೀ ದಿನ ಸರಾಗವಾಗಿ ಕಳೆಯುತ್ತದೆ. ಆದಾಯ ಮತ್ತು ಖರ್ಚು ಸಮಾನವಾಗಿರುತ್ತದೆ. ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗೆ ಪರಿಹಾರವೂ ಸಿಗಲಿದೆ. ನಕಾರಾತ್ಮಕ ಚಟುವಟಿಕೆಯ ಜನರೊಂದಿಗೆ ಸಮಯವನ್ನು ವ್ಯರ್ಥ ಮಾಡಬೇಡಿ.  ಧನಾತ್ಮಕ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಕೆಲಸ ಕ್ಷೇತ್ರದಲ್ಲಿ ಉತ್ತಮ ಫಲ ಸಿಗಲಿದೆ. 

Follow Us:
Download App:
  • android
  • ios