ಮೇಷ: ಸ್ವಾರ್ಥಿಗಳ ಸ್ವಾರ್ಥ ಸಾಧನೆಗೆ ನೀವು ಬಳಕೆಯಾಗುವ ಅವಕಾಶವಿದೆ. ಎಚ್ಚರಿಕೆಯಿಂದ ಇರಿ. ಮಾತಿಗಿಂತ ಮೌನ ಲೇಸು.

ವೃಷಭ: ಎಲ್ಲವೂ ನನ್ನಿಂದಲೇ ಎನ್ನುವ ಅಹಂ ಬೇಡ. ನಿಮ್ಮ ಹಿತ ಬಯಸುವ ವ್ಯಕ್ತಿಗಳ ಮಾತಿಗೆ ಬೆಲೆ ನೀಡಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಿಥುನ: ಸಂಬಂಧಗಳಲ್ಲಿ ಲಾಭ-ನಷ್ಟದ ಲೆಕ್ಕಾಚಾರ ಹಾಕದಿರಿ. ದಿನ ಪೂರ್ತಿ ಕಾರ್ಯ ಮಗ್ನರಾಗಲಿದ್ದೀರಿ. ಅತಿಯಾದ ಕೋಪ ಬೇಡ.

ಕಟಕ: ಇಡೀ ದಿನ ಹೆಚ್ಚು ಕ್ರಿಯಾಶೀಲವಾಗಿಇರಲಿದ್ದೀರಿ. ತಾಯಿಯ ಸಹಕಾರದಿಂದ ಕೆಲಸದಲ್ಲಿ ಪ್ರಗತಿ ಸಾಧ್ಯವಾಗಲಿದೆ.

ಈ ರಾಶಿಯವರಿಗೆ ಸಂಬಂಧದಲ್ಲಿ ಅಭದ್ರತೆ ಹೆಚ್ಚು, ನಿಮ್ಮ ರಾಶಿ ಇದೆಯಾ?

ಸಿಂಹ: ದಾಂಪತ್ಯದಲ್ಲಿ ವ್ಯತ್ಯಾಸಮಾತಿನಿಂದ ತೊಡಕು, ಬುದ್ಧಿಶಕ್ತಿಯಿಂದ ಲಾಭ, ಭಗವದ್ಗೀತಾ ಪಾರಾಯಣ ಮಾಡಿ

ಕನ್ಯಾ: ಕಾರ್ಯ ಸಾಧನೆಯಲ್ಲಿ ಯಶಸ್ಸು, ಶತ್ರುಗಳೂ ಕೂಡ ಸಹಕಾರ ನೀಡುತ್ತಾರೆ, ಋಣ ಹರ ಗಣಪತಿ ಸ್ತೋತ್ರ ಪಠಿಸಿ

ತುಲಾ: ಶ್ರಮದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಕುಟುಂಬದವರೊಂದಿಗೆ ಎಚ್ಚರದಿಂದ ಮಾತನಾಡಿ, ಈಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ: ಆರೋಗ್ಯದಲ್ಲಿ ವ್ಯತ್ಯಾಸ, ಆಹಾರದಲ್ಲಿ ಜಾಗ್ರತೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಈ ಐದು ರಾಶಿಯವರು ಸಖತ್ ಸೋಮಾರಿಗಳು…! ನಿಮ್ಮ ರಾಶಿಯೂ ಇದ್ಯಾ?

ಧನಸ್ಸು: ಕೋಪ ಅತಿಯಾದರೆ ಅದರಿಂದ ಅನಾಹುತವೇ ಹೆಚ್ಚು. ಗಡಿಬಿಡಿಯಲ್ಲಿ ಯಾವುದೇ ಕೆಲಸವನ್ನು ಮಾಡಬೇಡಿ. ತಾಳ್ಮೆ ಇರಲಿ.

ಮಕರ: ನಿಮ್ಮ ಗುಣಕ್ಕೆ ಹೊಂದುವಂತಹ ಕೆಲಸವೇ ಇಂದು ದೊರೆಯಲಿದೆ. ಸಹಾಯ ಮಾಡಿದವರಿಗೆ ಕೃತಜ್ಞತೆಯಿಂದ ನಡೆದುಕೊಳ್ಳಿ.

ಕುಂಭ: ನಿಮ್ಮಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ. ಒಳ್ಳೆಯ ಗುಣಕ್ಕೆ ಬೆಲೆ ಇದ್ದೇ ಇರುತ್ತದೆ. ನೆಮ್ಮದಿಯಾಗಿ ಇರಲಿದ್ದೀರಿ.

ಮೀನ: ಸೂಕ್ತ ಸಂದರ್ಭ ನೋಡಿಕೊಂಡು ಒಳ್ಳೆಯ ಕಾರ್ಯ ಮಾಡಲು ಮುಂದಾಗಿ. ನಿಮ್ಮ ಗೆಲುವು ಮತ್ತೊಬ್ಬರಿಗೆ ಸ್ಫೂರ್ತಿಯಾಗಲಿದೆ.